Advertisement

ನಾಲೆ, ತೂಬು ಸರಿಪಡಿಸದಿದ್ದರೆ ಡ್ಯಾಂ ನೀರು ಪೋಲು

02:58 PM Nov 21, 2020 | Suhan S |

ಎಚ್‌.ಡಿ.ಕೋಟೆ: ತಾಲೂಕಿನಲ್ಲಿ 4 ಜಲಾಶಯಗಳಿದ್ದರೂ ರೈತರಿಗೆ ಉಪಯೋಗ ಇಲ್ಲವಾಗಿದೆ. ತೂಬುಗಳು ಹಾಗೂ ನಾಲೆಗಳು ಹದಗೆಟ್ಟಿರುವುದರಿಂದ ತಾರಕ ಏತ ನೀರಾವರಿ ಯೋಜನೆಯಡಿ ನೀರು ಜಮೀನುಗಳಿಗೆ ಸಮರ್ಪಕವಾಗಿ ಹರಿಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

Advertisement

ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಅನಿಲ್‌ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತ ಸಂಪರ್ಕ ಸಭೆಯಲ್ಲಿ ತಾರಕ ಏತ ನೀರಾವರಿ ಅವ್ಯವಸ್ಥೆ ಕುರಿತು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಲೆಗಳು ಮತ್ತು

ಕಾಲುವೆಗಳ ದುರಸ್ತಿಗೆ ಮುಂದಾಗದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ತಾಲೂಕಿನರೈತರಸಮಸ್ಯೆಅರಿತು ಸರ್ಕಾರದೊಡನೆ ಸಮಾಲೋಚನೆ ನಡೆಸಿ ಕೂಡಲೇ ತಾರಕ ಎಡ ಮತ್ತು ಬಲದಂಡೆ ನಾಲೆಗಳ ಒಟ್ಟು 149 ತೂಬುಗಳು, ನಾಲೆ ಗಳನ್ನು ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ದುರಸ್ತಿ ಕಾಣದ ತೂಬುಗಳು ಮತ್ತು ನಾಲೆಗಳ ಮೂಲಕ ಕೃಷಿ ಭೂಮಿ ಸೇರಬೇಕಾದ ನೀರು ಪೋಲಾಗಿ ಹರಿದು ರೈತರಿಗೆ ಉಪಯೋಗಕ್ಕೆ ಇಲ್ಲದಂತಾಗಲಿದೆ ಎಂದು  ರೈತರು ಅಳಲು ತೋಡಿಕೊಂದರು.

ಟೆಂಡರ್‌: ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳಿಂದ ಶಾಸಕ ಅನಿಲ್‌ ಮಾಹಿತಿ ಬಯಸಿದಾಗ, ನಾಲೆಗಳ ದುರಸ್ತಿಕಾರ್ಯಕ್ಕೆ ಟೆಂಡರ್‌ ಆಹ್ವಾನಿಸಿದ್ದು, ಗುತ್ತಿಗೆದಾರರು ಕಾಮಗಾರಿ ಆರಂಭಿಸದೇ ಇರುವುದರಿಂದ ಹೊಸದಾಗಿ ಟೆಂಡರ್‌ ಕರೆಯಲಾಗುವುದು ಎಂದು ಪ್ರತಿಕ್ರಿಯಿಸಿದರು.

ಅಲೆದಾಟ: ರೈತ ಸಂಪರ್ಕ ಸಭೆಗಳಿಗೆ ತಾಲೂಕು ಅಧಿಕಾರಿಗಳು ಗೈರಾಗುವುದು, ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸ ಮಾಡಿಕೊಡದೇ ವಿನಾಃ ಕಾರಣ ಅಲೆದಾಡಿಸುವುದು, ಲಂಚಕ್ಕೆ ಬೇಡಿಕೆಯಿಡುವುದು ಸೇರಿದಂತೆ ಮತ್ತಿತರ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು.

