ರಬಕವಿ-ಬನಹಟ್ಟಿ: ನಗರೋತ್ಥಾನ ನಾಲ್ಕನೇ ಹಂತ ಹಾಗೂ ಶಾಸಕರ ವಿಶೇಷ ನಿಧಿಯಡಿ ಕ್ಷೇತ್ರದ ರಬಕವಿ-ಬನಹಟ್ಟಿ ನಗರಸಭೆ, ಮಹಾಲಿಂಗಪುರ ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡ ಕೋಟ್ಯಂತರ ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.
ಅವರು ಸೋಮವಾರ ನಗರಸಭೆ 15ನೇ ಹಣಕಾಸು ಯೋಜನೆಯಡಿ ಅಂದಾಜು 31 ಲಕ್ಷದ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರಸಭೆ ಕೆಲವು ಕಡೆಗಳಲ್ಲಿನ ಚರಂಡಿಗಳಲ್ಲಿ ಪೌರಕಾರ್ಮಿಕರು ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ. ಹಾಗೂ ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ನಗರಸಭೆ ವ್ಯಾಪ್ತಿಯ ಸ್ವಚ್ಛತೆ ಹಿತದೃಷ್ಠಿಯಿಂದ ಹಿಟ್ಯಾಚ್ ಮಶಿನ್ ಹಾಗೂ ಟ್ರ್ಯಾಕ್ಟರ್‌ಗಳನ್ನು ಖರೀದಿಸಲಾಗಿದೆ. ಸಾರ್ವಜನಿಕರು ಕೂಡ ಕಸವನ್ನು ಚರಂಡಿ ಹಾಕದೇ ನಗರಸಭೆ ವಾಹನ ಬಂದಾಗ ನೀಡಬೇಕು. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ ಇರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ, ಸ್ಥಾಯಿ ಸಮಿತಿ ಚೇರಮನ್ ಸದಾಶಿವ ಪರೀಟ, ಬಿಜೆಪಿ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಪೌರಾಯುಕ್ತ ಅಶೋಕ ಗುಡಿಮನಿ, ವ್ಯವಸ್ಥಾಪಕ ಸುಬಾಸ ಖುದಾನಪೂರ, ಎಇಇ ರಾಘವೇಂದ್ರ ಕುಲಕರ್ಣಿ, ಗೌರಿ ಮಿಳ್ಳಿ, ಶಶಿಕಲಾ ಸಾರವಾಡ, ದುರ್ಗವ್ವ ನಡುವಿನಮನಿ, ಚಿದಾನಂದ ಹೊರಟ್ಟಿ, ಯಲ್ಲಪ್ಪ ಕಟಗಿ, ಪ್ರವೀಣ ಧಬಾಡಿ, ಶ್ರೀಶೈಲ ಆಲಗೂರ, ಬಿ. ಎಂ. ಡಾಂಗೆ, ಶೋಭಾ ಹೊಸಮನಿ, ರಾಜಕುಮಾರ ಹೊಸೂರ ಸೇರಿದಂತೆ ನಗರಸಭೆ ಸದಸ್ಯರು, ಮುಖಂಡರು, ಅಧಿಕಾರಿಗಳು ಇದ್ದರು.