ಶಿರಾ: ಸರ್ಕಾರಿ ಬಸ್‌ನಲ್ಲಿ ಸಾಮಾನ್ಯಪ್ರಯಾಣಿಕರಂತೆ ಇತರೆ ಸ್ನೇಹಿತರೊಂದಿಗೆಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯನೆಲ್ಲದಿಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದ ಶಾಸಕರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು.
ಶಾಲೆಯ ಬಿಸಿಯೂಟದವರು ಸಿದ್ಧಪಡಿಸಿದ ಅನ್ನ ಮತ್ತು ಸೊಪ್ಪಿನ ಸಾರು ಸೇವನೆಮಾಡಿದ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡನಂತರ ನೆಲ್ಲದಿಮ್ಮಹಳ್ಳಿ ದಲಿತ ಕಾಲೋನಿಗೆತೆರಳಿದರು. ಕಳೆದ 20 ವರ್ಷಗಳಿಂದ ಈಕಾಲೋನಿಯಲ್ಲಿ ಗುಡಿಸಲು ಹಾಕಿಕೊಂಡುವಾಸ ಮಾಡುತ್ತಿದ್ದೇವೆ. ಸರ್ಕಾರ ನಿವೇಶನಹಕ್ಕು ಪತ್ರ ನೀಡಿಲ್ಲ ಎಂದರು.
ಈ ವೇಳೆಶಾಸಕರು ತಕ್ಷಣ ತಹಶೀಲ್ದಾರ್‌ರಿಗೆ ಕರೆಮಾಡಿ ನಿವೇಶನ ಹಕ್ಕು ಪತ್ರ ವಿತರಿಸುವಂತೆ ಸೂಚಿಸಿದರು. ಕಾಲೋನಿ ಪ್ರದಕ್ಷಿಣೆ ಹಾಕುವವೇಳೆ ಅಂಧ ವೃದ್ಧೆಯನ್ನು ಗಮನಿಸಿದ ಶಾಸ ಕರು, ಅಮ್ಮನಿಮಗೆ ಪಿಂಚಣಿ ಬರುತ್ತಿದೆಯಾ ಎಂದು ಪ್ರಶ್ನೆ ಮಾಡಿದರು. ಇಲ್ಲ ಎಂದಾಗ,ತಕ್ಷಣ ದಾಖಲಾತಿ ಪತ್ರ ಪಡೆದು 2-3ದಿನಗಳಲ್ಲಿ ಪಿಂಚಣಿ ಮಂಜೂರು ಪತ್ರ ನೀಡುವ ಭರವಸೆ ನೀಡಿದರು.
ಬೈಕ್‌ನಲ್ಲಿ ಎಂಎಲ್ಎ ಸಂಚಾರ: ಗ್ರಾಮಸ್ಥರ ಮನವಿಗೆ, ಶಾಸಕ ರಾಜೇಶ್‌ಗೌಡಸ್ನೇಹಿತರೊಂದಿಗೆ ಬೈಕ್‌ನಲ್ಲಿ ಚಿನ್ನೇನಹಳ್ಳಿಸೇರಿದಂತೆ ಸುತ್ತಮುತ್ತಲ ರೈತರ ಜಮೀನುವೀಕ್ಷಣೆ ಮಾಡಿ, ಸಣ್ಣ ನೀರಾವರಿ ಇಲಾಖೆಅಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯಕತೆಇರುವ ಕಡೇ ಚೆಕ್ ಡ್ಯಾಂ ಮಂಜೂರುಮಾಡಿಸಿ ಕೊಡುವುದಾಗಿ ಹೇಳಿದರು.
ಸಮಸ್ಯೆ ಕೇಳಿದ ಶಾಸಕ: ನೆಲ್ಲದಿಮ್ಮನಹಳ್ಳಿಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯಮಾಡಿದ್ದ ಶಾಸಕರು ಸಂಜೆ ನೆಲ್ಲದಿಮ್ಮನಹಳ್ಳಿ,ಚಿನ್ನೇನಹಳ್ಳಿ, ರಂಗನಹಳ್ಳಿ ಗ್ರಾಮಗಳ ಪ್ರದಕ್ಷಣೆವೇಳೆ ನೂರಾರು ಜನ ಗ್ರಾಮದ ಅಭಿವೃದ್ಧಿ,ರಸ್ತೆ, ಕುಡಿವ ನೀರು, ಬಸ್ ಸೌಲಭ್ಯ ಸೇರಿದಂತೆಇತರೆ ಸಮಸ್ಯೆಗಳ ಬಗ್ಗೆ ಆಲಿಸಿದರು. ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯಮಾಡಿದ್ದ ಶಾಸಕ ರಾಜೇಶ್‌ಗೌಡ ಸಾಮಾನ್ಯವ್ಯಕ್ತಿಯಂತೆ ಶಾಲಾ ಕೊಠಡಿಯಲ್ಲಿ ಮಲಗಿನಿದ್ರಿಸಿದರು.
ಮುಂಜಾನೆ ವಾಯು ವಿಹಾರಕ್ಕೆ ತೆರಳಿ ಮತ್ತೆ ಜನರೊಡನೆ ಬೆರತು ಸಮಸ್ಯೆಆಲಿಸಿದರು. ತದ ನಂತರ ತಿಂಡಿ ಸೇವನೆಮಾಡಿ ಗ್ರಾಮ ವಾಸ್ತವ್ಯ ಮುಗಿಸಿ ಹೊರಡುವ ವೇಳೆ ಶಾಲೆ ಆವರಣ ಸ್ವಚ್ಛತೆಗೆ ಇಳಿದರು. ರಾತ್ರಿ-ಬೆಳಗ್ಗೆ ಊಟ ಮಾಡಿ ಎಸೆದಿದ್ದ ಎಲೆ ಮತ್ತು ಟೀ ಲೋಟ ಸ್ವಚ್ಛಗೊಳಿಸಿ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಹಳ್ಳಿಗಾಡಿನ ಬಡವರ ಸಮಸ್ಯೆಗಳ ಬಗ್ಗೆ ಹತ್ತಿರದಿಂದ ತಿಳಿದು ಕೊಳ್ಳಲು ಗ್ರಾಮ ವಾಸ್ತವ್ಯ ಸಹಕಾರಿಯಾಯಿತು. ಮನೆ ಮಗನಂತೆ ಕಾಣುವ ಜನರ ಪ್ರೀತಿಬೆಲೆ ಕಟ್ಟಲು ಸಾಧ್ಯವಿಲ್ಲ. ಶಿರಾಕ್ಷೇತ್ರ ಆಭಿವೃದ್ಧಿ ಜತೆಗೆ ಜನ ಸೇವೆ ಮಾಡುವ ಮೂಲಕ ಋಣ ತೀರಿಸುತ್ತೇನೆ.
– ಡಾ.ಸಿ.ಎಂ.ರಾಜೇಶ್‌ಗೌಡ,ಶಾಸಕ