ಹುಣಸೂರು: ಹುಣಸೂರು ತಾಲೂಕಿನ ಕಂಪ್ಲಾಪುರ ತಂಬಾಕು ಹರಾಜು ಮಾರುಕಟ್ಟೆ ಅ.15 ರೊಳಗೆ ಆರಂಬಿಸದಿದ್ದಲ್ಲಿ ಮೈಸೂರು ಆರ್.ಎಂ.ಓ ಕಚೇರಿ ಮುಂದೆ ಜನಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳು ಬೀಗ ಜಡಿಯಲಿದೆ ಎಂದು ಶಾಸಕ ಸಾ.ರಾ ಮಹೇಶ್ ಎಚ್ಚರಿಸಿದರು.
ಹುಣಸೂರು ತಾಲೂಕಿನ ಕಟ್ಟೆಮಳಲಬಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಂಡಳಿ ಅಧ್ಯಕ್ಷ ರಘುನಾಥಬಾಬು ಅಧ್ಯಕ್ಷತೆಯಲ್ಲಿ ಸಂಸದ ಪ್ರತಾಪಸಿಂಹ. ಶಾಸಕರಾದ ಎಚ್.ಪಿ.ಮಂಜುನಾಥ್. ಸಾರಾ ಮಹೇಶ್ . ಆರ್.ಎಂ.ಓ.ಮಾರಪ್ಪ ಸಮ್ಮುಖದಲ್ಲಿ ಆರೋಜಿಸಿದ್ದ ತಂಬಾಕು ಬೆಳೆಗಾರರ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಶಾಸಕ ಸಾರಾ ಮಹೇಶ್ ರವರು, ಬೆಳೆಗಾರರ ಸಭೆ ನಡಸದೆ ಸಂಸದರು ಹಾಗೂ ಶಾಸಕರುಗಳ ಗಮನಕ್ಕೂ ತರದೆ ಚಿಲ್ಕುಂದ ಹರಾಜು ಮಾರುಕಟ್ಟೆ ಬಂದ್ ಮಾಡಿದ್ದೀರಾ ಎಂದರು.
ಕೊವಿಡ್ ಸಮಯದಲ್ಲಿ ಅಂತರ ಕಾಯಬೇಕು. ಎಲ್ಲರನ್ನೂ ಕಟ್ಟೆ ಮಳಲವಾಡಿಗೆ ಹಾಕಿದ್ದೀರಾ. ಯಾರಪ್ಪನ ಮನೆ ದುಡ್ಡಲ್ಲಿ ಸಂಬಳ ಪಡಿತೀಯಪ್ಪ ಆರ್ ಎಂ ಓ ಮಾರಪ್ಪ. ಯಾರನ್ನು ಕೇಳಿ ಬಂದ್ ಮಾಡಿದ್ದೀಯಾ . ಅ.15 ರೊಳಗೆ ಮತ್ತೆ ಚಿಲ್ಕುಂದ ಮಾರುಕಟ್ಟೆ ಓಪನ್ ಮಾಡು ಇಲ್ಲ. ಅ.16 ರ ಬೆಳಗ್ಗೆ ಆರ್ ಎಂಓ ಕಚೇರಿಗೆ ಬೀಗ ಹಾಕುತ್ತೇವೆ. ಏನ್ ಮಾಡ್ತೀಯೋ ಮಾಡು ಎಂದು ಎಚ್ಚರಿಸಿದರು.
ಹರಾಜು ನಿರ್ದೇ ಶಕಿಯನ್ನು ಬದಲಾಯಿಸಿ ರೈತರ ಆಗ್ರಹ;
ರೈತರ ಸಮಸ್ಯೆ ಆಲಿಸಲು ಬರಬೇಕಾದ ಹರಾಜು ನಿರ್ಧಶಕಿ ಸವಿತಾ ನಾಯ್ಡು ರನ್ನು ತಕ್ಷಣವೇ ಬದಲಾಯಿಸಬೇಕು. ಉತ್ತಮ ಗುಣಮಟ್ಟದ ತಂಬಾಕು ಮಾರುಕಟ್ಟೆಗೆ ಬಂದರೂ ಬೆರಳೆಣಿಕೆಯ ಬೈಯರ್ ಗಳು ಬರುವುದರಿಂದ ಐಟಿಸಿ ಕಪಿಮುಷ್ಟಿಯಲ್ಲಿರುವ ಮಂಡಳಿ ದರ ನೀಡುತ್ತಿಲ್ಲ.ಉತ್ತಮ ಗುಣಮಟ್ಟದ ಮಬಾಕಿಗೆ _ ಕನಿಷ್ಟ 225 ರೂ ನೀಡಬೇಕು. ತರಗಿಗೆ 125 ರೂ ನೀಡಬೇಕೆಂದು ರೈತ ಮುಖಂಡರು ಆಗ್ರಹಿಸಿದರು.