Advertisement

ದೇಶದ್ರೋಹಿಗಳನ್ನು ಕರಾಚಿಗೆ ಕಳುಹಿಸಬೇಕು: ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ

10:02 AM Feb 22, 2020 | Team Udayavani |

ಬಳ್ಳಾರಿ: ದೇಶದ್ರೋಹಿ ಹೇಳಿಕೆಗಳನ್ನು ಕೊಡುವವರನ್ನೆಲ್ಲ ಒಂದು ವಿಮಾನದಲ್ಲಿ ಕೂಡಿಸಿಕೊಂಡು ಪಾಕಿಸ್ತಾನದ ಕರಾಚಿಯಲ್ಲಿ ಬಿಟ್ಟು ಬರಬೇಕು ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಇಲ್ಲಿನ ಬಾಪೂಜಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ದ್ರೋಹದ ಹೇಳಿಕೆ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ದೇಶ ದ್ರೋಹಿಗಳನ್ನೆಲ್ಲಾ ಒಂದು ವಿಮಾನದಲ್ಲಿ ಹಾಕಿಕೊಂಡು ಹೋಗಿ ಪಾಕಿಸ್ತಾನದ ಕರಾಚಿಯಲ್ಲಿ ಬಿಟ್ಟುಬರಬೇಕು. ಆಗ ಪಾಕಿಸ್ತಾನ ಪರ ಪ್ರೇಮ ಏನು ಅಂತ ಗೊತ್ತಾಗಲಿದೆ. ಮೊದಲು ಕೇಂದ್ರ, ರಾಜ್ಯ ಸರ್ಕಾರಗಳು ಆ ಕೆಲಸ ಮಾಡಬೇಕು ಎಂದ ಶಾಸಕ ಸೋಮಶೇಖರ ರೆಡ್ಡಿ, ಇಲ್ಲಿ ದೇಶಪ್ರೇಮಿಗಳಿಗೆ ಮಾತ್ರ ಅವಕಾಶ. ದೇಶದ್ರೋಹಿಗಳಿಗೆ ಅವಕಾಶ ಇಲ್ಲಾ. ಈ ಬಗ್ಗೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಓವೈಸಿಯವರು ಸಹ ಇದ್ದರು. ಓವೈಸಿ ಎಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. 15 ನಿಮಿಷ ಸಿಕ್ಕರೆ ಸಾಕು ಹಿಂದೂಗಳನ್ನು ಮುಗಿಸುತ್ತೇವೆ ಎಂದವರು. ಆದರೆ, ನಮಗೆ 5 ನಿಮಿಷ ಸಾಕು. ಭಾರತ್ ಮಾತಾಕಿ ಜೈ ಅನ್ನೋರು ದೇಶಪ್ರೇಮಿಗಳು, ಪಾಕಿಸ್ತಾನಕ್ಕೆ ಜೈ ಅನ್ನೋರು ದೇಶದ್ರೋಹಿಗಳು. ಇದು ಬಹಳ ನೋವಿನ ವಿಚಾರ. ಕಾನೂನು ಕ್ರಮ ಜರುಗಿಸುತ್ತಾರೆ. ಆಯೋಜಕರ ಮೇಲೆಯೂ ಸಹ ಕಾನೂನು ಕ್ರಮ ಆಗಬೇಕು. ಅವರನ್ನು ಪ್ರಚೋದಿಸುವ ಶಕ್ತಿಗಳಿವೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಈಗಾಗಲೇ ಆಗಿದೆ. ನಮಗೆ ಸರ್ಕಾರ ಇದ್ದರೆ ಸಾಕು. ಕೆಲಸ ಆಗುತ್ತದೆ. ಸಿಎಂ ಯಡಿಯೂರಪ್ಪನವರೇ ಮೊದಲೇ ಒತ್ತಡದಲ್ಲಿ ಇದ್ದಾರೆ. ನಮಗೆ ಯಾವ ಆಕಾಂಕ್ಷೆ ಇಲ್ಲ. ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟ ವಿಚಾರ. ನಾವು ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು.

ಕಲ್ಯಾಣ ಕರ್ನಾಟಕ ಶಾಸಕರು ನಡೆಸಿದ ಸಭೆಯಲ್ಲಿ ನಾನು ಇರಲಿಲ್ಲ. ಅಂತಹ ಸಭೆಗಳಿಗೆ ನಾನು ಹೋಗಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮೋತ್ಕರ್ ಶ್ರೀನಿವಾಸ್ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next