ಕುಷ್ಟಗಿ: ನಿಡಶೇಸಿ ಸ್ಮಶಾನ ಭೂಮಿ ಪಟ್ಟಾ ಭೂಮಿ ಆಗಿದ್ದಲ್ಲಿ ಇಷ್ಟು ವರ್ಷ ಯಾಕೆ? ಬಿತ್ತಲಿಲ್ಲ. ಪಟ್ಟಾಭೂಮಿ ಎರಡು ವರ್ಷ ಬಿತ್ತದೇ ಇದ್ದಲ್ಲಿ ಅದು ಸರ್ಕಾರದ ಜಮೀನು ಆಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಇಲ್ಲಿನ ಸರ್ಕ್ಯೂಟ್ ಹೌಸ್ ನ ಸಭಾಂಗಣದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿಡಶೇಸಿಯ ಸ್ಮಶಾನ ಭೂಮಿಯ ವಿವಾದ ಪ್ರತಿಧ್ವನಿಸಿತು.
ಕೆಲವು ಸಂಧರ್ಭಗಳಲ್ಲಿ ಇಬ್ಬರು ವ್ಯಕ್ತಿಗಳ ಮದ್ಯೆ ವಿವಾದ ಇದ್ದಲ್ಲಿ ಕೋರ್ಟ್ ಆದೇಶವಿರುತ್ತದೆ. ಇಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಇಲ್ಲಿ ನೂರಾರು ವರ್ಷಗಳಿಂದ ಸ್ಮಶಾನಭೂಮಿಯಾಗಿ ಸ್ಥಳೀಯರು ಬಳಸಿಕೊಂಡಿದ್ದು, ವಿವಾದಿತ ಜಮೀನು ಪಟ್ಟಾಭೂಮಿಯಾಗಿದ್ದರೆ ಯಾಕೆ ಬಿತ್ತಲಿಲ್ಲ ಎಂದು ಪ್ರಶ್ನಿಸಿದರು. ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ಜಮೀನು ಸರ್ಕಾರಿ ಮೌಲ್ಯದಲ್ಲಿ ಮೂರು ಪಟ್ಟು ನೀಡಿ ಸದರಿ ಜಮೀನು ಬಿಟ್ಟುಕೊಟ್ಟು ವಿವಾದ ಬಗೆಹರಿಸಿ ಎಂದು ಶಾಸಕ ಬಯ್ಯಾಪೂರ, ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಸೂಚಿಸಿದರು. ಜಮೀನು ಎನ್ ಎ ಆಗಿದ್ದು ಸದರಿ ಜಮೀನು ನ್ಯಾಯಾಲಯದಲ್ಲಿರುವ ಬಗ್ಗೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಶಾಸಕರ ಗಮನಕ್ಕೆ ತಂದರು.
ಆಗ ತಹಶೀಲ್ದಾರ ಎಂ.ಸಿದ್ದೇಶ ಅವರು, ಡಿವೈಎಸ್ಪಿ ಹನುಮಂತರಾಯ ಎಂಬುವರು ಖರೀಧಿಸಿದ್ದಾಗಿ ತಿಳಿಸಿದಾಗ ಡಿವೈಎಸ್ಪಿ ಹನಮಂತರಾಯಪ್ಪ ಯಾದಗಿರಿ ಡಿವೈಎಸ್ಪಿ ಆಗಿದ್ದಾಗ ಪರಿಚಯವಿದೆ. ನಮ್ಮ ಮಾತು ಕೇಳಿದ್ರೂ ಕೇಳಬಹುದು ಅವರೊಂದಿಗೆ ಸದರಿ ಜಮೀನಿನಲ್ಲಿ ಒಂದು ಎಕರೆ ಬಿಟ್ಟಕೊಡುವಂತೆ ಹೇಳುವುದಾಗಿ ತಿಳಿಸಿದರು.