Advertisement
ಕಾಂಗ್ರೆಸ್ ಮಾಡಿರುವ ಆಪರೇಷನ್ ಕಮಲ ಆರೋಪಕ್ಕೆ ತಿರುಗೇಟು ನೀಡಿದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದೇ ಒಂದು ಸರಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ಜನರ ವಿಶ್ವಾಸ ಕಳೆದುಕೊಂಡಿರಲಿಲ್ಲ. ಇಂತ ಹೀನ ಸ್ಥಿತಿ ಸಿದ್ದರಾಮಯ್ಯ ಸರಕಾರಕ್ಕೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಿದ್ದರಾಮಯ್ಯ ಮಂತ್ರಿಗಳ ಮನೆ ಮನೆಗೆ ಹೋಗಿ ವಿರೋಧ ಶಮನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಡಾ| ಜಿ.ಪರಮೇಶ್ವರ ನಿವಾಸಕ್ಕೆ ಹೋಗಿದ್ದ ಸಿದ್ದರಾಮಯ್ಯ ತಮ್ಮ ತರುವಾಯ ನಿಮ್ಮನ್ನೇ ಸಿಎಂ ಮಾಡುವುದಾಗಿ ಆಶ್ವಾಸನೆ ನೀಡಿರುವ ಅನುಮಾನವಿದೆ ಎಂದರು.
ಶಾಸಕ ಗಣಿಗ ರವಿಯವರು ತಮ್ಮ ರೇಟ್ ಫಿಕ್ಸ್ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿರಬೇಕು. ಹರಾಜಿನಲ್ಲಿ ಸರಕಾರಿ ಸವಾಲ್ ರೀತಿ ದರ ನಿಗದಿ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ಲಜ್ಜೆಗೆಟ್ಟು ಹೇಳಿಕೆ ನೀಡಬಾರದು. ಅಭದ್ರತೆ ಇದ್ದರೆ ಪೊಲೀಸ್ ಠಾಣೆಗೆ ದೂರು ನೀಡಲಿ. ಶಾಸಕರಿಗೆ ಗೌರವ ಬರಬೇಕು, ಅನುದಾನ ಕೊಡಬೇಕು, ಶಿಫಾರಸು ಪತ್ರದಂತೆ ವರ್ಗಾವಣೆ ಆಗಬೇಕು. ಅದಕ್ಕಾಗಿ ಈ ರೀತಿ ಹೇಳಿಕೆ ಹರಿಬಿಡುತ್ತಿದ್ದಾರೆ. ಅವರದ್ದೇ ಸರಕಾರ ಇದೆ. ದೂರು ಕೊಟ್ಟು ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
Related Articles
ಎಟಿಎಂ ಸರಕಾರದ ನಿಗಮ-ಮಂಡಳಿ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಕಲೆಕ್ಷನ್ ಕೊಡಿ, ಸೀಟು ಪಡಿ. ಕಂತೆ ಕಂತೆ ತಂದವರಿಗೆ ಮೊದಲ ಆದ್ಯತೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ಬಿಜೆಪಿ ಬಿಡಿಎ-50 ಕೋ. ರೂ., ಜಲಮಂಡಳಿ- 45 ಕೋ.ರೂ., ಕೆಆರ್‌ಐಡಿಎಲ್ 20 ಕೋ.ರೂ., ಕಿಯೋನಿಕ್ಸ್ 15 ಕೋ.ರೂ., ಉಗ್ರಾಣ ನಿಗಮ 12 ಕೋ.ರೂ., ಗೃಹ ಮಂಡಳಿ 10 ಕೋ. ರೂ. ಎಂದು ರೇಟ್ ಕಾರ್ಡ್ ಹಾಕಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರು ಹರಾಜು ಕೂಗುತ್ತಿರುವ ರೀತಿ ಕ್ರಿಯೇಟಿವ್ಸ್ ರೂಪಿಸಲಾಗಿದೆ.
ಡಿ.ಕೆ.ಶಿವಕುಮಾರ್ ಅವರನ್ನು ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ ಎಂದು ಟೀಕಿಸಿರುವ ಬಿಜೆಪಿ, ರಾಜ್ಯದಲ್ಲಿ ಬರವಿದೆ. ಆದರೆ ನೀವು ಎಷ್ಟು ಬಾರಿ ಪ್ರವಾಸ ಮಾಡಿದ್ದೀರಿ ಸ್ವಾಮಿ? ತೆಲಂಗಾಣ ಕಾಂಗ್ರೆಸಿಗರ ಮನೆಯಲ್ಲಿ ಐಟಿ ದಾಳಿ ವೇಳೆ ಹಣ ಸಿಕ್ಕಿ ಬಿದ್ದಿದೆ ಎಂದು ರಾಜ್ಯದಲ್ಲಿ ಕಲೆಕ್ಷನ್ ಮಾಡಿದ ಹಣ ತಲುಪಿಸಲು ಹೋಗಿದ್ದೀರಾ ? ಎಂದು ಪ್ರಶ್ನಿಸಿದೆ.
Advertisement