Advertisement

ರಸ್ತೆ ಕಾಮಗಾರಿಗೆ ಶಾಸಕ ಎಟಿಆರ್‌ ಚಾಲನೆ

06:59 AM Jun 16, 2020 | Lakshmi GovindaRaj |

ಹೊಳೆನರಸೀಪುರ: ರಾಜ್ಯ ಸರ್ಕಾರ ಹೇಮಾವತಿ ವಿತರಣಾ ನಾಲೆ ವ್ಯಾಪ್ತಿಯಡಿಯಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗೆ 2 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

Advertisement

ತಾಲೂಕಿನ ಹಳ್ಳಿ ಮೈಸೂರು  ಹೋಬಳಿ ನಿಡುವಣಿ ಯಲ್ಲಿ ಬಸವಾಪಟ್ಟಣದ ತೊಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಅವರೊಂದಿಗೆ ಆಗಮಿಸಿ ನಿಡುವಣಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ರಸ್ತೆ ಚರಂಡಿ  ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.

ಹಳ್ಳಿ ಮೈಸೂರು ಹೋಬಳಿಯ ಮಾರನಾಯಕನಹಳ್ಳಿ ರಸ್ತೆಗೆ 30 ಲಕ್ಷ ರೂ., ಕುಪ್ಪೆಗ್ರಾಮದ ರಸ್ತೆಗೆ 20 ಲಕ್ಷ ರೂ., ನಿಡುವಣಿ ಗ್ರಾಮದ ರಸ್ತೆಗೆ 30 ಲಕ್ಷ ರೂ., ಕುಪ್ಪೆ ನಿಡುವಣಿ  ಗ್ರಾಮದ ರಸ್ತೆ 30 ಲಕ್ಷ ರೂ., ಸೋಮನಹಳ್ಳಿ ಬಡಕ್ಯಾತನಹಳ್ಳಿಗೆ 30ಲಕ್ಷ ರೂ., ಹಾರಗೊಡನಹಳ್ಳಿ ಮತ್ತು ಮಾದಿಹಳ್ಳಿ ರಸ್ತೆ ಮಲ್ಲಿಗೆ ಹಳ್ಳಿಯಲ್ಲಿನ ರಸ್ತೆ ಅಭಿವೃದ್ಧಿಗೆ 65 ಲಕ್ಷ ಹಣವನ್ನು ಬಿಡುಗಡೆ ಯಾಗಿದೆ ಎಂದರು.

ಗ್ರಾಮಸ್ಥರು  ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು. ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಶಾಸಕ ರಾಮಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅಪಾರವಾಗಿ ಶ್ರಮಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆಯ  ಎಂಜಿನಿಯರ್‌ ನಾರಾಯಣ ಪ್ರಸಾದ್‌, ಯೋಗೇಶ್‌ ಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next