Advertisement
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
Related Articles
Advertisement
ಜಿಲ್ಲೆಯಲ್ಲಿ ಕೋವಿಡ್ ಪ್ರತಿದಿನ ಅತ್ಯಂತ ವೇಗದಲ್ಲಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಸಂಪೂರ್ಣವಾಗಿ ಎರಡು ವಾರಗಳ ಕಾಲ ಲಾಕ್‍ಡೌನ್ ಮಾಡುವುದಕ್ಕೆ ಮುಂದಾಗಬೇಕು ಎಂದು ಶಾಸಕ ಸೋಮಶೇಖರರೆಡ್ಡಿ ಹೇಳಿದರು.
ಲಾಕ್‍ಡೌನ್ ಮಾಡುವುದಕ್ಕಿಂತ ಮುಂಚೆಯೇ ಜನರು ಪಡಿತರ ಮತ್ತು ತರಕಾರಿಗಳ ಖರೀದಿಸುವುದಕ್ಕೆ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಸಂಪೂರ್ಣ ಲಾಕ್‍ಡೌನ್ ಆದಾಗ ಈ ವೇಗಕ್ಕೆ ಕಡಿವಾಣ ಬಿಳಬಹುದು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಳ್ಳಾರಿ ನಗರಕ್ಕೆ 2 ವೆಂಟಲೇಟರ್ ಅಂಬ್ಯುಲೆನ್ಸ್‍ಗಳನ್ನು ನೀಡುವುದಕ್ಕೆ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಒಪ್ಪಿಕೊಂಡಿದ್ದು,ಎರಡು ವಾರಗಳಲ್ಲಿ ಬಳ್ಳಾರಿಗೆ ಬರಲಿವೆ ಎಂದರು.
ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗೆ 12ರಿಂದ 15ಕೋಟಿ ರೂ. ಖರ್ಚು ಮಾಡಿದಲ್ಲಿ ಬಳಕೆಗೆ ಸಿದ್ಧವಾಗಲಿದೆ; ಜಿಲ್ಲಾ ಖನಿಜ ನಿಧಿ ಅಡಿ ಖರ್ಚು ಮಾಡಿ ಕೋವಿಡ್ ಸೊಂಕಿತರ ಚಿಕಿತ್ಸೆಗೆ ಬಳಕೆ ಮಾಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮುಖಂಡರಾದ ವೀರಶೇಖರ್,ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.