Advertisement

ಸುಳ್ಳು ಸುದ್ದಿ ಹರಡಿ ದಿಕ್ಕು ತಪ್ಪಿಸಿದ್ದ ಪ್ರೀತಂಗೌಡ!

09:43 AM Apr 24, 2023 | Team Udayavani |

ಹಾಸನ: ತಮ್ಮ ಪತ್ನಿ ಕಾವ್ಯ ಅವರಿಂದ ಬುಧವಾರ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಹಾಕಿಸಿ ಅಚ್ಚರಿ ಮೂಡಿಸಿದ್ದ ಶಾಸಕ ಪ್ರೀತಂ ಗೌಡ ಅವರು ಗುರುವಾರ ಹೊಳೆ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರಾದರೂ ನಾಮ ಪತ್ರ ಸಲ್ಲಿಸದೆ ಮಾಧ್ಯಮಗಳ ದಾರಿ ತಪ್ಪಿಸುವ ಕೆಲಸ ಮಾಡಿ ಅಪಹಾಸ್ಯಕ್ಕೀಡಾದರು.

Advertisement

ಶಾಸಕ ಪ್ರೀತಂಗೌಡ ಅವರು ಸೋಮವಾರವೇ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬುಧವಾರ ಪ್ರೀತಂಗೌಡ ಅವರ ಪತ್ನಿ ಎಚ್‌.ಜಿ.ಕಾವ್ಯ ಅವರು ಬಿಜೆಪಿಯಿಂದ ಹಾಗೂ ಪಕ್ಷೇತರರಾಗಿ ಎರಡು ಸೆಟ್‌ ನಾಮ ಪತ್ರಗಳನ್ನು ಸಲ್ಲಿಸಿದರು. ಪತಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ನಂತರ ಪತ್ನಿ ಏಕೆ ನಾಮಪತ್ರ ಸಲ್ಲಿಸಿದರು ಎಂದು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದ್ದರೂ ಪೀತಂಗೌಡ ಅವರು ಮಾತ್ರ ಸ್ಪಷ್ಟನೆ ನೀಡದೆ ಇನ್ನೂ ಕುತೂಹಲ ಉಳಿಸಿದ್ದಾರೆ.

ಈ ನಡುವೆ ಗುರುವಾರ ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ಅವರು ಹೊಳೆನರಸೀಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಹರಿಬಿಟ್ಟರು. ನಾಮಪತ್ರ ಸಲ್ಲಿಸಲು ಹೊಳೆನ ರಸೀಪುರಕ್ಕೆ ಹೋಗುತ್ತಿರುವುದಾಗಿ ಮಾಧ್ಯ ಮಗಳಿಗೆ ಪ್ರತಿಕ್ರಿಯೆಯನ್ನೂ ನೀಡಿದರು. ಅದಕ್ಕೆ ಪೂರಕವಾಗಿ ಹೊಳೆನರಸೀಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ದೇವರಾಜೇಗೌಡ ಅವರು ತುರ್ತು ಸುದ್ದಿ ಗೋಷ್ಠಿ ನಡೆಸಿ ದೆಹಲಿಯಿಂದ ಸಂದೇಶ ಬಂದಿದೆ. ಪ್ರೀತಂಗೌಡ ಅವರು ಹೊಳೆನರಸೀಪು ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹಾಸನದಿಂದ ಹೊರಟಿದ್ದಾರೆ. ಅವರ ಜೊತೆ ನಾನೂ ಹೋಗುತ್ತಿದ್ದೇನೆ ಎಂದು ಹೇಳಿದರು.

ಪ್ರೀತಂಗೌಡ ಅವರು ಹೊಳೆನರ ಸೀಪುರದಿಂದ ಸ್ಪರ್ಧೆಗಿಳಿಯುವುದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುವೆ. ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುವೆ. ನಾನು ಹಾಸನ ದಿಂದಲೂ ನಾಮಪತ್ರ ಸಲ್ಲಿಸುವೆ ಎಂದು ಹೇಳಿ ಮತ್ತಷ್ಟು ಗೊಂದಲ ಮೂಡಿಸಿದರು. ಆದರೆ, ದೆಹಲಿ ಬಿಜೆಪಿ ನಾಯಕರಿಂದ ಬಂದ ಸಂದೇಶದ ಬಗ್ಗೆ ಮಾತ್ರ ಹೇಳುವುದಿಲ್ಲ. ಅದು ಗೌಪ್ಯ ಎಂದೆಲ್ಲ ಹೇಳಿದರು ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸಲು ಪ್ರೀತಂಗೌಡ ಹೊಟ್ಟಿದ್ದಾರೆ ಎಂದು ಸುದ್ದಿ ಹರಡಿಸಿದರೂ ಅವರು ಹೋಗಿದ್ದು ಮಾತ್ರ ಸಕಲೇಶಪುರಕ್ಕೆ.

ಅಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 4 ಗಂಟೆಯಾದರೂ ಪ್ರೀತಂಗೌಡ ಅವರು ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸಲೇ ಇಲ್ಲ. ಆದರೆ, ಏಕೆ ಹೀಗೆ ಸುಳ್ಳು ಸುದ್ದಿ ಹರಿಡಿದರು ಎಂಬುದು ಮಾತ್ರ ಗೊತ್ತಾಗಿಲ್ಲ.

Advertisement

ಗುರುವಾರ ಹಾಸನದಲ್ಲಿ ಜೆಡಿಎಸ್‌ ರ್ಯಾಲಿ ಹಮ್ಮಿಕೊಂಡಿದ್ದು,. ರ್ಯಾಲಿಯಲ್ಲಿ ದೇವೇಗೌಡರು, ಎಚ್‌ಡಿಕೆ , ಎಚ್‌ಡಿ.ರೇವಣ್ಣ ಮತ್ತಿತರರು ಪಾಲ್ಗೊಂಡಿದ್ದರು. ಅಲ್ಲಿ ಮಾಧ್ಯಮಗಳು ಕೇಂದ್ರೀಕರಿಸದೆ ನಾನು ನಾಮಪತ್ರ ಸಲ್ಲಿಸುವ ಸುದ್ದಿಗೆ ಮಹತ್ವ ನೀಡಿ ಜೆಡಿಎಸ್‌ ರ್ಯಾಲಿಯ ಸುದ್ದಿಯ ಮಹತ್ವ ಕಡಿಮೆ ಮಾಡಿಸ ಲು ಪ್ರೀತಂಗೌಡ ಅವರು ನಾಟಕವಾಡಿರಬಹುದು ಎಂದು ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next