Advertisement

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಶಾಸಕ ಸುರೇಶ್‌ಗೌಡ ಡ್ಯಾನ್‌

04:14 PM Jun 18, 2021 | Team Udayavani

ನಾಗಮಂಗಲ: ತಾಲೂಕಿನ ಕೋಟೆಬೆಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್‌ ಆರೈಕೆ ಕೇಂದ್ರದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಹಾಸ್ಯ ಮತ್ತು ರಸಸಂಜೆ ಕಾರ್ಯಕ್ರಮದಲ್ಲಿ ಕುಲದಲ್ಲಿ ಕೀಳಾವುದೋ ಹುಚ್ಚಪ್ಪ ಹಾಡಿಗೆ ಶಾಸಕ ಸುರೇಶ್‌ಗೌಡ ಸೇರಿದಂತೆ ಎಲ್ಲಾ ಸೋಂಕಿತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Advertisement

ಕೋಟೆಬೆಟ್ಟದ ಕೋವಿಡ್‌ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರಿಗೆ ಚಿಕಿತ್ಸೆ, ಪೌಷ್ಟಿಕ ಆಹಾರದ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚಿಸಲು ತಾಲೂಕು ಆಡಳಿತವು ಯೋಗ ತರಬೇತಿ, ಜಾನಪದ ರಸಸಂಜೆ ಸೇರಿದಂತೆ ಹಲವು ಬಗೆಯ ಒಂದಲ್ಲೊಂದು ಕಾರ್ಯ ಕ್ರಮ ಆಯೋಜಿಸಲಾಗುತ್ತಿದೆ.

ಬುಧವಾರ ಸಂಜೆ ಮಂಡ್ಯ ತಾಲೂಕಿನ ಯರಹಳ್ಳಿ ಪುಟ್ಟಸ್ವಾಮಿ ತಂಡದವರು ಅರ್ಥ ಪೂರ್ಣನಗೆ ಚಟಾಕಿಗಳ ಜೊತೆಗೆ ಜಾನಪದ, ಭಕ್ತಿ ಗೀತೆ ಹಾಗೂ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಸೋಂಕಿತರನ್ನು ನಕ್ಕುನಲಿಸಿದರು. ಕಾರ್ಯಕ್ರಮಕ್ಕೆ ವಿಧಾನಪರಿಷತ್‌ ಸದಸ್ಯ ಎನ್‌.ಅಪ್ಪಾಜಿಗೌಡ ಚಾಲನೆ ನೀಡಿದರು. ತಹಶೀಲ್ದಾರ್‌ ಕುಂಞ ಅಹಮದ್‌ ಮಾತನಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next