Advertisement

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಶಾಸಕ ತೇಲ್ಕೂರ ಆಯ್ಕೆ

09:43 PM Jan 08, 2021 | Team Udayavani |

ಕಲಬುರಗಿ: ಇಲ್ಲಿನ ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಅಧ್ಯಕ್ಷರಾಗಿ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ  ಹಾಗೂ ಎನ್ಇಕೆಎಸ್ಆರ್ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಆಯ್ಕೆಯಾಗಿದ್ದಾರೆ.

Advertisement

ಶಾಸಕ ತೇಲ್ಕೂರ ಅಧ್ಯಕ್ಷರಾಗುವುದರೊಂದಿಗೆ ಪ್ರಥಮ ಬಾರಿಗೆ ಬಿಜೆಪಿ ಡಿಸಿಸಿ ಬ್ಯಾಂಕ್ ನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಿತು. ತೇಲ್ಕೂರ 9 ನಿರ್ದೇಶಕ ರ ಬೆಂಬಲದೊಂದಿಗೆ ಗೆದ್ದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ನಾಲ್ಕು ಮತ ಪಡೆದು ಸೋಲು ಅನುಭವಿಸಿದರು. ಅದೇ ರೀತಿ ಬಿಜೆಪಿಯ ಸುರೇಶ ಸಜ್ಜನ ಸಹ 9 ಮತಗಳನ್ನು ಪಡೆದು ಉಪಾಧ್ಯಕ್ಷ ರಾಗಿ ಆಯ್ಕೆಯಾದರು. ಅದೇ ರೀತಿ ಕಾಂಗ್ರೆಸ್ ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ರಾಮರೆಡ್ಡಿ ಕೌಳುರ ಸಹ ನಾಲ್ಕು ಮತ ಪಡೆದು ಸೋಲು ಅನುಭವಿಸಿದರು.

ನಿನ್ನೆಯಷ್ಟೇ ಬ್ಯಾಂಕ್ ನ ನಿರ್ದೇಶಕರಾಗಿ ನಾಮನಿರ್ದೇಶನಗೊಂಡ ತೇಲ್ಕೂರ ನಿರೀಕ್ಷೆಯಂತೆ ಕಾಂಗ್ರೆಸ್‌ ಬೆಂಬಲಿತ ಇಬ್ಬರು ನಿರ್ದೇಶಕರ ಬೆಂಬಲದೊಂದಿಗೆ ಅಧ್ಯಕ್ಷ ರಾಗಿ ಚುನಾಯಿತರಾದರು.

13 ನಿರ್ದೇಶಕರು, ಓರ್ವ ನಾಮನಿರ್ದೇಶಿತ ನಿರ್ದೇಶಕ ಹಾಗೂ ಇಬ್ಬರು ಸಹಕಾರಿ ಹಿರಿಯ ಅಧಿಕಾರಿಗಳೊಂದಿಗೆ ಒಟ್ಟು 16 ಸದಸ್ಯ ಬಲಾಬಲದಲ್ಲಿ ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕ ಸ್ಥಾನ ಗಳೊಂದಿಗೆ ಸರಳ ಬಹುಮತ ಹೊಂದಿತ್ತು. ಆದರೆ ಕಾಂಗ್ರೆಸ್ ಬೆಂಬಲಿತ  ಮೂವರು ನಿರ್ದೇಶಕರು  ಅನರ್ಹ ಗೊಂಡಿದ್ದರಿಂದ ಸಂಖ್ಯಾಬಲ ಆರಕ್ಕೆ ಇಳಿದಿತ್ತು. ನಾಲ್ಕು ಸದಸ್ಯ ಹೊಂದಿದ್ದ ಬಿಜೆಪಿಯು ಓರ್ವ ನಾಮನಿರ್ದೇಶನ, ಇಬ್ಬರು ಸಹಕಾರಿ ಅಧಿಕಾರಿಗಳ ಹಾಗೂ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರೊಂದಿಗೆ ಅಧಿಕಾರದ ಗದ್ದುಗೆ ಏರಿತು.

ಬ್ಯಾಂಕ್ ನ ಆಡಳಿತಾಧಿಕಾರಿಯಾಗಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕ್ರಣ್ಣ ವಣಿಕ್ಯಾಳ ಅವರಿಂದ ತೇಲ್ಕೂರ ಅಧ್ಯಕ್ಷ ರಾಗಿ ಕಾರ್ಯಭಾರ ವಹಿಸಿಕೊಂಡರು.

Advertisement

ಕಾಂಗ್ರೆಸ್‌ಇಬ್ಬರಿಂದ ಅಡ್ಡ ಮತದಾನ: ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ  ಉಪಾಧ್ಯಕ್ಷ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ನ ಇಬ್ಬರಿಂದ ಅಡ್ಡ ಮತದಾನ ನಡೆದಿದೆ. ಆ ಇಬ್ಬರು ಯಾರು ಎಂಬುದರ ಕುರಿತು ಕಾಂಗ್ರೆಸ್ ಆತ್ಮಾವಲೋಕನ ನಡೆಸಿದೆ.

ಸೇಡಂ ಕ್ಷೇತ್ರದ ಶಾಸಕರು, ಎನ್ ಇ ಕೆಎಸ್ ಆರ್ ಟಿಸಿ ಅಧ್ಯಕ್ಷರು ಹಾಗೂ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿರುವ ತೇಲ್ಕೂರ ಈಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ.

ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next