Advertisement
ಆಸ್ತಿ ವಿವಾದದಿಂದಾಗಿ ಇಕ್ಬಾಲ್ ಅನ್ಸಾರಿ ಅವರು ನಟಿ ಪಂಚಮಿಯನ್ನು 2ನೇ ವಿವಾಹವಾಗಿರುವ ಗುಟ್ಟು ರಟ್ಟಾದಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಸಹೋದರರ ನಡುವೆ ಆಸ್ತಿ ವಿವಾದ ನಡೆದಿತ್ತು.
ನಮ್ಮ ತಂದೆ ತೀರಿಹೋದ ಮೇಲೆ ತಂದೆಯ ಆಸ್ತಿಯಲ್ಲಿ ಮೂರು ಜನರಿಗೆ ಆಸ್ತಿ ಹಂಚಿಕೆಯಾಗಬೇಕಿತ್ತು. ಆದರೆ ಶಾಸಕ ಅನ್ಸಾರಿ ಅವರು ಖಾಲಿ ಪತ್ರದ ಮೇಲೆ ನಮ್ಮ ಸಹಿ ಪಡೆದು ನಮಗೆ ಆಸ್ತಿಯನ್ನು ಕೊಡದೆ ವಂಚಿಸಿದ್ದಾರೆ. 2015ರ ವೇಳೆಗೆ ಅಣ್ಣ ಇಕ್ಬಾಲ್ ಅನ್ಸಾರಿ ಅವರು ನಟಿ ಪಂಚಮಿ ಹೆಸರಿನಲ್ಲಿ ವೈನ್ ಶಾಪ್ ಮಾಡಿದ್ದರು. ಅಲ್ಲದೇ ಆಸ್ತಿಯನ್ನು ಕೂಡಾ 2ನೇ ಪತ್ನಿಯಾದ ಪಂಚಮಿ ಹೆಸರಿಗೆ ಬರೆದಿರುವುದಾಗಿ ಸಹೋದರ ಅಜರ್ ಅನ್ಸಾರಿ ಖಾಸಗಿ ಟಿವಿ ಚಾನೆಲ್ ಜೊತೆ ಮಾತನಾಡುತ್ತ ದೂರಿದ್ದಾರೆ.