ಅರಸೀಕೆರೆ: ತಾಲೂಕಿನ ದೊಡ್ಡ ಮೇಟಿ ಕುರ್ಕೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಎರಡುಗುಂಪುಗಳ ಗಲಭೆಗೆ ಕೆಲವು ಬಿಜೆಪಿಮುಖಂಡರು ದುರುದ್ದೇಶ ಪೂರ್ವಕವಾಗಿತಮ್ಮ ಹೆಸರು ಎಳೆದು ತರುತ್ತಿರುವುದು ಸರಿಯಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ತಾಲೂಕಿನ ದೊಡ್ಡ ಮೇಟಿ ಕುರ್ಕೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಎರಡುಗುಂಪು ಗಳ ಗಲಭೆಗೆ ಕೆಲವು ಬಿಜೆಪಿ ಮುಖಂಡರು ದುರುದ್ದೇಶ ಪೂರ್ವಕವಾಗಿ ತಮ್ಮ ಹೆಸರು ಎಳೆದು ತರುತ್ತಿದ್ದಾರೆ. ವಿರೋಧ ಪಕ್ಷದಶಾಸಕನಾಗಿ ಎಲ್ಲಾ ಮುಖ್ಯಮಂತ್ರಿಗಳಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಯದೃಷ್ಟಿಯಲ್ಲಿ ಹಲವಾರು ಜನಪರಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಹೇಳಿದರು.
ಶಾಂತಿ ಕದಡಲು ವಿಫಲ ಯತ್ನ: ಹೇಮಾವತಿ ನದಿ ಮೂಲದ ಹೊನ್ನವಳ್ಳಿ ಏತ ನೀರಾವರಿಯೋಜನೆ ಮೂಲಕ ಚಿಕ್ಕೊಂಡಿಹಳ್ಳಿ, ದೊಡ್ಡಮೇಟಿ ಕುರ್ಕೆ ಹೊಸಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಪಡೆದುಕೊಂಡು ಬಂದಿದ್ದೇನೆ. ಇದನ್ನುಸಹಿಸಲಾಗದ ಒಂದು ಗುಂಪಿನ ಜನರುಇನ್ನಿಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದುಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲಾ ಉಸ್ತು ವಾರಿಸಚಿವರು ಬರಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ತಿಳಿದಿರುವ ಕೆಲವು ಬಿಜೆಪಿ ಮುಖಂಡರು, ದುರುದ್ದೇಶ ಪೂರ್ವಕವಾಗಿಕೆಲವರನ್ನು ಎತ್ತಿ ಕಟ್ಟಿ ವಿನಾಕಾರಣ ತೊಂದರೆಉಂಟು ಮಾಡುವ ಮೂಲಕ ಸಮಾಜದಲ್ಲಿಅಶಾಂತಿಯ ವಾತವರಣ ಸೃಷ್ಟಿಸಲು ವಿಫಲಪ್ರಯ ತ್ನವನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ಶಿಷ್ಟಾಚಾರ ಉಲ್ಲಂಘನೆ: ತಾವು ನಡೆ ಸಿದ ಭೂಮಿ ಪೂಜೆ ಕಾರ್ಯಕ್ರಮ ಸರ್ಕಾರದಅಧಿಕೃತ ಕಾರ್ಯಕ್ರಮವಲ್ಲ, ಆದ ಕಾರಣ,ಶಿಷ್ಟಾಚಾರ ಉಲ್ಲಂಘನೆ ಎಂಬ ಪ್ರಶ್ನೆಯೇಉದ್ಭವ ಆಗುವುದಿಲ್ಲ, ಘಟನಾವಳಿಗಳ ಹಿಂದೆಯಾರಿದ್ದಾರೆ ಎಂಬ ಸತ್ಯಾಂಶಸಾರ್ವಜನಿಕರಿಗೆ ಗೊತ್ತಿರುವ ಸಂಗತಿಯಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಪದೇಪದೆ ಗಲಭೆ ಸೃಷ್ಟಿ: ಒಂದು ವರ್ಷದ ಹಿಂದೆ ಜಮೀನಿನ ಮಧ್ಯೆ ರಸ್ತೆ ಬಿಡುವ ವಿಷಯದಲ್ಲಿ ಜಗಳ ಮಾಡಿಕೊಂಡ ಗುಂಪುಗಳ ನಡುವೆಯೇ ಮತ್ತೆ ಗಲಾಟೆಗಳುನಡೆದಿದೆ ಎಂದರೇ ಇದರ ಹಿಂದೆ ಯಾರಿದ್ದಾರೆ, ಯಾವ ಕಾರ ಣಕ್ಕೆ ಇಂತಹ ಗಲಭೆಗಳನ್ನು ಪದೇ ಪದೆ ಸೃಷ್ಟಿಸುತ್ತಿ ದ್ದಾರೆ ಎನ್ನುವ ಸತ್ಯವನ್ನು ಕ್ಷೇತ್ರದ ಮತದಾರ ಪ್ರಭುಗಳು ಅರ್ಥ ಮಾಡಿಕೊಳ್ಳುವ ಸಾಮಾನ್ಯ ಜ್ಞಾನವನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ಇದನ್ನು ಪ್ರಚೋದನೆ ನೀಡುತ್ತಿರುವ ಬಿಜೆಪಿಮುಖಂಡರು ಮನನ ಮಾಡಿಕೊಳ್ಳಬೇಕೆಂದುಬಿಜೆಪಿ ಮುಖಂಡರಾದ ಎನ್.ಆರ್. ಸಂತೋಷ್ ಅವರ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.