ಬೆಂಗಳೂರು: ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಖಾಲಿ ಹುದ್ದೆಗಳನ್ನು ಕೊಟ್ಟರೆ ತಪ್ಪೇನಿದೆ. ನನ್ನನ್ನು ಸುಮ್ಮನಿರಿಸಲು ಯಾರ ಕೈಯಲ್ಲೂ ಆಗುವುದಿಲ್ಲ. ಸಂದರ್ಭ ಬಂದಾಗ ನೋಡೋಣ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಗೆ ನಾವ್ಯಾರು ಕಾಯುತ್ತಿಲ್ಲ. ನಾವು ಜಾತ್ರೆ ಪಕ್ಷದವರಲ್ಲ. ಕೇಳಲು ನಮ್ಮಬಾಯಿಗೆ ಯಾರು ಗಂ ಹಾಕಿಲ್ಲ. ಸಿಎಂ, ವರಿಷ್ಠರು ನಿರ್ಧಾರ ಮಾಡಬೇಕು ಎಂದರು.
ಇದನ್ನೂ ಓದಿ:ಹೂಡಿಕೆದಾರರಿಗೆ ನಷ್ಟ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ
40 ಪರ್ಸೆಂಟ್ ಸರ್ಕಾರ ಎಂಬ ಆರೋಪ, ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಕಾಂಗ್ರೆಸ್ ನವರು ಸರ್ವ ಸ್ವತಂತ್ರರು. ಎಲ್ಲಕಡೆ ಸುಮ್ಮನೆ ಹೋಗುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದವರೆಂದು ಹೇಳುತ್ತಾರೆ ಆದರೆ ದೇಶ ಲೂಟಿ ಹೊಡೆದವರು ಕಾಂಗ್ರೆಸ್ ನವರು. ಅವರ ಲೂಟಿಗೆ ದಿಂಬು ಹಾಸಿಗೆ ಹಗರಣ ಸಾಕಲ್ಲ ಎಂದು ತಿರುಗೇಟು ನೀಡಿದರು.
ನಾವು ಪಾರದರ್ಶಕವಾಗಿದ್ದೇವೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ನಮ್ಮ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವಿಲ್ಲ. ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದೇವೆ ಎಂದರು.