ಸುರತ್ಕಲ್ : ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಇಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈಯವರು ವೀಕ್ಷಿಸಿ ಭಾವುಕರಾದರು.
ಚಿತ್ರವನ್ನು ನೋಡಿದ ಬಳಿಕ ಮಾತಾನಾಡಿದ ಅವರು, ಸಿನಿಮಾದಲ್ಲಿ ಅಸಲಿಯಾಗಿ ಈ ಹಿಂದೆ ನಡೆದ ಅತ್ಯಾಚಾರ, ನರಮೇಧ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಣ್ಣಾರೆ ಕಂಡಂತೆ ಭಾಸವಾಗಿ ಮನಸು ವಿಚಲಿತಗೊಂಡಿದೆ ಮಾತಾಡಲು ಸಾಧ್ಯವಾಗುತ್ತಿಲ್ಲ ಎಂದು ನುಡಿದರು.
ಈ ಹಿಂದೆ ಸರ್ಕಾರ ಪೊಲೀಸು ಕಾನೂನು ಇದ್ದರೂ ಏನು ಮಾಡಲು ಸಾಧ್ಯವಾಗದೆ ಇಂತಹ ನರಮೇಧವನ್ನು ಮೌನವಾಗಿ ಸಹಿಸಿಕೊಂಡು ಇದ್ದದ್ದಾದರೂ ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿದೆ. ಇಂತಹ ಘಟನೆ ಮುಂದೆ ಮರುಕಳಿಸಬಾರದು. ವಿದೇಶಿ ಶಕ್ತಿಗಳ ಉಗ್ರಗಾಮಿಗಳ ಕೈವಾಡ ಹಾಗೂ ಜನಾಂಗೀಯತೆಯನ್ನು ಬೆಳೆಯಲು ಬಿಡದೆ ದೇಶವನ್ನು ಸದೃಢವಾಗಿ ಬೆಳೆಸುವ ಹಾಗೂ ಕಾಶ್ಮೀರಿ ಪಂಡಿತರಿಗೆ ಅವರ ನ್ಯಾಯಯುತ ಹಕ್ಕನ್ನು ಒದಗಿಸಿಕೊಡುವ ಕೆಲಸವಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.
ಶಾಸಕ ಭರತ್ ಶೆಟ್ಟಿ ವೈ ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಣೆಗೆ ವೈಯಕ್ತಿಕವಾಗಿ ಎಲ್ಲರ ಟಿಕೆಟ್ ಗಳನ್ನು ಖರೀದಿಸಿ ವೀಕ್ಷಣೆಗೆ ಪ್ರೋತ್ಸಾಹಿಸಿದರು.
ಈ ವೇಳೆ ಚಿತ್ರವನ್ನು ವೀಕ್ಷಿಸಿ ಬಳಿಕ ಮಾತಾನಾಡಿದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಒಮ್ಮೆಯಾದರೂ ಜನರು ಈ ಸಿನಿಮಾವನ್ನು ನೋಡಲೇಬೇಕು. ಮನಸು ಪರಿವರ್ತನೆಯಾಗುವ ಅಂತಹ ಚಲನಚಿತ್ರವಿದು ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ ಇಂತಹ ದುರ್ಘಟನೆ ನಡೆದಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೋವನ್ನು ತೋಡಿಕೊಂಡರು.