Advertisement

ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಜೋಶಿ, ಶೆಟ್ಟರ್ ಹೆಸರು ಕೇಳಿ ಬರುತ್ತಿದೆ: ಸತೀಶ್ ಜಾರಕಿಹೊಳಿ

06:06 PM May 30, 2020 | keerthan |

ಬೆಳಗಾವಿ:  ಬಿಜೆಪಿಯಲ್ಲಿ ವಲಸಿಗರಿಂದ ಮೂಲ ಕಾರ್ಯಕರ್ತರು ಹಾಗೂ ನಾಯಕರಿಗೆ ಅನ್ಯಾಯವಾಗುತ್ತಿದ್ದು ಇದರಿಂದ ಸರಕಾರ ಮತ್ತೆ ಅಪಾಯಕ್ಕೆ ಸಿಲುಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉತ್ತರ ಕರ್ನಾಟಕ ಭಾಗದ ಶಾಸಕರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಹ್ಲಾದ ಜೋಶಿ ಹೆಸರು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ದಿಂದ ಹೋದವರು ಜಗದೀಶ್ ಶೆಟ್ಟರ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಹಿರಿಯ ಶಾಸಕ ಉಮೇಶ ಕತ್ತಿ ಔತಣಕೂಟ ವಿಚಾರ ಪ್ರಸ್ತಾಪಿಸಿದ ಅವರು ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಅದರೆ ವಲಸಿಗರಿಂದ ಮೂಲ ಬಿಜೆಪಿ ಅನ್ಯಾಯವಾಗಿದೆ ಎಂದರು.

ಸಚಿವ ರಮೇಶ ಜಾರಕಿಹೊಳಿ ಇನ್ನೂ 5 ಜನ ಶಾಸಕರ ಆಪರೇಷನ್ ಮಾಡುವ ಬಗ್ಗೆ ಹೇಳಿರುವದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗೊಂದಲ ಮಾಡೊದು ರಮೇಶ ಜಾರಕಿಹೊಳಿ ಬಂಡವಾಳ. ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರು ಹೋಗುವದಿಲ್ಲ. ನಾವು ಚುನಾವಣೆ ಎದುರಿಸಲು ಸಿದ್ದ ಎಂದು ತಿರುಗೇಟು ನೀಡಿದರು.

ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ನಾವು ಮಾಡಿಲ್ಲ. ಬಿಜೆಪಿ ಶಾಸಕರನ್ನು ಸೆಳೆಯಲು ದೊಡ್ಡ ಪ್ರಮಾಣದ ಬ್ಯಾಂಕ್ ಬ್ಯಾಲೆನ್ಸ್ ನಮ್ಮಲ್ಲಿ ಇಲ್ಲ ಎಂದು ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

Advertisement

ಸಿದ್ದರಾಮಯ್ಯ ಅವರನ್ನು ಉಮೇಶ ಕತ್ತಿ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಯಾರು ಯಾರನ್ನು ಬೇಕಾದರೂ ಭೇಟಿ ಆಗಬಹುದು. ಅದರೆ ಅವರ ಧೈರ್ಯದ ಮೇಲೆ ಬಂಡಾಯದ ತೀವ್ರತೆ ನಿರ್ಧಾರ ಆಗಲಿದೆ. ಬಿಜೆಪಿ ಆಂತರಿಕ ಕಲಹ ಹೆಚ್ಚಾದರೆ ಮಧ್ಯಂತರ ಚುನಾವಣೆ ನಿರ್ಧಾರ ಆಗಲಿದೆ ಎಂದರು. ಈಗ ಕುಸ್ತಿ ಆರಂಭವಾಗಿದ್ದು, ಕೇವಲ ಸೆಡ್ಡು ಹೊಡೆದು ಹೊರಗೆ ನಿಂತರೆ ಪ್ರಯೋಜನ ಇಲ್ಲ. ನಿಜವಾಗಿಯೂ ಕುಸ್ತಿ ನಡೆದರೆ ನಾಯಕತ್ವ ಬದಲಾವಣೆಯಾಗಿ ಮಧ್ಯಂತರ ಚುನಾವಣೆ ಆಗಲಿದೆ.  ಇದು ಕುಸ್ತಿ ಹಿಡಿಯುವರ ಮೇಲೆ ನಿರ್ಧಾರವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next