Advertisement

ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ ಬಂಡಿ

06:08 PM May 29, 2021 | Team Udayavani |

ರೋಣ: ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಅವರು ಸ್ವತಃ ತಾವೇ ಕೊರೊನಾ ರೋಗಕ್ಕೆ ಒಳಗಾಗಿದ್ದರೂ ಕೂಡಾ ರೋಗ ವಾಸಿಯಾದ ಮರುದಿನದಿಂದಲೇ ಕೋವಿಡ್‌ ಸೆಂಟರ್‌ಗೆ ಭೇಟಿ ನೀಡುವ ಮೂಲಕ ಮತಕ್ಷೇತ್ರದ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.

Advertisement

ಶಾಸಕ ಕಳಕಪ್ಪ ಬಂಡಿ ಅವರಿಗೆ ಸೋಂಕು ದೃಢಪಟ್ಟಿತ್ತು. ಆದರೆ, ಎದೆಗುಂದದೆ ಚಿಕಿತ್ಸೆ ಪಡೆದುಕೊಂಡು ಸೋಂಕು ವಾಸಿಯಾಗಿ ಆಸ್ಪತ್ರೆಯಿಂದ ಹೊರಬಂದ ದಿನವೇ ರೋಣ, ಗಜೇಂದ್ರಗಡ, ಮುಂಡರಗಿ, ಡಂಬಳ ಸೇರಿದಂತೆ ಮತಕ್ಷೇತ್ರದಲ್ಲಿ ಇರುವ ಎಲ್ಲ ಕೋವಿಡ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಅಲ್ಲಿನ ರೋಗಿಗಳ ಸಮಸ್ಯೆ ಆಲಿಸಿ, ಅವರಿಗೆ ಧೈರ್ಯ ತುಂಬಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಭೇಟಿ: ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ವಿಶೇಷ ಸಭೆಯನ್ನು ಕರೆದು ಆರೋಗ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಅ ಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಲ್ಲಿಂದ ಸಮಾಜ ಕಲ್ಯಾಣ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್‌ ಸೆಂಟರ್‌ ಗೆ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೊರೊನಾ ವಾರ್ಡ್‌ಗಳಿಗೆ ಯಾವುದೇ ಪಿಪಿಕಿಟ್‌ ಹಾಕಿಕೊಳ್ಳದೆ ಎಲ್ಲ ರೋಗಿಗಳ ರೂಂಗೆ ಭೇಟಿ ನೀಡಿದ್ದಾರೆ.

ವಾರಿಯರ್ಸ್‌ಗಳಿಗೆ ಊಟದ ವ್ಯವಸ್ಥೆ: ಮತಕ್ಷೇತ್ರದಲ್ಲಿ ಇರುವ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ಮಾಡುವ ಅ ಧಿಕಾರಿಗಳಿಗೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ರೋಣ ಶಾಸಕ ಕಳಕಪ್ಪ ಬಂಡಿ ಅವರ ಸಲಹೆ ಸೂಚನೆ ಮೇರೆಗೆ ಬಿಜೆಪಿ ರೋಣ ಮಂಡಳದಿಂದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಮಹಿಳಾ ಹಾಗೂ ವಿವಿಧ ಮೋರ್ಚಾಗಳ ಕಾರ್ಯಕರ್ತರು ನಿತ್ಯ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next