Advertisement

ಅಭಿವೃದ್ಧಿ ಕಾರ್ಯಗಳಿಗೆ ಸಂದ ಜಯ: ರೂಪಕಲಾ

03:40 PM May 14, 2023 | Team Udayavani |

ಕೆಜಿಎಫ್‌: ನನ್ನ ಗೆಲವು ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಗೆ ಸಂದ ಜಯವಾಗಿದ್ದು, ಈ ಜಯವು ಎಲ್ಲಾ ನನ್ನ ಪ್ರೀತಿಯ ಮತಬಾಂದವರ ಪಾದಗಳಿಗೆ ಅರ್ಪಿಸುವುದಾಗಿ ಶಾಸಕಿ ರೂಪಕಲಾ ಶಶಿಧರ್‌ ಹೇಳಿದರು.

Advertisement

ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ 2 ನೇ ಬಾರಿಗೆ ಗೆಲುವನ್ನು ಪಡೆದ ನಂತರ ಕಾರ್ಯಕರ್ತರ ವಿಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಕೆಜಿಎಫ್‌ ಜನರು ವಿದ್ಯಾವಂತರಾಗಿದ್ದು, ಕೆಜಿಎಫ್‌ ಜನರು ಶ್ರಮಜೀವಿಗಳಾಗಿ ಸ್ವಾಭಿಮಾನ ಬದುಕನ್ನು ನಡೆಸುತ್ತಿದ್ದಾರೆ. ಅಂತಹ ಮತದಾರರು ಯಾರನ್ನು ಅಯ್ಕೆ ಮಾಡಬೇಕೆಂದು ಚಿಂತನೆ ಮಾಡಿ ನಾನು ಮಾಡಿರುವ ಅಭಿವೃದ್ಧಿ ಗುರುತಿಸಿ ಅಧಿ ಕ ಮತಗಳನ್ನು ನೀಡಿ ನನಗೆ ಶಕ್ತಿ ತುಂಬಿದ್ದಾರೆ ಎಂದರು.

ಕೈಗಾರಿಕೆಗಳಿಗೆ ಒತ್ತು: ಕೆಜಿಎಫ್‌ ನಗರದಲ್ಲಿ ಬೆಮೆಲ್‌ ಕಾರ್ಖಾನೆಗೆ ನೀಡಿದ್ದ 974 ಎಕರೆ ಜಾಗವನ್ನು ಗುರುತಿಸಿ ಸರಕಾರದ ವಶಕ್ಕೆ ನೀಡಿ ದ್ದೇನೆ, ಕ್ಷೇತ್ರದಲ್ಲಿ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೆಜಿಎಫ್‌ ನಗರಕ್ಕೆ ಬಂದವರೂ ಯಾರು ವಾಪಸ್‌ ಹೋಗಬಾರದು ಆ ರೀತಿಯಲ್ಲಿ ಚಿನ್ನದ ಗಣಿಗಳ ನಗರದ ಇತಿಹಾಸವನ್ನು ಮರುಕಳಿಸುವ ರೀತಿ ಅಭಿವೃದ್ದಿಪಡಿಸುವುದಾಗಿ ತಿಳಿಸಿದರು. ದೇವನಹಳ್ಳಿಯಲ್ಲಿ ತಂದೆಯ ಗೆಲವು ಸಂತಸ ತಂದಿದೆ: ದೇವನಹಳ್ಳಿ ನನ್ನ ಅಜ್ಜಿಯ ಊರಾಗಿದ್ದು, ನಮ್ಮ ತಂದೆಗೆ ದೇವನಹಳ್ಳಿಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಪಕ್ಷದ ಹೆ„ಕಮಾಂಡ್‌ ಮುಂದೆ ವ್ಯಕ್ತಪಡಿಸಿದ್ದರು, ಅದರಂತೆ ದೇವನಹಳ್ಳಿ ಯಲ್ಲಿ ನಮ್ಮ ತಂದೆ ಸ್ಪರ್ಧೆ ಮಾಡಿ ಜಯಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ದಾಖಲೆ ಮತಗಳ ಗೆಲವು: ಕೆಜಿಎಫ್‌ ವಿಧಾನ ಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕಿ ರೂಪಕಲಾ ಶಶಿಧರ್‌ 81,569 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪ ಪ್ರತಿಸ್ಪರ್ಧಿಯಾದ ಬಿಜೆಪಿಯ ಅಶ್ವಿ‌ನಿ ಸಂಪಂಗಿ ಅರವನ್ನು ಸೋಲಿಸಿ ಕ್ಷೇತ್ರದ ಇತಿಹಾಸದಲ್ಲೇ ದಾಖಲೆ ಗೆಲುವನ್ನು ಪಡೆದಿದ್ದಾರೆ. 2018ರ ಚುನಾವಣೆಯಲ್ಲಿ ಶಾಸಕಿ ರೂಪಕಲಾ ಶಶಿಧರ್‌ವರು 71 ಸಾವಿರ ಮತಗಳನ್ನು ಪಡೆದಿ ದ್ದರು, 2023ರಲ್ಲಿ ಇನ್ನೂ 10 ಸಾವಿರ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಕೆಜಿಎಫ್‌ ಜನತೆ ಅಭಿವೃದ್ಧಿ ಪರವಾಗಿ ಮತವನ್ನು ನೀಡಿರುವುದಾಗಿ ಶಾಸಕರು ತಿಳಿಸಿದರು.

ತಮ್ಮ ಸಮೀಪ ಸ್ಪರ್ಧಿ ಬಿಜೆಪಿ ಪಕ್ಷದ ಅಶ್ವಿ‌ನಿ ಸಂಪಂಗಿ ಅವರು 31,102 ಮತಗಳನ್ನು ಪಡೆದಿ ಕೊಂಡರೆ, ಆರ್‌ಪಿಐನ ಎಸ್‌.ರಾಜೇಂದ್ರನ್‌ 29,775 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ, ಶಾಸಕಿ ರೂಪಕಲಾಶಶಿಧರ್‌ 2018 ರಲ್ಲಿ 41 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು, 2023 ರಲ್ಲಿ 50 ಸಾವಿರಗಳ ಮತಗಳ ಲೀಡ್‌ನ‌ಲ್ಲಿ ಜಯಗಳಿಸಿದ್ದಾರೆ.

Advertisement

ಕಾರ್ಯಕರ್ತರಿಂದ ಅದ್ದೂರಿ ವಿಜಯೋತ್ಸವ: ಗಾಂವೃತ್ತದಲ್ಲಿ ಶಾಸಕರ ಗೆಲುವನ್ನು ಪಟಾಕಿ ಸಿಡಿಸಿ ಗಾಂಧಿ  ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂ ಲಕ ನೂರಾರು ಕಾರ್ಯಕರ್ತರು ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಿದರು, ನಂತರ ಗಾಂಧಿ ವೃತ್ತ, ಸೂರಜ್‌ಮಲ್‌ ವೃತ್ತದ ಮೂಲಕ ಅಂಬೇ ಡ್ಕರ್‌ ಪಾರ್ಕ್‌ವರೆಗೂ ರೋಡ್‌ ಶೋ ನಡೆಸಿದರು, ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ಆಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next