Advertisement

ಶಾಸಕ, ತಹಶೀಲ್ದಾರ್‌ ವಾಗ್ವಾದ ಆಡಿಯೋ ವೈರಲ್‌

02:55 PM Jan 24, 2022 | Team Udayavani |

ಬಂಗಾರಪೇಟೆ: ತಾಲೂಕು ತಹಶೀಲ್ದಾರ್‌ಎಂ.ದಯಾನಂದ್‌ ಹಾಗೂ ಶಾಸಕ ಎಸ್‌.ಎನ್‌ .ನಾರಾಯಣಸ್ವಾಮಿ ನಡುವಿನ ಮುಸುಕಿನ ಗುದ್ದಾಟ, ಇಬ್ಬರ ನಡುವಿನ ವೈಯಕ್ತಿಕ ಆರೋಪಗಳು ತಾಲೂಕಿನಲ್ಲಿ ತೀವ್ರ ಚರ್ಚೆ ಗ್ರಾಸವಾಗಿದ್ದು, ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಬೆಳವಣಿಕೆ ಅಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ.

Advertisement

ಬಂಗಾರಪೇಟೆ ತಹಶೀಲ್ದಾರ್‌ ಆಗಿದ್ದ ಕೆ.ಬಿ.ಚಂದ್ರಮೌಳೇಶ್ವರ್‌ ಕೊಲೆ ಆದ ನಂತರ ಖಾಲಿ ಆಗಿದ್ದ ಸ್ಥಾನಕ್ಕೆ ಯಾವುದೇಶಾಸಕರು, ಸಂಸತ್‌ ಸದಸ್ಯರ ಶಿಫಾರಸು ಇಲ್ಲದೇಎಂ.ದಯಾನಂದ್‌ ನೇರ ವರ್ಗವಾಗಿ ಬಂದಿದ್ದಾರೆ.

ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ತಹಶೀಲ್ದಾರ್‌ ನಮ್ಮ ಮಾತುಗಳಿಗೆ ಆದ್ಯತೆನೀಡಬೇಕೆಂಬುದು ಸ್ಥಳೀಯ ಬಿಜೆಪಿ ಮುಖಂಡರುಆಶಯವಾದ್ರೆ, ಸ್ಥಳೀಯವಾಗಿ ಕಾಂಗ್ರೆಸ್‌ ಶಾಸಕರುಇರುವುದರಿಂದ ನಮ್ಮದೇ ನಡೆಯಬೇಕೆನ್ನುವುದು ಶಾಸಕರ ಹಿಂಬಾಲಕರ ಷರಾತ್ತಾಗಿದೆ.

ಸಮಾಧಾನ ಪಡಿಸುವಲ್ಲಿ ವಿಫ‌ಲ: ತಾಪಂ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡುವ ಪೂರ್ವಭಾವಿಸಭೆಯಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ತಹಶೀಲ್ದಾರ್‌ ಎಂ.ದಯಾನಂದ್‌ ವಿರುದ್ಧ ವಾಗ್ಧಾಳಿ ನಡೆಸಿರುವ ಆಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ಆಗಿದೆ. ಈ ವಿಷಯ ನಾಗರಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಭೆಯಲ್ಲಿ ತಾಲೂಕು ಸರ್ಕಾರಿ ನೌಕರರಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ಶಾಸಕರಿಗೆಆಪ್ತರಾಗಿರುವ ತಾಲೂಕು ಮಟ್ಟದ ಅಧಿಕಾರಿಗಳುಇದ್ದರೂ ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನ ಮಾಡದೇ ಇರುವುದು ವಿಪರ್ಯಾಸ.

Advertisement

ತಾಲೂಕಿನಲ್ಲಿ ಶಾಸಕರು ಹಾಗೂ ತಹಶೀಲ್ದಾರ್‌ ಜೋಡೆತ್ತುಗಳಾಗಿ ಕೆಲಸ ಮಾಡಿದರೆ ಮಾತ್ರ ತಾಲೂಕಿನಲ್ಲಿ ಜನರ ಕೆಲಸ ಕಾರ್ಯಗಳು, ಯೋಜನೆಗಳು, ಅಭಿವೃದ್ಧಿಕಾಮಗಾರಿಗಳು ಸರಾಗವಾಗಿ ನಡೆಯಲು ಸಾಧ್ಯ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಯಾವ ಪ್ರಶ್ನೆಗೂ ಉತ್ತರ ಇಲ್ಲ: ಇಬ್ಬರ ನಡುವಿನ ವಾಗ್ವಾದ ನಡೆದಿರುವ ಅಡಿಯೋ ವೈರಲ್‌ ಆದ ಮೇಲೆ ಇವರಿಬ್ಬರಿಗೂ ಏಕೆ ಮನಸ್ತಾಪ ಬಂದಿದೆ, ಯಾವಸಮಸ್ಯೆಯಿಂದ ಕಿತ್ತಾಟ ಶುರುವಾಗಿದೆ, ಇವರಿಬ್ಬರ ನಡುವೆ ಯಾವ ವಿಚಾರಕ್ಕೆ ಗಲಾಟೆ ನಡೆದಿದೆ, ಇವರಿಬ್ಬರನಡುವಿನ ವಿಶ್ವಾಸಕ್ಕೆ ಯಾರಾದರೂ ಹುಳಿ ಹಿಂಡಿದರಾ,ಇವರಿಬ್ಬರಲ್ಲಿ ಯಾರಾದರೂ ತಪ್ಪು ಮಾಡಿದ್ದಾರಾ,ಶಾಸಕರು ಹೇಳಿದಂತೆ ತಹಶೀಲ್ದಾರ್‌ ಅವರು ಏಕೆ ನಡೆದುಕೊಳ್ಳುತ್ತಿಲ್ಲ, ಬಿಜೆಪಿ ಸ್ಥಳೀಯ ಮುಖಂಡರುತಹಶೀಲ್ದಾರ್‌ ಮೂಲಕ ತಾಲೂಕು ಆಡಳಿತದಲ್ಲಿಹಸ್ತಕ್ಷೇಪ ಮಾಡುತ್ತಿದ್ದಾರೆಂಬುದಕ್ಕೆ ