Advertisement

ಅಕ್ರಮಗಳಿಗೆ ಕಡಿವಾಣ ಹಾಕಿ ಮನ್‌ಮುಲ್‌ ಆಡಳಿತ ಮಂಡಳಿಯಿಂದ ಹೆಚ್ಚಿನ ಒತ್ತು ನೀಡಿ ಕೆಲಸ: ಶಾಸಕ

03:32 PM Apr 19, 2022 | Team Udayavani |

ಮಂಡ್ಯ: ಹಾಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮನ್‌ಮುಲ್‌ ಆಡಳಿತ ಮಂಡಳಿ ಒತ್ತು ನೀಡಿ ಕೆಲಸ ಮಾಡುತ್ತಿದೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ತಿಳಿಸಿದರು.

Advertisement

ತಾಲೂಕಿನ ಹೊಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ಹಾಲು ಶೀಥಲೀಕರಣ ಘಟಕವನ್ನು (ಬಿಎಂಸಿ) ಉದ್ಘಾಟಿಸಿ ಮಾತನಾಡಿದರು.

ಆಡಳಿತ ಮಂಡಳಿ ಕ್ರಮ: ಹಳೇ ಬಿಎಂಸಿ ಘಟಕಗಳಲ್ಲಿ ನಿತ್ಯ ಸಾವಿರಾರು ಲೀಟರ್‌ ಹಾಲು ಕಳ್ಳತನ ಮಾಡುತ್ತಿದ್ದರು. ಇಂತಹ ಪ್ರಕರಣ ಗಳನ್ನು ಅಧ್ಯಕ್ಷರು ಪತ್ತೆ ಹಚ್ಚಿ ತನಿಖೆಗೆ ಆದೇಶ ಮಾಡಿ ದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮ ವಹಿಸಲಿದೆ ಎಂದು ಹೇಳಿದರು.

ಸಹಕಾರ ನೀಡಿ: ಶಿಲಾನ್ಯಾಸ ಫಲಕ ಉದ್ಘಾ ಟಿಸಿದ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮ ಚಂದ್ರು ಮಾತನಾಡಿ, ಗುಣಮಟ್ಟದ ಹಾಲನ್ನು ಡೇರಿಗೆ ಹಾಕಬೇಕು. ಕಳಪೆ ಹಾಲು ಹಾಕಿದರೆ ಎಷ್ಟು ಪ್ರಮಾಣದ ಹಾಲು ಶೇಖರಣೆಯಾಗಿ ರುತ್ತೋ ಅಷ್ಟೂ ಪ್ರಮಾಣದ ಹಾಲು ಕೆಡುತ್ತದೆ. ಆದ್ದರಿಂದ ಉತ್ತಮ ಹಾಲನ್ನು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಕುಟುಂಬದ ಆರೋಗ್ಯವೂ ಮುಖ್ಯ: ಮಾಜಿ ಶಾಸಕ ಎಚ್‌.ಬಿ.ರಾಮು ಮಾತನಾಡಿ, ಮಾಜಿ ಶಾಸಕ ದಿ.ಎಚ್‌.ಡಿ.ಚೌಡಯ್ಯ ಅವರ ಸಲಹೆ ಮೇರೆಗೆ ಗ್ರಾಮದಲ್ಲಿ ಬಿಎಂಸಿ ಘಟಕ ಉದ್ಘಾ ಟನೆಯಾಗಿದೆ. ಉತ್ಪಾದಕರು ತಮಗೆ ಎಷ್ಟು ಬೇಕೋ ಅಷ್ಟು ಹಾಲನ್ನು ಕುಟುಂಬಕ್ಕಾಗಿ ಇಟ್ಟು ಕೊಂಡು ಉಳಿದ ಹಾಲನ್ನು ಡೇರಿಗೆ ಹಾಕಬೇಕು. ತಮ್ಮ ಕುಟುಂಬವೂ ಆರೋಗ್ಯವಾಗಿರಬೇಕು. ಎಲ್ಲವನ್ನೂ ಹಾಕದೆ ಸ್ವಲ್ಪ ಮಟ್ಟಿಗೆ ಉಳಿಸಿಕೊಳ್ಳು ವುದು ಅಗತ್ಯ ಎಂದು ಸಲಹೆ ನೀಡಿದರು.

Advertisement

ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇ ಶಕ ಎಚ್‌.ಎಲ್‌.ಶಿವಣ್ಣ, ಡೇರಿ ಅಧ್ಯಕ್ಷ ತಿಮ್ಮೇ ಗೌಡ, ಮಾಜಿ ಅಧ್ಯಕ್ಷ ನಿಂಗರಾಜು, ಟಿ.ಟಿ.ಶ್ರೀನಿ ವಾಸ್‌, ಉಪಾಧ್ಯಕ್ಷೆ ಶಾಂತಮ್ಮ, ಮಾಜಿ ಉಪಾಧ್ಯಕ್ಷ ಗಂಗಾಧರ್‌, ಗ್ರಾಪಂ ಉಪಾಧ್ಯಕ್ಷ ಎಚ್‌.ಡಿ.ರವಿ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಾಳೇಗೌಡ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಎಸ್‌.ಪ್ರಭಾಕರ್‌, ಜನತಾ ಶಿಕ್ಷಣ ಸಂಸ್ಥೆಯ ಎಚ್‌.ಸಿ.ಮೋಹನ್‌ಕುಮಾರ್‌, ಕೆಎಸ್‌ಎಫ್‌ಸಿ ಲೀಗಲ್‌ ಅಧಿ ಕಾರಿ ಎಚ್‌.ಎಂ.ವಿಜಯ ಕುಮಾರ್‌, ಗ್ರಾಮದ ಮುಖಂಡ ಜಟ್ಟಿಕುಮಾರ್‌, ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎಂ.ಕುಮಾರ್‌, ಉಪಾಧ್ಯಕ್ಷ ಕೃಷ್ಣ, ಮನ್‌ಮುಲ್‌ ಉಪವ್ಯವಸ್ಥಾಪಕ ಎಚ್‌.ಎನ್‌. ಮಂಜೇಶ್‌ಗೌಡ, ವಿಸ್ತರಣಾಧಿ ಕಾರಿ ಎಂ.ಸಿ.ರಶ್ಮಿ, ಆರ್‌ಎಪಿಸಿಎಂಎಸ್‌ ಮಾಜಿ ನಿರ್ದೇಶಕ ಎಚ್‌.ಸಿ.ಶ್ರೀಧರ್‌, ಪಶು ವೈದ್ಯಾ  ಧಿಕಾರಿ ಸುರೇಶ್‌, ಆರೋಗ್ಯಾಧಿ ಕಾರಿ ಡಾ. ದುರ್ಗಾಂಭ, ಸಂಘದ ನಿರ್ದೇಶಕರಾದ ಎಚ್‌. ಬಿ.ಯೋಗೇಶ್‌, ಶಿವಲಿಂಗಯ್ಯ, ಉಮೇಶ್‌, ಶಿವರಾಜು, ಪದ್ಮಾ, ಶಿವ, ಸಿಇಒ ಶಿವಕುಮಾರ್‌, ಸಿಬ್ಬಂದಿಗಳಾದ ಎಚ್‌.ಸಿ.ಬೋರಯ್ಯ, ಶಿವಕುಮಾರ್‌, ಬೋರಯ್ಯ, ರಘು, ತಮ್ಮೇ ಗೌಡ ಮತ್ತಿತರರು ಉಪಸ್ಥಿತರಿದ್ದರು

ಅಭಿವೃದ್ಧಿಗೆ ಸಹಕರಿಸಿ: ಮಾಜಿ ಶಾಸಕ ಚೌಡಯ್ಯ ಅವರು ಬಿಎಂಸಿ ಘಟಕ ಸ್ಥಾಪನೆಗೆ ಸಾಕಷ್ಟು ಶ್ರಮ ವಹಿಸಿದ್ದರು. ಅವರ ಆಶಯದಂತೆ ಇದೀಗ ಗ್ರಾಮದಲ್ಲಿ ಬಿಎಂಸಿ ಘಟಕ ಸ್ಥಾಪನೆಯಾಗಿದೆ. ಇದನ್ನು ಪ್ರತಿಯೊಬ್ಬ ಉತ್ಪಾದಕರೂ ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳಬೇಕು. ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next