Advertisement

ಕಾನೂನು ಕ್ರಮ: ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಶಾಸಕ ಅನಿಲ್‌ ಚಿಕ್ಕಮಾದು, ತಾಲೂಕು ಅಧಿಕಾರಿಗಳು ರೈತರ ಕೆಲಸ ನಿರ್ವಹಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ತಾರಕ ಮತ್ತು ಚನ್ನಯ್ಯನಕಟ್ಟೆ ಕೆರೆಯ ಸಮಸ್ಯೆಗೆ ಅತಿ ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್‌ ಆರ್‌.ಮಂಜುನಾಥ್‌, ಜಿಪಂ ಸದಸ್ಯ ವೆಂಕಟಸ್ವಾಮಿ, ರೈತ ಸಂಘದ ಅಧ್ಯಕ್ಷ ಮಹದೇವನಾಯ್ಕ, ತಾಪಂ ಇಒ ರಾಮಲಿಂಗಯ್ಯ, ಪಿಎಸ್‌ಐ ಅಶ್ವಿ‌ನಿ ಶಿವಾನಂದ, ರೈತ ಮುಖಂಡರಾದ ಪಿ.ಆರ್‌. ಪಳನಿಸ್ವಾಮಿ, ನಾಗರಾಜು, ಹೊ.ಕೆ. ಮಹೇಂದ್ರ, ಕ್ಷೀರಸಾಗರ್‌, ಬಸವರಾಜು, ದೇವಮ್ಮ, ಉಮೇಶ್‌ ಜೀವಿಕ ಇತರರು ಉಪಸ್ಥಿತರಿದ್ದರು.

ಚನ್ನಯ್ಯನಕಟ್ಟೆಕೆರೆ ಅಭಿವೃದ್ಧಿಪಡಿಸಲು ರೈತರ ಆಗ್ರಹ :  ತಾಲೂಕಿನಕೆ.ಯಡತೊರೆ ಸರ್ವೆ ನಂ46ರಲ್ಲಿ ಟೈಗರ್‌ಬ್ಲಾಕ್‌ಗೆ ಸೇರಿದ ಚನ್ನಯ್ಯನಕಟ್ಟೆ8.10 ಎಕರೆ ವಿಸ್ತೀರ್ಣ ಹೊಂದಿದೆ.1969ನೇ ಸಾಲಿನಿಂದಲೂ ಕಂದಾಯ ಇಲಾಖೆ ಸ್ಕೆಚ್‌ನಲ್ಲಿ ಚನ್ನಯ್ಯನಕಟ್ಟೆಕೆರೆ ಎಂದು ನಮೂದಾಗಿದೆ. ಮೈಸೂರು ರಾಜವಂಶಸ್ಥರು ಕಾಡುಪ್ರಾಣಿಗಳ ಬೇಟೆಗೆ ಆಗಮಿಸುತ್ತಿದ್ದಾಗ ವನ್ಯಜೀವಿಗಳ ನೀರಿನ ದಾಹ

ನೀಗಿಸುವಸಲುವಾಗಿ ಈ ಕೆರೆಯನ್ನುನಿರ್ಮಿಸಲಾಗಿತ್ತು .ಅವರ ಕಾಲದಲ್ಲಿ ಕೆರೆ ಏರಿ ಕೂಡ ನಿರ್ಮಾಣವಾಗಿತ್ತು. ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಅಣ್ಣೂರು ಗ್ರಾಪಂ ಹರಾಜು ನಡೆಸಿ ಮೀನು ಸಾಕಾಣಿಕೆಗೆ ಹಣ ಪಾವತಿಸಿಕೊಂಡಿರುವ ರಶೀದಿಗಳಿವೆ. ಟೈಗರ್‌ಬ್ಲಾಕ್‌, ಯಡತೊರೆ, ಬೋಚಿಕಟ್ಟೆ ಸೇರಿದಂತೆ 8 ಗ್ರಾಮಗಳ ಜನ ಜಾನುವಾರುಗಳಷ್ಟೇ ಅಲ್ಲದೇ ಅಂತರ್ಜಲ ಹೆಚ್ಚಿಸುವ ನೀರಿನ ಮೂಲಕ್ಕೆ ಇರುವುದು ಇದೊಂದೇ ಕೆರೆ. ಹೀಗಾಗಿ ಕೆರೆಯನ್ನು ಪಹಣಿಯಲ್ಲಿ ನಮೂದಿಸಿ ಅಭಿವೃದ್ಧಿಪಡಿಸಬೇಕು ಎಂದು ರೈತರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next