Advertisement

ಡೀಸಿ, ಸಂಸದರಿಂದ ಅಧಿಕಾರ ದುರುಪಯೋಗ

04:39 PM Nov 09, 2020 | Suhan S |

ಕೋಲಾರ: ಸಂಸದ ಮುನಿಸ್ವಾಮಿ ಅಧಿಕಾರ ದುರುಪಯೋಗ ಪಡೆದುಕೊಂಡು ವಾಮ ಮಾರ್ಗದ ಮೂಲಕ ಮಾಲೂರು ಪುರಸಭೆ ಚುಕ್ಕಾಣಿ ಹಿಡಿಯಲು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ಮುಂದೂಡುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ಶಾಸಕಕೆ.ವೈ.ನಂಜೇಗೌಡ ಆರೋಪಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದಎಸ್‌.ಮುನಿಸ್ವಾಮಿ ಒತ್ತಡಕ್ಕೆ ಮಣಿದು ಡೀಸಿ ಸಿ.ಸತ್ಯಭಾಮ ಮಾಲೂರು ಪುರಸಭೆಗೆ ನ.10ಕ್ಕೆ ನಿಗದಿಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಂದೂಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದೂಡಿದ್ದೇ ಆದಲ್ಲಿ ಕಾನೂನು ಹೋರಾಟದ ಜೊತೆಗೆ ಜಿಲ್ಲಾದ್ಯಂತ ಕಾಂಗ್ರೆಸ್‌ ನಿಂದಲೂ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

27 ಸ್ಥಾನಗಳಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡುಸ್ಪರ್ಧಿಸಿತ್ತು.ಕಾಂಗ್ರೆಸ್‌11,ಜೆಡಿಎಸ್‌ 1, ಪಕ್ಷೇತರರ 5 ಸದಸ್ಯರಲ್ಲಿ ಮೂವರು ಕಾಂಗ್ರೆಸ್‌ ಬೆಂಬಲಕ್ಕಿದ್ದರು. ಬಿಜೆಪಿ 10 ಸ್ಥಾನ ಗಳಿಸಿದೆ.ಕಳೆದ ಒಂದೂವರೆ ವರ್ಷದ ನಂತರ ಕೋರ್ಟ್‌ ಸೂಚನೆ ಮೇರೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿ ನ.10 ರೊಳಗೆ ಪ್ರಕ್ರಿಯೆ ಮುಗಿಸಬೇಕಿದೆ ಎಂದರು.

ಚುನಾವಣೆ ಮುಂದೂಡುವ ಹುನ್ನಾರ: ನ.5ಕ್ಕೆ ನಿಗದಿಪಡಿಸಬೇಕಿದ್ದ ಚುನಾವಣೆಯನ್ನು ಆಪರೇಷನ್‌ ಕಮಲ ನಡೆಸಲು ಕಾಲಾವಕಾಶಕ್ಕಾಗಿ ನ.10 ಕ್ಕೆ ಮುಂದೂಡಲಾಗಿದೆ. ಬಿಜೆಪಿ ಸದಸ್ಯರೊಬ್ಬರನ್ನು ಅಪಹರಿಸಿರುವ ಬಗ್ಗೆ ತಾಲೂಕು ಬಿಜೆಪಿ ಅಧ್ಯಕ್ಷರು ಠಾಣೆಗೆ ಸುಳ್ಳು ದೂರು ನೀಡಿ ಚುನಾವಣೆಯನ್ನೇ ಮುಂದೂಡುವ ಹುನ್ನಾರ ನಡೆಸಿದ್ದಾರೆ ಎಂದರು.

ಕುಟುಂಬಸ್ಥರು ದೂರು ನೀಡಿಲ್ಲ: ವಿಡಿಯೋ ಸಂದೇಶ ಕಳುಹಿಸಿರುವ ಸದರಿ ಸದಸ್ಯರು ಪಕ್ಷದ ನಾಯಕರು ಸರಿಯಾಗಿ ನಡೆಸಿಕೊಂಡಿಲ್ಲ. ತಮ್ಮನ್ನು ಯಾರೂ ಅಪಹರಿಸಿಲ್ಲ, ಬಟ್ಟೆ ವ್ಯಾಪಾರಕ್ಕೆಂದು ಹೋಗಿದ್ದಾಗಿ ಸ್ವತಃ ಸದಸ್ಯರೇ ವೀಡಿಯೋ ಮಾಡಿ ಚುನಾವಣಾಧಿಕಾರಿಗಳಾದ ಡೀಸಿ, ತಹಶೀಲ್ದಾರ್‌ಗೆ ಕಳುಹಿಸಿದ್ದಾರೆ. ಎಫ್‌ಐಆರ್‌ ದಾಖಲಿಸಲು ಅಪಹರಣ ಬಗ್ಗೆ ಸದಸ್ಯರು ಅಥವಾ ಅವರ ಕುಟುಂಬಸ್ಥರಾಗಲಿ ದೂರು ನೀಡಿಲ್ಲ ಎಂದು ನುಡಿದರು.

Advertisement

ಆರೋಪ ಸಾಬೀತಾದರೆ ರಾಜೀನಾಮೆ ಸವಾಲು: ಸದಸ್ಯರೊಬ್ಬರಿಗೆ 40 ಲಕ್ಷ ನೀಡುವುದಾಗಿ ಹೇಳಿರುವ ಆಡಿಯೋ ವೈರಲ್‌ ಆಗಿರುವ ಕುರಿತು ಪತ್ರಕರ್ತರು ಗಮನ ಸೆಳೆದಾಗ, ಟ್ರಿಪ್‌ ಮುಗಿಸಿ ನನ್ನ ಬಳಿ ಬಂದು ಮಾತನಾಡಿ, ಹಣದ ವ್ಯವಸ್ಥೆ ಮಾಡೋಣ ಬನ್ನಿ ತಲೆಕೆಡಿಸಿಕೊಳ್ಳಬೇಡಿ ಎಂಬ ತಮ್ಮ ಆಡಿಯೋ ವೈರಲ್‌ ಆಗಿದ್ದು, ನಾನು ಯಾರೊಂದಿಗೂ ಮಾತನಾಡಿಲ್ಲ, ಹಣ ನೀಡುವುದಾಗಿಯೂ ಹೇಳಿಲ್ಲ. ಸಾಬೀತು ಮಾಡಿದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆನೀಡುವುದಾಗಿ ಸವಾಲು ಹಾಕಿದರು.

ಕಾಂಗ್ರೆಸ್‌ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ. ಜಯದೇವ್‌, ಜೆಡಿಎಸ್‌ ಮುಖಂಡ ಹನುಮಂತಪ್ಪ ಗೋಷ್ಠಿಯಲ್ಲಿ ಹಾಜರಿದ್ದರು.

ಮಾಲೂರು ಪುರಸಭೆಯಲ್ಲೂ ಪಕ್ಷ ಗದ್ದುಗೆ ಏರಲಿದೆ.ಇದನ್ನು ತಪ್ಪಿಸಲು ಸಂಸದರು ಚುನಾವಣೆ ಮುಂದೂಡಲು ಅಧಿಕಾರಿಗಳ ಮೂಲಕ ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಸಂಸದರು ಹೋದ ಕಡೆಯಲ್ಲೆಲ್ಲ ಘೇರಾವ್‌ ಹಾಕಬೇಕಾಗುತ್ತದೆ. ಕೆ.ಚಂದ್ರಾರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next