Advertisement

ಬೂದಗವಿ ವ್ಯಾಪ್ತಿಯ 4 ಕೆರೆಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್ ರಿಂದ ಬಾಗಿನ ಅರ್ಪಣೆ

07:26 PM Nov 23, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೇನಾಯಕನಹಳ್ಳಿ ಗ್ರಾಮದ ಕಾವಲಮ್ಮ ಕೆರೆ, ಮಾರೀಪಾಳ್ಯ ಕೆರೆ, ಅನುಪಲು ಕೆರೆ, ಸಿದ್ದರಬೆಟ್ಟದ ಕಟ್ಟೆ ಗೆ ಕ್ಷೇತ್ರದ ಶಾಸಕ ಡಾ.ಜಿ ಪರಮೇಶ್ವರ್ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

Advertisement

ಸಿದ್ದರಬೆಟ್ಟದ ಬಾಳೆ ಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರ ಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ರವರು ದಿವ್ಯಾಸನದಲ್ಲಿ ಕಾರ್ಯಕ್ರಮವು ಯಶಸ್ವಿಯಾಯಿತು.ನಂತರ ಕ್ಷೇತ್ರಪಾಲಕಿ ಶಕ್ತಿ ದೇವತೆಯಾದ ಶ್ರೀ ಕಾವಲಮ್ಮ ದೇವಿಗೆ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ರವರು ಮತ್ತು ಶಾಸಕ ಡಾ.ಜಿ ಪರಮೇಶ್ವರ್ ವಿಷೇಶ ಪೂಜೆ ಸಲ್ಲಿಸಿದರು.

ನಂತರ ನೇಗಲಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮಕ್ಕೆ ಮರೇನಾಯಕನಹಳ್ಳಿ,ನೇಗಲಾಲ, ಮಾರೀಪಾಳ್ಯ,ಅನುಪಲು,ಗಟ್ಟಿ ತಿಮ್ಮನಹಳ್ಳಿ ಗ್ರಾಮದ ಸಹಸ್ರಾರು ಮಂದಿ ಮಹಿಳೆಯರು ಕುಂಭ ಕಳಸಗಳನ್ನೂ ಹೊತ್ತು ಮತ್ತು ವೀರಗಾಸೆ ನೃತ್ಯದೊಂದಿಗೆ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ರವರನ್ನು ಮತ್ತು ಶಾಸಕ ಡಾ ಜಿ ಪರಮೇಶ್ವರ್ ರವರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ನಂತರ ಕಾರ್ಯಕ್ರಮವನ್ನು ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ರವರು ಮಾತನಾಡಿ ಸಿದ್ದರಬೆಟ್ಟ ಪುಣ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಆಗಬೇಕಿದೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಅಜಾತ ಶತ್ರುವಾಗಿ ಉತ್ತಮವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನವನ್ನು ತಂದು ಅಭಿವೃದ್ದಿ ಮಾಡುತ್ತಿದ್ದಾರೆ ಸಿದ್ದರಬೆಟ್ಟಕ್ಕೆ ಐವತ್ತು ಲಕ್ಷ ಅನುದಾನ ತಂದು ಬೆಟ್ಟದ ಮೇಲೆ ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲು ಮೆಟ್ಟಿಲುಗಳ ನಿರ್ಮಾಣ ಮಾಡಲು ಶ್ರಮಿಸಿದ್ದಾರೆ ಎಂದರು.

Advertisement

ಇದೇ ಸಂದರ್ಭದಲ್ಲಿ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ರವರಿಗೆ ಗ್ರಾಮಸ್ತರಿಂದ ಸನ್ಮಾನ ಮಾಡಿ ಗೌರವ ಅರ್ಪಿಸಲಾಯಿತು.ನಂತರ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ ಪರಮೇಶ್ವರ್ ಮಾತನಾಡಿ ತುಂಬಾಡಿಯಿಂದ ಸಿದ್ದರಬೆಟ್ಟದ ವರೆಗೆ 9 ಕೋಟಿ ಅನುದಾನವನ್ನು ಬಳಸಿ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಲಾಗಿದೆ ಸಿದ್ದರಬೆಟ್ಟದಲ್ಲಿ ಸ್ಥಳೀಯ ಗ್ರಾಮೀಣಾ ಪ್ರದೇಶದ ರೈತರ ಮಕ್ಕಳ ವಿದ್ಯಾಭ್ಯಾಸ ಅನುಕೂಲವಾಗುವ ನಿಟ್ಟಿನಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ ಶೀಘ್ರದಲ್ಲಿಯೆ ವಸತಿ ಶಾಲೆಯನ್ನು ಪ್ರಾರಂಭಿಸಲಾಗುವುದು ಈ ಭಾಗದ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ನೂರಾರು ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂದರು..

ಕಾರ್ಯಕ್ರಮದಲ್ಲಿ ಸುಮಾರು 700 ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಹೂವು ನೀಡಿ ಸೀರೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು,ಹಿರಿಯ ಮುಖಂಡರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಕಾಂಗ್ರೆಸ್ ಯುವ ಮುಖಂಡರು,ಅಕ್ಕ ಪಕ್ಕದ ಹಳ್ಳಿಯ ಗ್ರಾಮಸ್ತರು,ರೈತರು,ಸಾರ್ವಜನಿಕರು, ಮಹಿಳೆಯರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next