Advertisement
ಈಗಾಗಲೇ 16 ಕಿ.ಮೀ.ಗಳಲ್ಲಿ 11 ಕಿ.ಮೀ. ಕಾಮಗಾರಿ ಮುಗಿದಿದ್ದು, 5.8 ಕಾಮಗಾರಿಗೆ ರಿಪೇರಿ ಮಾಡಬೇಕಾಗಿದೆ. ಉಳಿದ ಕಾಮಗಾರಿಗೆ ತಗಲುವ ವೆಚ್ಚ 6 ಕೋಟಿ ಆಗುತ್ತಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸೂಪರಡೆಂಟ್ ಆಫ್ ಇಂಜಿನಿಯರ್ ಎನ್.ಡಿ ಪವಾರ ಶಾಸಕರಿಗೆ ಮಾಹಿತಿ ನೀಡಿದರು.
ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಖಾನಾಪುರ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಹಾಗೂ ಪ್ರಮೋದ ಗೌಳಿ ಅವರಿಗೆ ಶಾಸಕರು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ರೈತರಾದ ಸಿದ್ದಲಿಂಗಪ್ಪಗೌಡ ಹಬ್ಬಳ್ಳಿ, ಸಿದ್ದಣ್ಣಗೌಡ ಹುರಸುಗುಂಡಗಿ, ಶರಣಗೌಡ ತಂಗಡಗಿ, ವಸಂತಕುಮಾರ ಇಬ್ರಾಹಿಂಪೂರ ಉಪಸ್ಥಿತರಿದ್ದರು.