Advertisement

ಅಧಿಕಾರಕ್ಕಾಗಿ ಯಡಿಯೂರಪ್ಪ ಮುಂದೆ ಕೈಚಾಚಿ ನಿಲ್ಲುವ ಅಯೋಗ್ಯ ರಾಜಕಾರಣಿ ನಾನಲ್ಲ: ಯತ್ನಾಳ್

12:39 PM May 29, 2020 | keerthan |

ಬೆಂಗಳೂರು: ಮಾಜಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ನಡೆಸಿದ ಸಭೆ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದ ಶಾಸಕರು ಯಾವುದೇ ಬಂಡಾಯ, ಭಿನ್ನಮತದ ಚಟುವಟಿಕೆ ನಡೆಸಿಲ್ಲ ಎಂದು ಸಮರ್ಥನೆ ನೀಡಲಾರಂಭಿಸಿದ್ದಾರೆ.

Advertisement

ಉತ್ತರ ಕರ್ನಾಟಕದ ಶಾಸಕರೊಂದಿಗೆ ಗುರುವಾರ ರಾತ್ರಿ ಊಟ ಮಾಡಿದ್ದೇವೆ. ಆದರೆ ರಾಜಕೀಯದ ಬಗ್ಗೆ ಚರ್ಚಿಸಿಲ್ಲ.ಮೊನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದಾಗ ಕಳೆದ ವಾರದ ಭೋಜನ ಕೂಟದ ಬಗ್ಗೆ ತಿಳಿಸಲಾಗಿತ್ತು. ಹಾಗೆಯೇ ಸಹೋದರ ರಮೇಶ್ ಕತ್ತಿಯನ್ನು ಹಿಂದೆ ಕೊಟ್ಟ ಮಾತಿನಂತೆ ರಾಜ್ಯಸಭೆಗೆ ನೇಮಕ‌ ಮಾಡುವಂತೆ ಕೋರಲಾಗಿದೆ. ಉಳಿದಂತೆ ಯಾವುದೇ ಬಂಡಾಯ ಚಟುವಟಿಕೆ ನಡೆಸಿಲ್ಲ ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.

ಮತ್ತೊಬ್ಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಮ್ಮ ನಾಯಕರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ. ನಾನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿರುವವರೆಗೆ ನಾನು ಸಚಿವನಾಗುವುದಿಲ್ಲ. ಅಧಿಕಾರಕ್ಕಾಗಿ ಯಡಿಯೂರಪ್ಪ ಅವರ ಮುಂದೆ ಕೈಚಾಚಿ ನಿಲ್ಲುವ ಅಯೋಗ್ಯ ರಾಜಕಾರಣಿ ನಾನಲ್ಲ. ಹಾಗೆಂದು ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಏಳುವುದಿಲ್ಲ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next