ಚಿಕ್ಕಮಗಳೂರು: ಮೂಡಿಗೆರೆ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಪಕ್ಷದ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡದೆ ದೀಪಕ್ ದೊಡ್ಡಯ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರಿಂದ ಬೇಸರಗೊಂಡ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಅಭಿವೃದ್ಧಿಯಲ್ಲಿ ರಾಜಿಯಾಗದೆ, ಜಾತಿ-ಧರ್ಮವನ್ನ ಸಮಾನಾಗಿ ಕಂಡಿದ್ದು ಹೈಕಮಾಂಡ್ ಗೆ ತಪ್ಪಾಗಿ ಕಂಡಿದೆ. ಸರ್ವೇ ಆಧರಿಸಿ ಟಿಕೆಟ್ ನೀಡುವ ಪಕ್ಷದಲ್ಲಿ ಟಿಕೆಟ್ ನೀಡದಿರುವುದು ನೋವು ತಂದಿದೆ. ರೈತರಿಗಾಗಿ ವಿಧಾನಸೌಧದ ಮುಂದೆ ಧರಣಿ ಮಾಡಿದ್ದು ಹೈಕಮಾಂಡ್ ತಪ್ಪು ಅನ್ನಿಸಿದ್ದು ಪರಮಾಶ್ಚರ್ಯ. ನಾನು ಶತ್ರುಗಳಗೂ ಕೇಡು ಬಯಸದ ರಾಜಕಾರಣಿ, ಎಲ್ಲರನ್ನೂ ಪ್ರೀತಿಯಿಂದ ಕಂಡೆ. ನಾನು ಬೆಳೆಸಿದ್ದು ಪಕ್ಷದ ಕಾರ್ಯಕರ್ತರನ್ನ, ನನ್ನ ಮನೆಯವರನ್ನಲ್ಲ ಯೋಚಿಸುವ ಶಕ್ತಿ ನಿಮ್ಮಲ್ಲಿದೆ, ನೀವೇ ನನಗೆ ಶಕ್ತಿ ತುಂಬುವ ಕೈಗಳು ಮುಂದೆಯೂ ನಿಮ್ಮ ಜೊತೆಯೇ ಇರ್ತೇನೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಇದ್ದು,ಜೆಡಿಎಸ್ ಪಕ್ಷ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.