Advertisement

ಶಿನೋಳಿ ಚೆಕ್‌ಪೋಸ್ಟ್‌ಗೆ ಶಾಸಕ ಬೆನಕೆ ಭೇಟಿ

08:12 AM May 24, 2020 | mahesh |

ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಶಿನೋಳಿ ಚೆಕ್‌ಪೋಸ್ಟ್‌ ಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಎರಡೂ ರಾಜ್ಯಗಳ ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ಮಹಾರಾಷ್ಟ್ರದ ಚಂದಗಡದಿಂದ ಬೆಳಗಾವಿಗೆ ಹಾಗೂ ಬೆಳಗಾವಿ ಗಡಿ ಭಾಗದ ಹಳ್ಳಿಯ ಜನರು ಚಂದಗಡಕ್ಕೆ ನಿತ್ಯ ವ್ಯಾಪಾರ-ವಹಿವಾಟು ನಡೆಸಲು ಆಗಮಿಸುತ್ತಾರೆ. ಆದರೆ ಲಾಕ್‌ಡೌನ್‌ದಿಂದಾಗಿ ಈ ಗಡಿ ಭಾಗವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಈ ಪ್ರದೇಶದ ಹಳ್ಳಿಗಳ ಜನರಿಗೆ ತೊಂದರೆ ಆಗಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Advertisement

ಗಡಿ ಭಾಗದ ಹಳ್ಳಿಗಳ ಜನರಿಗೆ ಅಗತ್ಯ ಸೇವೆ ಒದಗಿಸುವ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು. ವೈದ್ಯಕೀಯ ಚಿಕಿತ್ಸೆಗೆ ರೋಗಿಗಳನ್ನು ಕರೆದುಕೊಂಡು ಬರುವ ವಾಹನಗಳು, ತರಕಾರಿ, ದಿನಸಿ ವಾಹನ ತಡೆಯಬಾರದು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.

ಶಿನೋಳಿ ಚೆಕ್‌ಪೋಸ್ಟ್‌ ದಾಟಿಕೊಂಡೆ ಕರ್ನಾಟಕದ ಗಡಿ ಹಳ್ಳಿ ಕುದ್ರೇಮನಿ ಗ್ರಾಮಕ್ಕೆ ಹೋಗಬೇಕಾಗುತ್ತದೆ. ನಂತರ ಮತ್ತೆ ಮಹಾರಾಷ್ಟ್ರದ ಹಳ್ಳಿಗಳು ಬರುತ್ತವೆ. ಹೀಗಾಗಿ ಕುದ್ರೇಮನಿಯಿಂದ ಬರುವ ಹಾಗೂ ಗಡಿ ಭಾಗದಲ್ಲಿರುವ ಮಹಾರಾಷ್ಟ್ರ ಹಳ್ಳಿಗಳ ಜನರಿಗೆ ತುರ್ತು ಸೇವೆ ಒದಗಿಸುವ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಜತೆಗೆ ಪಾಸ್‌ ಇಲ್ಲದೇ ಕಳ್ಳ ದಾರಿ ಮೂಲಕ ಬರುವ ಜನರನ್ನು ಯಾವುದೇ ಕಾರಣಕ್ಕೆ ಒಳಗೆ ಬಿಡಬಾರದು. ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಿ ಕ್ವಾರಂಟೈನ್‌ ಮಾಡುವಂತೆಯೂ ಸೂಚಿಸಿದರು.

ಶಿನೋಳಿ ಚೆಕ್‌ಪೋಸ್ಟ್‌ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬಾರದಿದ್ದರೂ ಜನರ ಮನವಿ ಮೇರೆಗೆ ಸ್ಥಳಕ್ಕೆ ಶಸಕ ಅನಿಲ ಬೆನಕೆ ಭೇಟಿ ನೀಡಿದರು. ಅಗತ್ಯ ಸೇವೆ ಇಲ್ಲದೇ ಕಷ್ಟ ಪಡುತ್ತಿರುವ ಜನರ ಬಗ್ಗೆ ಜಿಪಂ ಸದಸ್ಯೆ ಸರಸ್ವತಿ ಪಾಟೀಲ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದ್ದರು. ಜನರಿಗೆ ಅನುಕೂಲ ಕಲ್ಪಿಸಲು ಸ್ಥಳಕ್ಕೆ ಭೇಟಿ
ನೀಡಿ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next