Advertisement

ಅನುದಾನ ಸದ್ಬಳಕೆಗೆ ಶಾಸಕ ಸಿದ್ದು ಸವದಿ ಸಲಹೆ

06:01 PM Jan 10, 2022 | Team Udayavani |

ತೇರದಾಳ: ಸರಕಾರ ಅಭಿವೃದ್ಧಿ ಹಿತದೃಷ್ಟಿಯಿಂದ ಸಾಕಷ್ಟು ಅನುದಾನ ಒದಗಿಸುತ್ತಿದೆ. ಅಧಿ ಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ಅನುದಾನ ಸದ್ಬಳಕೆ ಆಗುವಂತೆ ಮುತುವರ್ಜಿ ವಹಿಸಬೇಕೆಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಪಟ್ಟಣದ ಪುರಸಭೆ ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ ಅಂದಾಜು 40 ಲಕ್ಷ ರೂ.ಗಳ ವೆಚ್ಚದ ಅನುದಾನದಲ್ಲಿ ಕೈಗೊಂಡಿರುವ ಪಟ್ಟಣದ ಬಸ್‌ ನಿಲ್ದಾಣದಿಂದ ಹಿಡಿದು ಕಲ್ಲಟ್ಟಿ ಗಂಗಾಧರ ಮಠದ ವರೆಗೆ ಡಾಂಬರ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಬಹುತೇಕ ಇಲಾಖೆಯಡಿ ಅನುದಾನ ಒದಗಿಸುವ ಪ್ರಾಮಾಣಿಕ ಕೆಲಸ ಮಾಡಲಾಗಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ಮೂಲ ಧ್ಯೇಯವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಅನುದಾನ ಒದಗಿಸುವ ಮೂಲಕ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ರಾಮಣ್ಣ ಹಿಡಕಲ್‌, ಸದಾಶಿವ ಹೊಸಮನಿ, ಶಂಕರ ಕುಂಬಾರ, ಅಲ್ಲಪ್ಪ ಬಾಬಗೊಂಡ, ಸುಭಾಸ ಗಾತಾಡೆ, ಕೇದಾರಿ ಪಾಟೀಲ, ವಿಜಯಪ್ರಕಾಶ ದಾನಿಗೊಂಡ, ಸಿದ್ದು ಅಮ್ಮಣಗಿ, ಮುರಗೇಶ ಮಿರ್ಜಿ, ಪ್ರಮೋದ ಕೋರಿಗೇರಿ, ಈಶ್ವರ ಯಲ್ಲಟ್ಟಿ, ರವೀಂದ್ರ ದೊಡಮನಿ, ಪರಪ್ಪ ಗೌಡರ, ಮುನ್ನಾ ತಹಶೀಲ್ದಾರ ಸೇರಿದಂತೆ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next