Advertisement

ಜೆಡಿಎಸ್‌ ಸರ್ಕಾರಿ ನೌಕರರ ಪರ: ಶಾಸಕ ಸಾರಾ ಮಹೇಶ್‌

12:38 PM Jan 01, 2023 | Team Udayavani |

 ಕೆ.ಆರ್‌.ನಗರ: ಸರ್ಕಾರಿ ನೌಕರರು ಹಳೆಯ ಮಾದರಿ ಪಿಂಚಣಿ ನೀಡುವಂತೆ ಮಾಡುತ್ತಿರುವ ಹೋರಾಟಕ್ಕೆ ಜೆಡಿಎಸ್‌ ಪಕ್ಷ ಬೆಂಬಲ ನೀಡಿ ನೌಕರರಿಗೆ ಅನುಕೂಲ ಕಲ್ಪಿಸಲು ಸದನದ ಒಳಗೆ ಮತ್ತು ಹೊರಗೆ ಬೆನ್ನೆಲುಬಾಗಿ ನಿಂತಿದೆ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹೊರ ತಂದಿರುವ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಡಿ.19ರಿಂದ ನೌಕರರು ಎನ್‌ಪಿಎಸ್‌ ರದ್ದುಗೊಳಿಸುವಂತೆ ಮಾಡುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ನೀಡಲಾಗಿದೆ ಎಂದರು. ಸರ್ಕಾರಿ ನೌಕರರು ಹೋರಾಟಕ್ಕೆ ಬೆಂಗಳೂರಿಗೆ ತೆರಳಲು ವಾಹನದ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಪಕ್ಷದ ವರಿಷ್ಠ ಎಚ್‌ .ಡಿ.ದೇವೇಗೌಡರು ಬೆಂಬಲ ನೀಡಿ ಜೆಡಿಎಸ್‌ ಪಕ್ಷವೇ ನೌಕರರ ಪರವಾಗಿದೆ. ಇದನ್ನು ತಾವುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಎಸ್‌.ಸಂತೋಷ್‌, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್‌, ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಈರಣ್ಣನಾಯಕ, ಪದಾಧಿಕಾರಿಗಳಾದ ಕೆ.ವಿ.ರಮೇಶ್‌, ಶಿವಲಿಂಗೇ ಗೌಡ, ಎನ್‌.ಪ್ರಸನ್ನ, ರಾಮೇಗೌಡ, ಧ್ರುವಕುಮಾರ್‌, ಜಿ.ಕೆ. ಸಿದ್ದೇಶ್ವರಪ್ರಸಾದ್‌, ರಾಜೇಶ್‌, ಕರೀಗೌಡ, ಆನಂದ್‌, ಮಹದೇವ್‌, ಪ್ರಕಾಶ್‌, ಸಣ್ಣಸ್ವಾಮಿ, ಪ್ರವೀಣ್‌, ಲಾಳಂದೇವನಹಳ್ಳಿ ಗ್ರಾಪಂ ಸದಸ್ಯ ಬಾಲಾಜಿಗಣೇಶ್‌, ಜೆಡಿಎಸ್‌ ಮುಖಂಡರಾದ ಎನ್‌. ಶಿವಕುಮಾರ್‌, ವೀರಭದ್ರಾಚಾರ್‌, ಎಚ್‌.ಪಿ.ಶಿವಣ್ಣ, ಕೆ.ಎಸ್‌.ಮಲ್ಲಪ್ಪ, ಸಾ.ರಾ.ನಾಗೇಶ್‌, ಆಕಾಶ್‌ಬಾಬು, ಮಹಮದ್‌ಸಿರಾಜ್‌, ಕೆ.ಎಸ್‌.ರೇವಣ್ಣ, ಚಂದ್ರಾಚಾರ್‌, ಕೆ.ಜೆ.ಕುಚೇಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next