Advertisement

ವಿರೋಧಿಗಳಿಂದ ಸಾಲ ಮನ್ನಾ ವಿಚಾರ ವೈರಲ್‌

03:04 PM Jun 19, 2023 | Team Udayavani |

ಬಂಗಾರಪೇಟೆ: ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಐದು ಗ್ಯಾರಂಟಿ ಘೋಷಣೆ ಮಾಡಿರುವು ದನ್ನು ಅನುಷ್ಠಾನ ಮಾಡಲು ಸರ್ಕಾರವು ಬದ್ಧವಾ ಗಿದ್ದು, ಸರ್ಕಾರದ ವಿರೋಧಿಗಳು ಅನಗತ್ಯವಾಗಿ ಮಹಿಳಾ ಸಂಘಗಳ ಸಾಲ ಮನ್ನಾ ವಿಚಾರವನ್ನು ವೈರಲ್‌ ಮಾಡುತ್ತಿದ್ದಾರೆ ಎಂದು ಶಾಸಕ ಎಸ್‌.ಎನ್‌ .ನಾರಾಯಣಸ್ವಾಮಿ ಆರೋಪಿಸಿದರು.

Advertisement

ಪಟ್ಟಣದ ಎಸ್‌.ಎನ್‌. ರೇಸಾರ್ಟ್‌ನಲ್ಲಿ ಶಾಸಕರನ್ನು ಭೇಟಿ ಮಾಡಿದ ನೂರಾರು ಮಹಿಳಾ ಸಂಘಗಳ ಪ್ರತಿನಿಧಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಸಿದ್ದರಾಮಯ್ಯರನ್ನು ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಅಭ್ಯರ್ಥಿಗಳು ಹಾಗೂ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ ಭೇಟಿ ನೀಡಿ ಮಹಿಳಾ ಸಂಘಗಳ ಸಾಲ ಮನ್ನಾ ವಿಷಯದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೆ ತರುವುದೇ ದೊಡ್ಡ ಸಾಧನೆಯಾಗಿದೆ. ಸದ್ಯಕ್ಕೆ ಐದು ಗ್ಯಾರಂಟಿಗಳ ಬಗ್ಗೆ ಮಾತ್ರ ಗಣನೆಗೆ ತೆಗೆದುಕೊಳ್ಳೋಣ ಎಂದು ವಿವರಿಸಿದರು.

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿರಹಿತ ಸಾಲ: ರಾಜ್ಯದಲ್ಲಿ ಖಾಸಗಿ ಫೈನಾನ್ಸ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಶ್ರೀಕ್ಷೇತ್ರ ಧರ್ಮಸ್ಥಳ ಸಂಘಗಳು ಮಹಿಳಾ ಸಂಘ ಗಳಿಗೆ ನೀಡುತ್ತಿರುವ ಸಾಲಗಳಿಗೆ ಬಡ್ಡಿ ವಿಧಿಸುತ್ತಿದ್ದಾರೆ. ಸಾಲಕ್ಕೆ ತಕ್ಕಂತೆ ಗ್ಯಾರಂಟಿಗಳನ್ನು, ಖಾಲಿ ಚೆಕ್‌ಗಳನ್ನು ತೆಗೆದುಕೊಂಡು ಬಡ್ಡಿಗೆ ಸಾಲ ನೀಡುತ್ತಿದೆ. ಆದರೆ, ಡಿಸಿಸಿ ಬ್ಯಾಂಕ್‌ ಯಾವುದೇ ಷರತ್ತುಗಳಿಲ್ಲದೇ, ಬಡ್ಡಿ ಇಲ್ಲದೇ ಶೂನ್ಯ ಬಡ್ಡಿದರಲ್ಲಿ 10 ಮಹಿಳೆಯರು ಇರುವ ಸ್ತ್ರೀಶಕ್ತಿ ಸಂಘಗಳಿಗೆ 5 ಲಕ್ಷದವರೆಗೂ ಸಾಲ ನೀಡುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರತಿ ವರ್ಷವೂ 1,300 ಕೋಟಿಗಳಿಗೂ ಹೆಚ್ಚು ಸಾಲ ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಮುಂದುವರೆಯಲು ಶ್ರಮಿಸುತ್ತಿದೆ ಎಂದರು.

