Advertisement

ಅರ್ಹರಿಗೆ ನಿವೇಶನ ಹಂಚಿಕೆ: ಶಾಸಕ ಭರವಸೆ

05:51 PM Mar 05, 2021 | Team Udayavani |

ವಿಜಯಪುರ: ಹಾರೋಹಳ್ಳಿಯಲ್ಲಿಅರ್ಹರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕ ನಿಸರ್ಗನಾರಾಯಣಸ್ವಾಮಿ ಹೇಳಿದರು.

Advertisement

ಹೋಬಳಿಯ ಹಾರೋಹಳ್ಳಿಹಾರೋಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಕಾಲೋನಿಯ ಹಲವು ಮನೆಗಳಿಗೆ ಭೇಟಿನೀಡಿ, ಜನ ವಾಸ ಮಾಡುತ್ತಿರುವ ಪರಿಸ್ಥಿತಿ ಬಗ್ಗೆ ಖುದ್ದು ಅವಲೋಕಿಸಿ ಮಾಹಿತಿ ಪಡೆದುಕೊಂಡು ಮಾತನಾಡಿದರು.

30 ವರ್ಷದಿಂದ ಭರವಸೆ ನೀಡಿದ್ದಾರೆ: ಸುಮಾರು 30 ವರ್ಷಗಳಿಂದ ನಿವೇಶನ ಕೊಡುವುದಾಗಿ ಸುಳ್ಳು ಭರವಸೆಗಳನ್ನುನೀಡುತ್ತಾ ಚುನಾವಣೆಗಳಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಆದರೆ, ಇದುವರೆಗೂ ಯಾರೊಬ್ಬರಿಗೂ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಇದರಿಂದ ಜನಸಮಸ್ಯೆಗಳಿಗೆ ಸಿಲುಕಿದ್ದಾರೆ. ಆದ್ದರಿಂದ ತಹಶೀಲ್ದಾರ್‌ ಸೇರಿದಂತೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆಂದು ತಿಳಿಸಿದರು.

ಸೌಕರ್ಯ ಕಲ್ಪಿಸುವೆ: ಬಡವರಿಗೆ ನಿವೇಶನ ಹಂಚಿಕೆ ಮಾಡುವ ವಿಚಾರದಲ್ಲಿ ತಾರತಮ್ಯ,ರಾಜಕೀಯ ಮಾಡುವುದಿಲ್ಲ. ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಕೇವಲ 1 ಎಕರೆಯಷ್ಟು ಪ್ರದೇಶದಲ್ಲಿ ನೂರಾರು ಕುಟುಂಬಗಳಿರುವುದು ಕಂಡುಬಂದಿದೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದುತನ್ನ ಮೊದಲ ಆದ್ಯತೆ. ಸಂಬಂಧಪಟ್ಟಪಂಚಾಯ್ತಿ ಅಧಿಕಾರಿಗೂ ಸೂಚನೆ ನೀಡಲಾಗಿದೆ. ಪುನಹ ಹೊಸದಾಗಿ ಅರ್ಜಿ ಪಡೆದುಕೊಂಡು ಗ್ರಾಪಂನಲ್ಲಿ ನಿಯಮಾನುಸಾರ ಅರ್ಹರನ್ನು ಆಯ್ಕೆ ಮಾಡಿ ಮಂಜೂರು ಮಾಡಲಾಗುತ್ತದೆ ಎಂದು ವಿವರಿಸಿದರು.

ಸಮಸ್ಯೆ ಬಗೆಹರಿಸಲು ಆಗ್ರಹ: ಗ್ರಾಪಂ ಸದಸ್ಯೆ ಮಾಲಾ ಮಾತನಾಡಿ, ಸರ್ವೇನಂಬರ್‌ 70, 73ರಲ್ಲಿ ಸರ್ಕಾರಿ ಗೋಮಾಳವಿದೆ. ಇದರಲ್ಲಿ ಕೆಲವರು ಶೆಡ್‌ಗಳನ್ನುನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ.ಆದರೆ, ಯಾರಿಗೂ ಅಧಿಕೃತವಾಗಿ ದಾಖಲೆ ಮಾಡಿಕೊಟ್ಟಿಲ್ಲ. ಇದರಿಂದ ಸ್ಥಳೀಯರಿಗೆತುಂಬಾ ಸಮಸ್ಯೆಯಾಗಿದ್ದು, ಶೀಘ್ರವೇ ಬಗೆಹರಿಸಬೇಕು ಎಂದರು.

Advertisement

ಆರೋಗ್ಯವಿಲ್ಲ: ಗ್ರಾಪಂ ಸದಸ್ಯ ಮುನಿರಾಜು ಮಾತನಾಡಿ, ಇಲ್ಲಿ ವಾಸವಿಲ್ಲದೆ ಬೆಂಗಳೂರು ಸೇರಿದಂತೆ ಬೇರೆ ಊರುಗಳಲ್ಲಿ ವಾಸವಾಗಿರುವವರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ. ಬೇರೆ ಊರುಗಳಲ್ಲಿ ಇರುವವರಿಗೆ ನೀಡಬಾರದು. ಶಾಸಕರು ಸ್ವತಃ ಪರಿಸ್ಥಿತಿ ಅವಲೋಕಿಸಿದ್ದಾರೆ.  ನಮ್ಮೂರಿನ ಬಡವರಿಗೆ ಮೊದಲು ನ್ಯಾಯ ಸಿಗಬೇಕು. ಅಂಗನವಾಡಿ ಬಳಿ ಕೊಳಚೆ ನೀರು ಕುಂಟೆಯಂತೆ ನಿಂತಿರುವ ಕಾರಣ, ಮಕ್ಕಳ ಆರೋಗ್ಯ ಹದಗೆಡುತ್ತಿದೆ. ವಾತಾವರಣ ಕಲುಷಿತವಾಗುತ್ತಿದ್ದು, ಅಲ್ಲಿವ್ಯವಸ್ಥಿತವಾಗಿ ಚರಂಡಿಗಳನ್ನು ನಿರ್ಮಾಣಮಾಡಬೇಕು ಎಂದು ಕೋರಿದರು.

ತಹಶೀಲ್ದಾರ್‌ ಅನಿಲ್‌ ಕುಮಾರ್‌, ಉಪತಹಶೀಲ್ದಾರ್‌ ಚಿದಾನಂದ, ಗ್ರಾಪಂ ಪಿಡಿಒಸೌಮ್ಯಾ, ಗ್ರಾಪಂ ಉಪಾಧ್ಯಕ್ಷ ಸೊಣ್ಣೇಗೌಡ,ಸದಸ್ಯರಾದ ಮುನಿರಾಜು, ಮಾಲಾ,ವರಲಕ್ಷ್ಮಮ್ಮ, ಮುಖಂಡರಾದ ಕೋರಮಂಗಲ ವೀರಪ್ಪ, ಕಲ್ಯಾಣ್‌ ಕುಮಾರ್‌ಬಾಬು, ಚಿಕ್ಕನಹಳ್ಳಿ ಸುಬ್ಬಣ್ಣ, ರವೀಂದ್ರ,ಕಾರಹಳ್ಳಿ ಮುನೇಗೌಡ, ಭೈರೇಗೌಡ, ಪ್ರಕಾಶ್‌,ಆವತಿ ರಾಜಣ್ಣ, ಬಸವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next