Advertisement

ಯಾವ ಪುರುಷಾರ್ಥಕ್ಕೆ ಮೈತ್ರಿ ಸರ್ಕಾರಕ್ಕೆ ಬೆಂಬಲ?

09:28 AM Jan 28, 2019 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಎಲ್ಲೂ ಅಭಿವೃದ್ಧಿ ನಡೆದಿಲ್ಲ. ಭೀಕರ ಬರ ಬಿದ್ದರೂ ಪರಿಹಾರ ಕಾರ್ಯ ಕೈಗೊಂಡಿಲ್ಲ. ಈ ಕುರಿತು ಕಾಂಗ್ರೆಸ್‌ ಶಾಸಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ, ಕಾಂಗ್ರೆಸ್‌ ಶಾಸಕರು ಮೈತ್ರಿ ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕೆ ಬೆಂಬಲ ಕೊಟ್ಟಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಗೋವಿಂದ ಕಾರಜೋಳ ಟೀಕಿಸಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಓರ್ವ ಸಚಿವರು, ಶಾಸಕರಾದ ಎಸ್‌.ಟಿ. ಸೋಮಶೇಖರ ಮುಂತಾದವರು ಮಾಧ್ಯಮಗಳ ಮೂಲಕ ಹೇಳಿಕೆ ಕೊಡುತ್ತಿರುವುದು ನೋಡಿದ್ದೇನೆ. ಸರ್ಕಾರದ ಕಾರ್ಯ ವೈಖ್ಯರಿ ಕುರಿತು ಅವರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಸರ್ಕಾರಕ್ಕೆ ಬೆಂಬಲ ಏಕೆ ಕೊಡ್ತೀರಿ ಎಂದು ಪ್ರಶ್ನಿಸಿದರು.

ಕಂದಾಯ ವಿಭಾಗವಾರು ಪರಿಶೀಲಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಪೂರ್ವ ರಾಜ್ಯದ ಕಂದಾಯ ವಿಭಾಗವಾರು ಅಧಿಕಾರಿಗಳ ಸಭೆ ನಡೆಸುವ ಜತೆಗೆ ರೈತರ ಹೊಲಗಳಿಗೆ ಭೇಟಿ ನೀಡಿ ಬರದ ತೀವ್ರತೆ ಅರಿತುಕೊಳ್ಳಬೇಕು. ಆ ಬಳಿಕವೇ ಬಜೆಟ್ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಯಾವ ಜಿಲ್ಲೆಯಲ್ಲೂ ಬರ ಪರಿಹಾರ ಕಾಮಗಾರಿ ನಡೆದಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ 5.50 ಲಕ್ಷ ಜಾನುವಾರುಗಳಿದ್ದು, ಎಲ್ಲೂ ಮೇವು ಬ್ಯಾಂಕ್‌ ಸ್ಥಾಪಿಸಿಲ್ಲ. ಮೇವು ಸಂಗ್ರಹ ಕೂಡ ಮಾಡಿಲ್ಲ ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರ ನಿದ್ದೆ ಮಾಡುತ್ತಿದೆ
ರಾಜ್ಯದಲ್ಲಿ ಬರ ದಿನೇ ದಿನೇ ತೀವ್ರಗೊಂಡರೂ ಪರಿಹಾರ ಕಾರ್ಯ ಕೈಗೊಂಡಿಲ್ಲ. ಸರ್ಕಾರ ಗಾಢ ನಿದ್ರೆಯಲ್ಲಿದೆ. ನೆಪಕ್ಕೆ ಮಾತ್ರ ಸರ್ಕಾರ ಅಸ್ತಿತ್ವದಲ್ಲಿದೆ. ಈ ಕುರಿತು ಕಾಂಗ್ರೆಸ್‌ ಶಾಸಕರೇ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
• ಗೋವಿಂದ ಕಾರಜೋಳ,
ಬಿಜೆಪಿ ಶಾಸಕ, ಮಾಜಿ ಸಚಿವ

Advertisement

ಜಾನುವಾರು ಸತ್ತರೂ ಕೇಳುವವರಿಲ್ಲ
ತೇರದಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಲತಿಪ್ಪಿ ಗ್ರಾಮದಲ್ಲಿ ಒಂದೇ ದಿನ 20 ಜಾನುವಾರು ಸತ್ತಿವೆ. ಅವುಗಳಿಗೆ ಔಷಧ ಕೊಡಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಜಾನುವಾರು ಔಷಧ ಸಂಗ್ರಹ- ಔಷಧೋಪಚಾರ ಕುರಿತು ಕೇಳಿದರೆ, ಅಧಿಕಾರಿಗಳ ಬಳಿ ಉತ್ತರವೂ ಇಲ್ಲ.
 • ಸಿದ್ದು ಸವದಿ,
 ತೇರದಾಳದ ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next