Advertisement
ಈ ಸಂಬಂಧ ಶನಿವಾರ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೊಂದಿಗೆ ಮಹತ್ವದ ಸಭೆ ನಡೆಸಿರುವ ಅವರು, ಮಾಡಾಳು ಪ್ರಕರಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
Related Articles
ರಾಜ್ಯ ಸರಕಾರದ ವಿರುದ್ಧದ ಕಾಂಗ್ರೆಸ್ ಹೋರಾಟದ ಸ್ವರೂಪ ಮತ್ತೂಂದು ಹಂತ ತಲುಪಿದೆ. ಮಾ.9ರಂದು ಕಾಂಗ್ರೆಸ್ ಕರೆದಿರುವ 2 ಗಂಟೆಗಳ ರಾಜ್ಯ ಬಂದ್ ಮೇಲ್ನೋಟಕ್ಕೆ ಕೇವಲ ಎರಡು ತಾಸುಗಳಿಗೆ ಸೀಮಿತವಾಗಿರಬಹುದು. ಆದರೆ ಈ ಅಲ್ಪಾವಧಿಯಲ್ಲೇ ಇಡೀ ರಾಜ್ಯದ ಗಮನವನ್ನು ಹೋರಾಟದತ್ತ ಸೆಳೆಯುವ ಮೂಲ ಉದ್ದೇಶ ಕಾಂಗ್ರೆಸ್‌ನದ್ದಾಗಿದೆ. ಇದೇ ಕಾರಣಕ್ಕೆ ಬಂದ್ ಆಚರಣೆ ಜತೆಗೆ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ವಾಣಿಜ್ಯೋದ್ಯಮಿಗಳು, ವಿವಿಧ ಸಂಘಟನೆಗಳಿಗೆ ಕೇವಲ ಎರಡು ತಾಸು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟ ಬೆಂಬಲಿಸುವಂತೆ ಮನವಿ ಮಾಡಲಾಗುತ್ತಿದೆ.
Advertisement
ಬಂದ್ ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ಮಾಡುವುದಿಲ್ಲ. ಮಕ್ಕಳು ಪರೀಕ್ಷೆ ಬರೆಯಲು, ಶಾಲಾ-ಕಾಲೇಜುಗಳಿಗೆ ತೆರಳಲು, ನೌಕರರು ಕೆಲಸಕ್ಕೆ ತೆರಳಲು ಯಾವುದೇ ತೊಂದರೆ ಆಗದಿರಲು ಸಾರಿಗೆ ಸೇವೆಗೆ ಎಂದಿನಂತೆ ಮುಂದುವರಿಯಲಿದೆ. ಆಸ್ಪತ್ರೆಗಳಲ್ಲಿ ಸೇವೆಗಳು ಕೂಡ ಇರಲಿವೆ. ಜನರೇ ಸ್ವಯಂಪ್ರೇರಿತವಾಗಿ ಎರಡು ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬೆಂಬಲ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದ್ದಾರೆ.
ಏನಿದು ಲುಕ್‌ಔಟ್ ನೋಟಿಸ್ ?ವ್ಯಕ್ತಿ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದರೆ ಆತನನ್ನು ಬಂಧಿಸಲು ಅವಕಾಶವಿದೆ. ವಿಚಾರಣೆ ಮಾಡಲು ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಆತನ ಕುಟುಂಬದ ಸದಸ್ಯರನ್ನು ಕೇಳಬಹುದು. ಅಂತಾರಾಷ್ಟ್ರೀಯ ಗಡಿಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಕಡಲ ಪ್ರದೇಶಗಳು, ಬಂದರು, ರಾಜ್ಯದ ಗಡಿ ಪ್ರದೇಶಗಳು ಇತ್ಯಾದಿಗಳಲ್ಲಿ ಆರೋಪಿಗಳನ್ನು ಬಂಧಿಸಲು ಈ ಅಸ್ತ್ರ ಬಳಸಲಾಗುತ್ತದೆ. ಅವುಗಳನ್ನು ದೇಶದ ಎಲ್ಲ ವಲಸೆ ಚೆಕ್‌ಪೋಸ್ಟ್‌ಗಳಿಗೂ ಕಳುಹಿಸಿಕೊಡಲಾಗುತ್ತದೆ. ಒಂದು ವೇಳೆ ಮಾಹಿತಿ ನೀಡದೆ ಸಂಬಂಧಿತ ಆರೋಪಿ ವಿದೇಶಕ್ಕೆ ಇಲ್ಲವೆ ಹೊರರಾಜ್ಯಗಳಿಗೆ ತೆರಳಲು ಮುಂದಾದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ವಶಕ್ಕೆ ಪಡೆಯಬಹುದು.