ಶಿರಸಿ: ಯಲ್ಲಾಪುರ ಕ್ಷೇತ್ರದ ಯುವ ಮುಖಂಡ, ಶಾಸಕ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಬನವಾಸಿ ಪಟ್ಟಣದ ಟಿ.ಎಮ್.ಎಸ್ ಎದುರು ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ್ ಹೆಬ್ಬಾರ್ ಅವರಿಗೆ ಪಕ್ಷದ ಶಾಲು ಹಾಕಿ ಬಾವುಟವನ್ನ ನೀಡುವ ಮೂಲಕ ಸೇರ್ಪಡೆ ಮಾಡಿಕೊಂಡರು.
ಇದೇ ಸಂಧರ್ಭದಲ್ಲಿ ಬನವಾಸಿ ಭಾಗದ ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಮಂಗಳಾ ನಾಯ್ಕ, ಸಿದ್ದು ನರೇಗಲ್, ರಘು ನಾಯ್ಕ, ಪ್ರಕಾಶ್ ಹೆಗಡೆ, ಗಣಪತಿ ನಾಯ್ಕ ಬಾಶಿ, ಪ್ರಶಾಂತ್ ಗೌಡರ್, ಜಿ.ವಿ ಹೆಗಡೆ, ಸುಭಾಷ್ ಮಡಿವಾಳ, ನಾಗೇಂದ್ರ ಮಡಿವಾಳ, ಸತೀಶ್ ನಾಯ್ಕ, ಸುರೇಶ್ ಗಡಿಗೇರಿ, ಸೇರಿದಂತೆ ಬನವಾಸಿ ಭಾಗದ ಹತ್ತು ಪಂಚಾಯತ್ ಗಳಲ್ಲಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ನೂರಾರು ಜನರು ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಸಿ.ಎಫ್ ನಾಯ್ಕ, ವೆಂಕಟೇಶ್ ಹೆಗಡೆ ಹೊಸಬಾಳೆ, ಆರ್ ಹೆಚ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆದರೆ, ವಿವೇಕ ಹೆಬ್ಬಾರ್ ಸೇರ್ಪಡೆ ವೇಳೆ ಸಚಿವ ಮಂಕಾಳು ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ರವೀಂದ್ರ ನಾಯ್ಕ, ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೈರಾಗಿದ್ದರು.
ಇದನ್ನೂ ಓದಿ: Electrocuted: ರಥೋತ್ಸವದ ವೇಳೆ ಅವಘಡ… ವಿದ್ಯುತ್ ತಂತಿ ಸ್ಪರ್ಶಿಸಿ 13 ಮಕ್ಕಳಿಗೆ ಗಾಯ