ವಿರೋಧಿಗಳ ಮಾತು ಕೇಳಬೇಡಿ: ಎರಡೂ ಜಿಲ್ಲೆ ಗಳಲ್ಲಿ ಡಿಸಿಸಿ ಬ್ಯಾಂಕ್‌ನಿಂದ ನೂರಾರು ಕೋಟಿ ಸಾಲ ನೀಡಲಾಗಿದೆ. ಪ್ರತಿ ತಿಂಗಳ ಕಂತಗಳ ಹಣವನ್ನು ಮತ್ತೆ ಮಹಿಳಾ ಸಂಘಗಳಿಗೆ ಸಾಲವಾಗಿ ನೀಡುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳು ಸಾಲಬಾಧೆ ಯಿಂದ ತಪ್ಪಿಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಶೂನ್ಯ ಬಡ್ಡಿದರದಲ್ಲಿ ನೀಡಿರುವ ಸಾಲವನ್ನು ಮಹಿಳಾ ಸಂಘಗಳು ಮರುಪಾವತಿ ಮಾಡಬೇಕಾಗಿದೆ. ಡಿಸಿಸಿ ಬ್ಯಾಂಕ್‌ ವಿರೋಧಿಗಳು ಹೇಳುವುದನ್ನು ಯಾರೂ ಕೇಳಬಾರದು. ಮಹಿಳಾ ಸಂಘಗಳ ಸಾಲದ ಬಡ್ಡಿಯನ್ನು ರಾಜ್ಯ ಸರ್ಕಾರವೇ ಡಿಸಿಸಿ ಬ್ಯಾಂಕ್‌ಗೆ ಕಟ್ಟುತ್ತಿದೆ. ಇದುವರೆಗೂ ಯಾರೂ ಕಟ್ಟದೇ ಇರುವ ಸಾಲವನ್ನು ತಪ್ಪದೇ ಮರುಪಾವತಿ ಮಾಡುವಂತೆ ಸಲಹೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಜಾರಿಗೆ ತರಲು ಹರಸಾಹಸ ಮಾಡುತ್ತಿದೆ. ಕೇಂದ್ರ ಸರ್ಕಾರವು ಈ ಗ್ಯಾರಂಟಿಗಳನ್ನು ಜಾರಿಗೆ ತರಲು ಸಹಕಾರ ನೀಡುತ್ತಿಲ್ಲ. ರಾಜ್ಯದಲ್ಲಿ ಯಾರೂ ಹಸಿವುನಿಂದ ಇರಬಾರದೆಂಬ ಕಾರಣದಿಂದ ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ನಿರ್ಧಾರ ಮಾಡಿದ್ದು, ಕೇಂದ್ರಕ್ಕೆ ಹಣ ನೀಡಿದ ಬಳಿಕವೇ ಅಕ್ಕಿಯನ್ನು ನೀಡಿ ಎಂದು ಕೇಳಿಕೊಂಡರೂ ಅಕ್ಕಿ ನೀಡುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಹೆಸರು ಬರುತ್ತದೆ ಎಂದುಕೊಂಡು ಕೇಂದ್ರ ಮೋದಿಯವರ ಕೇಂದ್ರ ಸರ್ಕಾರವು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

Advertisement

ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಮನವಿ : ಸಿದ್ದರಾಮಯ್ಯನವರು ಕೋಲಾರ ಮತ್ತು ವೇಮಗಲ್‌ನಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳಾ ಸಂಘಗಳಿಗೆ ನೀಡಿರುವ ಸಾಲ ಸಂಪೂರ್ಣವಾಗಿ ಮನ್ನಾ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಮಹಿಳಾ ಸಂಘಗಳು ತಮ್ಮ ಕುಟುಂಬ ಗಳ ಸಮೇತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿ ದ್ದೇವೆ. ಹಾಗೇಯೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದಿರುವುದರಿಂದ ಸಿದ್ದರಾಮಯ್ಯ ನೀಡಿರುವ ಭರವಸೆಯಂತೆ ಸಾಲ ಮನ್ನಾ ಮಾಡಲೇಬೇಕೆಂದು ಮಹಿಳಾ ಸಂಘಗಳ ಪ್ರತಿನಿಧಿಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜುಲು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next