Advertisement

ಸಿಡಿಲು ಬಡಿದು ಮೃತಪಟ್ಟ ನಾಗೇಂದ್ರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಜ್ಞಾನೇಂದ್ರ

02:38 PM Jun 12, 2024 | Kavyashree |

ತೀರ್ಥಹಳ್ಳಿ: ಕಳೆದ ವಾರ ಆಗುಂಬೆ ಹೋಬಳಿಯ ಬಿದರಗೋಡು ಗ್ರಾ.ಪಂ. ವ್ಯಾಪ್ತಿಯ ಹೊಸಗದ್ದೆ ಸಮೀಪದ ಮುತ್ತುವಳ್ಳಿ ನಾಗೇಂದ್ರ ಎಂಬವರು ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದರು.

Advertisement

ಈ ಸಂಬಂಧ ಪ್ರಕೃತಿ ವಿಕೋಪ ಪರಿಹಾರ ನಿಧಿ ಅನ್ವಯ 5 ಲಕ್ಷ ರೂಪಾಯಿ ಪರಿಹಾರವನ್ನು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರು ಸರ್ಕಾರದಿಂದ ಮಂಜೂರು ಮಾಡಿಸಿದ್ದು ಜೂ. 12ರ ಬುಧವಾರ ಮೃತ ನಾಗೇಂದ್ರ ಅವರ ಮನೆಗೆ ತೆರಳಿ ಕುಟುಂಬದವರಿಗೆ 5 ಲಕ್ಷ ರೂ. ಚೆಕ್‌ ವಿತರಿಸಿದರು.

ಈ ಸಂಧರ್ಭದಲ್ಲಿ  ಕಂದಾಯ ಇಲಾಖೆ ಅಧಿಕಾರಿ ಯಶವಂತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಲಕ್ಷ್ಮಿ, ಸದಸ್ಯ ವೆಂಕಟೇಶ, ಮುಖಂಡರಾದ ಹೊಸಳ್ಳಿ ಸುಧಾಕರ, ಪ್ರದೀಪ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next