ಸೇಡಂ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಸೋಮವಾರ ಸಿಟಿ ರೌಂಡ್ಸ್ ಕೈಗೊಂಡಿದ್ದರು. ಪಟ್ಟಣದ ಹಳೆಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಕಟ್ಟಡವನ್ನು ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಬಳಸಬಹುದೇ? ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಅಲ್ಲದೆ ಕೂಡಲೇ ಲಸಿಕೆಯನ್ನು ಹಳೆಯ ಆಸ್ಪತ್ರೆಯಲ್ಲೇ ಪ್ರಾರಂಭಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸುರೇಶ ಮೇಕಿನ್ ಮತ್ತು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಗೀತಾ ಪಾಟೀಲ ಅವರಿಗೆ ಸೂಚಿಸಿದರು. ವೈದ್ಯಕೀಯ ಸಿಬ್ಬಂದಿಗಳ ಕೊರತೆ ನೀಗಿಸಲು ಕೂಡಲೇ ನೇಮಿಸಿಕೊಳ್ಳಬೇಕು. ಸಿಬ್ಬಂದಿಗೆ ತರಬೇತಿ ನೀಡಿ ಇರುವ ವೆಂಟಿಲೇಟರ್ ಬಳಸಿಕೊಳ್ಳಬೇಕು ಎಂದು ಹೇಳಿದರು. ನಂತರ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಲಸಿಕಾ ಕೇಂದ್ರ, ಪರೀûಾ ಕೇಂದ್ರ ಹಾಗೂ ಆಕ್ಸಿಜನ್ ಸರಬ ರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್‌ಗಳ ಅವಶ್ಯಕತೆ ಬಿದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಅವಶ್ಯಕತೆಯನ್ನು ಪೂರೈಸುವ ಭರವಸೆ ನೀಡಿದರು. ಪರೀûಾ ಕೇಂದ್ರದ ಬಳಿ ನಿರಂತರ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಬೇಕು ಎಂದು ಪಿಎಸ್‌ಐ ನಾನಾಗೌಡ ಅವರಿಗೆ ಸೂಚಿಸಿದರು. ಶ್ರೀ ಸಿಮೆಂಟ್‌ಗೆ ಭೇಟಿ: ಕಲಬುರಗಿ ಮತ್ತು ಬೀದರ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಿಗೆ ನಿರಂತರ ಆಕ್ಸಿಜನ್ ಪೂರೈಕೆ ಮಾಡುತ್ತಿರುವ ತಾಲೂಕಿನ ಕೋಡ್ಲಾ, ಬೆನಕನಹಳ್ಳಿಯ ಶ್ರೀ ಸಿಮೆಂಟ್ ಘಟಕಕ್ಕೆ ಭೇಟಿ ನೀಡಿದ ಶಾಸಕ ತೇಲ್ಕೂರ, ಆಕ್ಸಿಜನ್ ಪ್ಲಾಂಟ್ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಶ್ರೀ ಸಿಮೆಂಟ್‌ನವರ ಕಾಳಜಿಯಿಂದ ನೂರಾರು ಜೀವಗಳಿಗೆ ನೆರವಾದಂತಾಗಿದೆ.
ಅವರ ಈ ಕಾರ್ಯಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ. ಮುಂದೆಯೂ ಸಹ ಮತ್ತಷ್ಟು ಜನ ಸೇವೆಯ ಕಾರ್ಯಗಳನ್ನು ಮಾಡುವಂತೆ ಮನವಿ ಮಾಡಿದರು. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ, ಮುಖಂಡ ಶಿವಲಿಂಗರೆಡ್ಡಿ ಪಾಟೀಲ ಬೆನಕನಹಳ್ಳಿ, ಗುರು ತಳಕಿನ್, ಓಂಪ್ರಕಾಶ ಪಾಟೀಲ, ನಾಗರಾಜ ಹಾಬಾಳ, ಭೀಮರಾಯ ಹಣಮನಹಳ್ಳಿ, ಕಂದಾಯ ನಿರೀಕ್ಷಕ ಶರಣಗೌಡ ಇನ್ನಿತರರು ಉಪಸ್ಥಿತರಿದ್ದರು.