Advertisement

ಹಣೆಯಲ್ಲಿ ಬರೆದಿದ್ದರೆ ಸಚಿವ ಸ್ಥಾನ ಸಿಗುತ್ತದೆ, ಇಲ್ಲಾಂದ್ರೆ ಇಲ್ಲ: ಮುನಿರತ್ನ

01:23 PM Jan 14, 2021 | keerthan |

ಬೆಂಗಳೂರು: ಸಚಿವ ಸ್ಥಾನ ನನ್ನ ಹಣೆಯಲ್ಲಿ ಬರೆದಿದ್ದರೆ ಸಿಗುತ್ತದೆ ಇಲ್ಲ ಅಂದ್ರೆ ಇಲ್ಲ. ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಶಾಸಕ ಮುನಿರತ್ನ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜೊತೆಗೆ ಬಂದವರು ಎಲ್ಲಾ ಬ್ಯುಸಿಯಾಗಿದ್ದಾರೆ. ಯಾರಿಗೂ ಮಾತಾಡುವುದಕ್ಕೆ ಸಮಯವಿಲ್ಲ ಎಲ್ಲಾ ಬ್ಯುಸಿ ಇದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ, ಮಾತು ತಪ್ಪಲಿಲ್ಲ.ಕೆಲವು ಸಂದರ್ಭಗಳಲ್ಲಿ ಹೀಗೆ ಆಗುತ್ತದೆ. ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ ಪಕ್ಷಕ್ಕೆ ಕೆಟ್ಟದು ಮಾಡಿದ ಹಾಗೆಯಾಗುತ್ತದೆ.  ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಟ್ಟದಾಗಿ ಮಾತನಾಡಬಾರದು.  ನಮ್ಮದು ರಾಷ್ಟ್ರೀಯ ಪಕ್ಷ. ಅಲ್ಲಿಂದ ಒಪ್ಪಿಗೆ ಬರುವುದು ವಿಳಂಬವಾಗಬಹುದು ಎಂದರು.

ಇದನ್ನೂ ಓದಿ:ವರಿಷ್ಠರ ಅಪೇಕ್ಷೆಯಂತೆ ನನ್ನ ಇತಿ-ಮಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಿದ್ದೇನೆ: ಬಿಎಸ್ ವೈ

ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ ಎಂದರು. ‘ಸಿಡಿ’ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಸಿಡಿ ಇದ್ದರೆ ತೋರಿಸಲಿ, ಸುಮ್ಮನೆ ಆಧಾರ ರಹಿತವಾಗಿ ಮಾತಾಡಬಾರದು. ಗೌರವಯುತವಾಗಿ ಮಾತಾಡುವುದಕ್ಕೆ ಸಿಎಂ ಎಲ್ಲಾ ಅವಕಾಶ ಮಾಡಿಕೊಡುತ್ತಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ಕೆಲಸ ಯಾರೂ ಮಾಡಬಾರದು ಎಂದರು.

Advertisement

ನಾನು ದೇವರನ್ನು ನಂಬುವ ಮನುಷ್ಯ. ದೇವರು ಇದ್ದಾನೆ ಎನ್ನುವ ಧರ್ಮದಲ್ಲಿ ಹುಟ್ಟಿದ್ದೇನೆ. ಸರ್ಕಾರ ಸುಭದ್ರವಾಗಿದೆ, ಇನ್ನೂ ಎರಡೂ ವರ್ಷ ಇರುತ್ತದೆ. ಯಾವುದೇ ತೊಂದರೆಯಾಗಲ್ಲ ಎಂದರು.

ಸಚಿವ ಸ್ಥಾನ ಇಲ್ಲ ಅಂತ ಚಿಂತೆ ಇಲ್ಲ. ಅರುಣ್ ಸಿಂಗ್ ಬಳಿ ನನಗೆ ಸಚಿವ ಸ್ಥಾನ ಬೇಕು ಎಂದೂ ಕೇಳಿಲ್ಲ. ಮಾತು ಕೊಟ್ಟಿದ್ದೇವೆ ಎಂದು ದುರುಪಯೋಗ ಮಾಡಿಕೊಳ್ಳಬಾರದು. ಬೇರೆಯವರಿಗೂ ನಮಗೂ ಹೋಲಿಕೆ ಮಾಡಿಕೊಳ್ಳಬಾರದು.  ಕೆಲವು ಸಂದರ್ಭಗಳಲ್ಲಿ ಕೆಟ್ಟ ಸಮಯ ಬರುತ್ತದೆ ಎನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next