ತೀರ್ಥಹಳ್ಳಿ : ಮಳೆಗಾಲ ಆರಂಭವಾಗಿದ್ದು ಡೆಂಗ್ಯೂ ಜ್ವರ ಸೇರಿ ಇತರ ಕಾಯಿಲೆ ಹರಡುತ್ತಿದ್ದು ಈ ವಿಚಾರವಾಗಿ ತಾಲೂಕಿನ ಮಾಳೂರು ಸರ್ಕಾರಿ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿದರು.
ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ಮೊದಲಿಗೆ ಆಸ್ಪತ್ರೆ ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿ ನಂತರ ವಿವಿಧ ವ್ಯವಸ್ಥೆ ಬಗ್ಗೆ ಹಾಗೂ ಆಸ್ಪತ್ರೆಯ ಶುಚಿತ್ವದ ಬಗ್ಗೆ ಪರಿಶೀಲನೆ ಮಾಡಿದರು.
ನಂತರ ರೋಗಿಗಳ ಬಳಿ ತೆರಳಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಸೇವೆಗಳ ಬಗ್ಗೆ ಕೇಳಿ ಮಾಹಿತಿ ಪಡೆದರು.
ನಂತರ ವೈದ್ಯರ ಬಳಿ ಮಾತನಾಡಿ ಇತ್ತೀಚಿಗೆ ವೈರಲ್ ಫೀವರ್ ಹಾಗೂ ಡೆಂಗ್ಯೂ ನಂತಹ ರೋಗಗಳು ಹೆಚ್ಚಾಗಿರುವ ಕಾರಣ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಯಾವುದೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Heavy Rain: ಆರಿದ್ರಾ ಮಳೆ ಅವಾಂತರ: ಗುಡ್ಡೆಕೊಪ್ಪದಲ್ಲಿ ಕುಸಿದು ಬಿದ್ದ ಮನೆ