Advertisement

ಶಾಸಕ ರಾಜೇಶ್‌ ರೋಡ್‌ ಶೋ

03:11 PM May 11, 2018 | Team Udayavani |

ಜಗಳೂರು: ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ತಾಲೂಕಿಗೆ ಮುಕ್ತಿ ದೊರಕಿಸಲು ಶಾಶ್ವತ ಯೋಜನೆಗಳ ಜಾರಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಎಚ್‌.ಪಿ. ರಾಜೇಶ್‌ ತಿಳಿಸಿದರು.

Advertisement

ಪಟ್ಟಣದಲ್ಲಿ ಗುರುವಾರ ರೋಡ್‌ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ರಸ್ತೆ, ಚರಂಡಿಯಂತಹ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ. ಮುಂದಿನ ಬಾರಿಗೆ ಕ್ಷೇತ್ರದಲ್ಲಿ ಶಾಶ್ವತ ಯೋಜನೆಗಳ ಜಾರಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ನಿರುದ್ಯೋಗ ಹೆಚ್ಚಾಗಿರುವ ಜಗಳೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕಿದೆ. ಅದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಲಾಗುವುದು ಎಂದರು. 

ಇದಕ್ಕಿಂತ ಮುಖ್ಯವಾಗಿ ತಾಲೂಕಿನಲ್ಲಿ ನೀರಾವರಿ ಆಗದೇ ಹೋದರೆ ಭವಿಷ್ಯವಿಲ್ಲ. ಹೀಗಾಗಿ ಪ್ರಗತಿ ಹಂತದಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುವ ಶಪಥ ಮಾಡಿದ್ದೇನೆ. 52 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದರು. 

ಪ್ರತಿಪಕ್ಷದವರು ಮೂಡಿಸುತ್ತಿರುವ ಯಾವುದೇ ಗೊಂದಲಕ್ಕೆ ಜನತೆ ಕಿವಿಗೊಡಬಾರದು. ಕಾಂಗ್ರೆಸ್‌ಗೆ ಮತ ನೀಡುವ
ಮೂಲಕ ತಾಲೂಕಿನ ಅಭಿವೃದ್ಧಿಗೆ ಬೆಂಬಲಿಸಬೇಕೆಂದುಅವರು ಮತದಾರರಲ್ಲಿ ಮನವಿ ಮಾಡಿದರು.

Advertisement

ಕಾಂಗ್ರೆಸ್‌ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಮುಖಂಡರಾದ ಬಸಾಪುರ ರವಿಚಂದ್ರ, ಎಲ್‌.ಬಿ. ಭೈರೇಶ್‌, ಗಿರೀಶ್‌ ಒಡೆಯರ್‌, ತಾಪಂ ಉಪಾಧ್ಯಕ್ಷ ಮುದೇಗೌಡ್ರ ಬಸವರಾಜಪ್ಪ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕಲ್ಲೇಶರಾಜ್‌ ಪಟೇಲ್‌, ತಿಮ್ಮರಾಯಪ್ಪ ಸೇರಿದಂತೆ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next