Advertisement

ಉಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆಯಲ್ಲಿ  ಸರ್ಕಾರ ಎಡವಿದೆ: ಶಾಸಕ ಗಣೇಶ್

05:18 PM Mar 05, 2022 | Team Udayavani |

ಕುರುಗೋಡು: ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿವೆ ಎಂದು ಶಾಸಕ ಜೆ. ಎನ್. ಗಣೇಶ್ ಸರಕಾರದ ವಿರುದ್ಧ ಗುಡುಗಿದರು.

Advertisement

ಸಮೀಪದ ದಮ್ಮೂರು ಗ್ರಾಮದ ಕಾರ್ಯಕರ್ತರ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಊಟದ ವ್ಯವಸ್ಥೆ ಇಲ್ಲದೆ ಕೇವಲ ಚಿಪ್ಸ್, ಮಂಡಕ್ಕಿ ಇತರೆ ಆಹಾರಕ್ಕೂ ಪರದಾಡಬೇಕಾಗಿದೆ. ಈಗಾಗಲೇ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಆದರೂ ಸರಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲದಾಗಿದೆ.

ಒಂದು ಕಡೆ ನೋಡಿದರೆ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆ ಸರಕಾರ ಸಂಪೂರ್ಣ ಜವಾಬ್ದಾರಿ ವಹಿಸುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣದ ಖರ್ಚು ವೆಚ್ಚ ಕೂಡ ಬರಿಸಲಿದೆ ಎಂದು ಕೇವಲ ಪ್ರಚಾರಕ್ಕೆ, ಶೋಕಿಗೆ ಸೀಮಿತವಾಗಿದ್ದರೆ ಹೊರೆತು ಯಾವುದೇ ಇನ್ನೂ ಕಾರ್ಯ ರೂಪಕ್ಕೆ ತರುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಚೋಚ್ಚಲ ಬಜೆಟ್ ಮಂಡಿಸಿದ್ದು, ರೈತರಿಗೆ ಖುಷಿ ಇಲ್ಲದಂತಾಗಿದೆ.

ಬಜೆಟ್ ನಲ್ಲಿ ರೈತರಿಗೆ ಯಾವುದೇ ಆದ್ಯತೆ ನೀಡಿಲ್ಲ, ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತ ವಿರೋದಿಯಾಗಿ ಮಾರ್ಪಟ್ಟಿವೆ ಎಂದು ಬೇಸಾರ ವ್ಯಕ್ತಪಡಿಸಿದರು.

Advertisement

ಇನ್ನೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀರಾಮುಲು ಅವರ ಮೇಲೆ ನಮಗೆ ಅಪಾರ ಗೌರವ ಇದೆ ಕ್ಷೇತ್ರದ ಬಹುದೊಡ್ಡ ಅಭಿವೃದ್ಧಿ ಕಾರ್ಯಗಳ ಭೂಮಿ ಪೂಜೆಗೆ ಆಗಮಿಸುತ್ತಾರೆ, ಆದರೂ ಕ್ಷೇತ್ರದ ಶಾಸಕರು ಸಮಯ ನಿಗದಿ ಮಾಡಿ ತಿಳಿಸಿದಾಗ ಬರಬೇಕು ಹೊರೆತು ಇನ್ಯಾರೋ ಮಾತು ಕೇಳಿ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಶೋಭೆಯಲ್ಲ ಎಂದು ತಿಳಿಸಿದರು.

ಇದಲ್ಲದೆ ಕ್ಷೇತ್ರಕ್ಕೆ ಬರುತ್ತಿರುವ ಅನುದಾನವನ್ನು ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದ ಅನುದಾನ ದ ಮೇಲೆ ಶಾಸಕರು ಭೂಮಿ ಪೂಜೆ ಮಾಡಿಸುತ್ತಿದ್ದಾರೆ. ಆದ್ದರಿಂದ ನನ್ನ ಅವಧಿಯಲ್ಲಿ ತಂದ ಅನುದಾನಕ್ಕೆ ನನ್ನ ಮಾವ ಶ್ರೀರಾಮುಲು ಅವರಿಂದ ಭೂಮಿ ಪೂಜೆ ಮಾಡಿಸುತ್ತೇನೆ ಎಂದು ಹೇಳುತ್ತಿದ್ದಾರೆ ಮಾಜಿ ಶಾಸಕ ಸುರೇಶ್ ಬಾಬು ಅವರು ಉಸ್ತುವಾರಿ ಮಂತ್ರಿಗಳನ್ನು ಮುಂದಿಟ್ಟು ಕೊಂಡು ರಾಜಕಾರಣ ಮಾಡುತ್ತಿದ್ದಾರೆ ಮಾಡಲಿ ಅವರು ದೊಡ್ಡವರು ಅವರ ಬಗ್ಗೆ ಮಾತನಾಡುವುದೇ ಬೇಡಾ ಎಂದು ಪತ್ರಕರ್ತರು ಕೇಳಿದ ಪ್ರೆಶ್ನೆಯಿಂದ ಸಲೀಸಾಗಿ ಜಾರಿಕೊಂಡರು.

ಇನ್ನೂ ಈಗಾಗಲೇ ಚಾನಾಳು ಗ್ರಾಮದಲ್ಲಿ 10 ವರ್ಷಗಳ ಬೇಡಿಕೆಯಾಗಿದ್ದ ಶಾಲೆ ಕೊಠಡಿಗೆ ಭೂಮಿ ಪೂಜೆ ನೆರೆವೇರಿಸಲಾಗಿದೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.

ಬೇಸಿಗೆ ಸಮೀಪಸುತ್ತಿರುವ ಹಿನ್ನಲೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಸಮಸ್ಯೆಗಳಿಗೆ ಒತ್ತು ನೀಡಿ ಬಗೆಹರಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next