ಕೆ.ಆರ್.ನಗರ: ಮುಂದಿನ ವರ್ಷದಿಂದ ರೈತರ ದಿನಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಶ್ರೀಕೃಷ್ಣ ಮಂದಿರದಲ್ಲಿ ರೈತ ಉತ್ಪಾದಕ ಸಂಸ್ಥೆಗಳು, ತಾಲೂಕು ಯುವ ರೈತ ವೇದಿಕೆ ಹಾಗೂ ಕೃಷಿ ಪೂರಕ ಇಲಾಖೆ ಇವರುಗಳ ಸಂಯುಕ್ತಾಶ್ರದಲ್ಲಿ ರೈತ ಮಹಿಳಾ ದಿನಾಚರಣೆ ಮತ್ತು ವಿಶ್ವ ಆಹಾರ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಕಿಸಾನ್‌ಗೊàಷ್ಠಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ರೀತಿಯ ಸಹಕಾರ: ರೈತ ಉತ್ಪಾದಕ ಸಂಸ್ಥೆಯ ಪದಾಧಿಕಾರಿಗಳು ರೈತರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಶಾಸಕರು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗುವಂತಹ ಕಾರ್ಯ ಗಾರಗಳನ್ನು ರೈತರಿಗಾಗಿ ಆಯೋಜಿಸಬೇಕು. ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಸರ್ಕಾರದ ನಿರ್ಲಕ್ಷ್ಯದಿಂದ ರೈತರ ಆತ್ಮಹತ್ಯೆ: ಯುವ ರೈತ ವೇದಿಕೆ ತಾಲೂಕು ಅಧ್ಯಕ್ಷ ಎ.ಎಸ್. ರಾಮಪ್ರಸಾದ್ ಮಾತನಾಡಿ, ದೇಶದಲ್ಲಿ ಶೇ.70ರಷ್ಟು ಕೃಷಿ ಮಾಡುವ ರೈತ ಅರ್ಧ ಗಂಟೆಗೊಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದ್ದು, ಆಡಳಿತ ನಡೆಸುವವರು ರೈತರಿಗೆ ಉಪಯುಕ್ತ ವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕೃಷಿ ನೀತಿ ಜಾರಿಗೆ ತಂದು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದ ರಾಮಪ್ರಸಾದ್ ರೈತರು ಬೆಳೆದ ಭತ್ತದ ಬೆಲೆ ಒಂದು ಕೆ.ಜಿ.ಗೆ 24 ರೂ. ಗಳಾಗಿದ್ದು, ರಿಲಯನ್ಸ್ ಕಂಪನಿಯವರು ಮಾರಾಟ ಮಾಡುವ ಒಂದು ಕೆ.ಜಿ. ಅಕ್ಕಿ 140 ರೂ. ಇಷ್ಟು ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಸರ್ಕಾರ ರೈತರ ಪರವಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ವಿಜಯಮಲ್ಯ ಸೇರಿದಂತೆ ಇತರ ಉದ್ಯಮಿ ಗಳು ಮಾಡಲಾದ 10 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳು ಪಡೆದಿರುವ ಐದು ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅಧ್ಯಕ್ಷರು ಸ್ವಾತಂತ್ರ್ಯ ಸಂದರ್ಭದಲ್ಲಿ 33 ಕೋಟಿ ಜನ ಸಂಖ್ಯೆ ಹೊಂದಿದ್ದ ದೇಶದಲ್ಲಿ ಇಂದು 130 ಕೋಟಿ ಇದ್ದರೂ ಸಹ ಆಹಾರಕ್ಕೆ ತೊಂದರೆಯಿಲ್ಲ. ಇದಕ್ಕೆ ರೈತರೇ ಕಾರಣ ಎಂದರು.
ಪ್ರಗತಿಪರ ರೈತರಾದ ಹನುಮನಹಳ್ಳಿ ಇಂದ್ರಮ್ಮ, ಮೈಸೂರು ಮಹಾತ್ಮಾಗಾಂಧಿ ಟ್ರಸ್ಟ್‌ನ ಆದಿಶೇಷನ್ ಗೌಡ, ತಹಶೀಲ್ದಾರ್ ಎಂ.ಎಸ್.ಯದುಗಿರೀಶ್, ಇಒ ಹೆಚ್.ಕೆ.ಸತೀಶ್, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಅಂಕನಹಳ್ಳಿತಿಮ್ಮಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್.ಪ್ರಸನ್ನ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಎಸ್. ಗುರುಪ್ರಸಾದ್, ಸಿಡಿಪಿಒ ಕೆ.ಆರ್. ಪೂರ್ಣಿಮಾ, ರೈತ ಮುಖಂಡರಾದ ಮೃತ್ಯುಂ ಜಯ, ಎ.ಟಿ.ಗೋಪಾಲ್, ಸಂಪತ್, ಹೆಚ್.ಪಿ. ಶಿವಣ್ಣ, ಕೃಷ್ಣಶೆಟ್ಟಿ, ಮಲ್ಲೇಶ್ ಹಾಜರಿದ್ದರು.