Advertisement

ಶ್ರೀರಂಗಪಟ್ಟಣ: ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು; ಶಾಸಕ ಶ್ರೀಕಂಠಯ್ಯ ಆಕ್ರೋಶ

05:22 PM Aug 01, 2022 | Team Udayavani |

ಶ್ರೀರಂಗಪಟ್ಟಣ: ತಾಪಂ ಕಚೇರಿಯಲ್ಲಿ ನಡೆದ ಆಗಸ್ಟ್ 15 ರ ದಿನಾಚರಣೆಯ ಪೂರ್ವಭಾವಿ ಸಭೆಗೆ ಅಧಿಕಾರಿಗಳ ಗೈರು ಹಾಜರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅಸಮದಾನ ವ್ಯಕ್ತಪಡಿಸಿ ಸಭೆಯನ್ನು ರದ್ದುಗೊಳಿಸಿ ಹೊರ ನಡೆದ ಘಟನೆ ನಡೆಯಿತು.

Advertisement

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ  ಶಾಸಕರ ನೇತೃತ್ವದಲ್ಲಿ ಆಯೋಜಿಸಿದ ಪೂರ್ವಭಾವಿ ಸಭೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು,ನೀರಾವರಿ,ಅಗ್ನಿ ಶಾಮಕ ದಳ, ,ತೋಟಗಾರಿಕೆ,ಉಪನೊಂದಾಣಾಧಿಕಾರಿ ,ಲೋಕೊಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.

ಈ ಹಿನ್ನೆಲೆ 75ನೇ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿ ಬಹಳ ವಿಜ್ರಂಭಣೆಯಿಂದ ಆಚರಣೆ ಮಾಡಲು ಮುಂದಾಗದ ಅಧಿಕಾರಿಗಳು ಪೂರ್ವಭಾವಿ ಸಭೆಗೆ ಗೈರಾಗಿರುವುದು ಖಂಡನೀಯವಾಗಿದೆ. ಇದರಿಂದ ದೇಶಾಭಿಮಾನ ಇಲ್ಲದಿರುವುದು ಕಂಡು ಬಂದಿದೆ. ಇವರ ಗೈರು ಹಾಜರಾಗಿರುವುದಕ್ಕೆ ಮೇಲಾಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಲು ಪತ್ರ ಬರೆದು ಮುಂದಿನ ದಿನ ಮತ್ತೊಂದು ಸಭೆ ಕರೆಯುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಕೆಲ ಇಲಾಖೆ ಅಧಿಕಾರಿಗಳು ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next