Advertisement
ಬೆಳಗಾವಿ: ಜನಸೇವೆ ಎಂದಾಕ್ಷಣ ಒಂದು ಹೆಜ್ಜೆ ಮುಂದಿಡುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಈಗ ಕೊರೊನಾ ಸೋಂಕಿತರು, ಅವರ ಕುಟುಂಬ ಸದಸ್ಯರು, ಕೋವಿಡ್‌ನಿಂದ ತೊಂದರೆಗೆ ಸಿಲುಕಿರುವ ಜನರ ಸಹಾಯಕ್ಕೆ ನಿಂತಿದ್ದಾರೆ. ಅಗತ್ಯ ನೆರವು ನೀಡುವುದರ ಮೂಲಕ ನೊಂದವರ ಜೀವನದಲ್ಲಿ ಭರವಸೆಯ ಬೆಳಕು ತುಂಬಿದ್ದಾರೆ.
Related Articles
Advertisement
ನೂರಾರು ಜನರಿಗೆ ಊಟ: ಇನ್ನು ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನವನ್ನೇ ತಮ್ಮ ಜನ್ಮದಿನವನ್ನಾಗಿ ಆಚರಿಸಿಕೊಳ್ಳುತ್ತಿರುವ ಲಕ್ಷ್ಮೀ ಹೆಬ್ಟಾಳಕರ ಕೊರೊನಾ ಸಂಕಷ್ಟ ಸಮಯದಲ್ಲಿ ಜನರ ಸೇವೆಗಾಗಿ ಎರಡು ಆಂಬ್ಯುಲೆನ್ಸ್ ಸಮರ್ಪಿಸಿದ್ದಾರೆ. ಅಷ್ಟೇ ಅಲ್ಲ ಗ್ರಾಮೀಣ ಕ್ಷೇತ್ರದ ಜನರು ಪಕ್ಷಾತೀತವಾಗಿ ಎರಡು ಆಂಬ್ಯುಲೆನ್ಸ್ ಗಳ ಸೇವೆ ಸದುಪಯೋಗ ಪಡೆಯಬೇಕು ಎಂಬುದು ಅವರ ಕಳಕಳಿ. ಇದರ ಜತೆಗೆ ಕೊರೊನಾದಿಂದ ಜನರು ಹಲವಾರು ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಮನಗಂಡ ಹೆಬ್ಟಾಳಕರ ದಿನನಿತ್ಯ ದೂರವಾಣಿ ಕರೆ ಮಾಡುವ ಮೂಲಕ ಅಥವಾ ಮನೆಗೆ ಬರುವ ಕ್ಷೇತ್ರದ ಜನರಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳ, ಇಂಜೆಕ್ಷನ್ ಹಾಗೂ ಆಕ್ಸಿಜನ್ ನೆರವು ದೊರಕಿಸಿಕೊಡುತ್ತಿದ್ದಾರೆ. ದಿನನಿತ್ಯ ಸುಮಾರು 10 ಜನ ಈ ರೀತಿ ನೆರವು ಪಡೆಯುತ್ತಿದ್ದಾರೆ. ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್ ನೆರವಿನ ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತಿನಿತ್ಯ 800-1000 ಜನರಿಗೆ ಬೆಳಗ್ಗೆ, ಮಧ್ಯಾಹ್ನ-ರಾತ್ರಿ ಊಟ-ಉಪಹಾರದ ವ್ಯವಸ್ಥೆಯನ್ನು ಲಕ್ಷ್ಮೀ ತಾಯಿ ಪ್ರತಿಷ್ಠಾನ ಮೂಲಕ ಮಾಡುತ್ತ ಬಂದಿದ್ದಾರೆ.
ಶಾಸಕರು ತಾವೇ ಸ್ವತಃ ಕೊರೊನಾ ಪೀಡಿತರಾಗಿದ್ದರಿಂದ ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ. ಆದರೆ ಆಸ್ಪತ್ರೆ ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಡಿಸಿ ಜತೆ ಸಭೆ ನಡೆಸಿ ಸೋಂಕಿತರ ಚಿಕಿತ್ಸೆ ಕುರಿತು ಸಲಹೆ ನೀಡಿದ್ದಾರೆ. ಇಂಜೆಕ್ಷನ್ ಕೊರತೆ ಕಾಣದಂತೆ ಕ್ರಮ ವಹಿಸಿದ್ದಾರೆ.
10 ಸಾವಿರ ಜನರಿಗೆ ಮಾತ್ರೆ: ಕೊರೊನಾ ಸೋಂಕಿನಿಂದ ಸಮಸ್ಯೆಗೆ ಸಿಲುಕಿರುವ ತಮ್ಮ ಕ್ಷೇತ್ರದ ಜನರಿಗೆ ಸಕಾಲಕ್ಕೆ ಔಷಧಗಳು ಸಿಗಬೇಕೆಂಬ ಉದ್ದೇಶದಿಂದ ಶಾಸಕಿ ಹೆಬ್ಟಾಳಕರ ಬರುವ ಶುಕ್ರವಾರದಿಂದ 10 ಸಾವಿರ ಜನರಿಗೆ ವೈದ್ಯರ ಸಲಹೆಯೊಂದಿಗೆ ಮಾತ್ರೆಗಳನ್ನು ವಿತರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಎಲ್ಲ ಮಾಹಿತಿ ಸಂಗ್ರಹಿಸಿ ಗುಳಿಗೆಗಳನ್ನು ಸಿದ್ಧಮಾಡಿಕೊಂಡಿದ್ದಾರೆ. ಇದರ ಜತೆಗೆ 10 ಸಾವಿರ ಜನರಿಗೆ ಥರ್ಮಾಮೀಟರ್ ಮತ್ತು ಆಕ್ಸಿಮೀಟರ್ ಸಹ ಕೊಡುವ ಉದ್ದೇಶ ಸಹ ಶಾಸಕರು ಹೊಂದಿದ್ದಾರೆ.