Advertisement
ಶಿರಹಟ್ಟಿ: ಶಾಸಕ ರಾಮಣ್ಣ ಲಮಾಣಿ ಕ್ಷೇತ್ರದ ಮೂರೂ ತಾಲೂಕುಗಳ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಸೋಂಕು ನಿವಾರಣೆಗೆ ವಿಶೇಷ ಪ್ರಯತ್ನ ನಡೆಸಿದ್ದಾರೆ.
Related Articles
Advertisement
ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯಕ್ಕಿಂತ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಸೋಂಕಿನ ವಿರುದ್ಧ ಕಹಳೆ ಮೊಳಗಿಸಿದ್ದಾರೆ. ಮೂರು ತಾಲೂಕುಗಳಲ್ಲಿ ಕಾಲಕಾಲಕ್ಕೆ ಸಂಚರಿಸಿ ವೈದ್ಯರು ಹಾಗೂ ಸಿಬ್ಬಂದಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅನೇಕ ರೀತಿಯಲ್ಲಿ ಸಹಾಯ- ಸಹಕಾರ ನೀಡಿ ರೋಗಿಗಳು ಮತ್ತು ವಾರಿರ್ಯರ್ ಗಳಲ್ಲೂ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಭೇಟಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಮೃತಪಟ್ಟ ನಾಲ್ಕೈದು ದಿನಗಳ ಬಳಿಕ ಶಾಸಕ ರಾಮಣ್ಣ ಲಮಾಣಿ ಅವರು ಆಸ್ಪತ್ರೆಗೆ ಭೇಟಿ ನೀಡಿದರು.
ಹಿರಿವಯಸ್ಸಿನಲ್ಲೂ ಪಿಪಿಕಿಟ್ ಧರಿಸಿ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರೊಂದಿಗೆ ಸಂವಾದ ನಡೆಸಿ ದರು. ಆಸ್ಪತ್ರೆಯಲ್ಲಿರುವ ವ್ಯವಸ್ಥೆ, ವೈದ್ಯಕೀಯ ಸೇವೆಗಳ ಕುರಿತು ರೋಗಿಗಳಿಂದ ಸಮಾಲೋಚನೆ ನಡೆಸಿದರು. ಅದರಂತೆ ಶಿರಹಟ್ಟಿ-ಲಕ್ಷೆ¾àಶ್ವರ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದ ಶಾಸಕರು, ಸೋಂಕಿತರ ಬಗ್ಗೆ ಆರೋಗ್ಯಾಧಿ ಕಾರಿಗಳಿಂದ ಮಾಹಿತಿ ಪಡೆದರು. ಸೋಂಕಿತರಿಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವುದರ ಜತೆಗೆ ಪೌಷ್ಟಿಕ ಆಹಾರ ಒದಗಿಸಬೇಕು. ಸೋಂಕಿತರ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ಲೋಪ ಸಹಿಸಲಾಗದೆಂದು ಎಚ್ಚರಿಸಿದರು.
ಸೋಂಕಿತರು, ಬಡವರಿಗೆ ನೆರವಿನ ಹಸ್ತ: ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಕು ನಿವಾರಣೆ ಮತ್ತು ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಶಾಸಕ ರಾಮಣ್ಣ ಲಮಾಣಿ ನೆರವಿನ ಹಸ್ತಚಾಚಿ ದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪೂರದ ಮುರಾರ್ಜಿ ವಸತಿ ಶಾಲೆ ಭೇಟಿ ನೀಡಿದ್ದ ಶಾಸಕರು ಸೋಂಕಿತರ ಅಹವಾಲು ಆಲಿಸಿದ್ದಾರೆ. ಸೋಂಕಿತರು ಬಿಸಿ ನೀರಿನ ಹಬೆ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸ್ಟೀಮರ್‌ಗಳನ್ನು ಒದಗಿಸಿದ್ದಾರೆ.
ಸುಮಾರು 500 ಸ್ಟೀಮರ್‌ಗಳನ್ನು ಖರೀದಿಸಿದ್ದ ಶಾಸಕರು, ವಿವಿಧ ಕೋವಿಡ್ ಕೇರ್ ಸೆಂಟರ್‌ಗಳಲ್ಲಿರುವ ಸೋಂಕಿತರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕೆಲ ಪೊಲೀಸರಿಗೂ ವಿತರಿಸಿದ್ದಾರೆ. ಬಡವರಿಗೆ ಮತ್ತು ಗುಡಿಸಲು ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಿದ್ದಾರೆ. ವಾರಿಯರ್ಸ್‌ಗಳಾದ ಪೊಲೀಸ್ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ ಮಾಡಿದ್ದಾರೆ. ಅ ಧಿಕಾರಿಗಳಿಗೆ ಎಚ್ಚರಿಕೆ: ಲಕ್ಷೆ ¾àಶ್ವರ ಸಮುದಾಯ ಆರೋಗ್ಯ ಕೇಂದ್ರದ ಕೆಲ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಹಾಜರಾಗುತ್ತಿಲ್ಲ ಎಂದು ಸಚಿವ ಸುಧಾಕರ್ ಎದುರು ಪ್ರಸ್ತಾಪಿಸುವ ಮೂಲಕ ಆಲಸಿ ವೈದ್ಯಕೀಯ ಸಿಬ್ಬಂದಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.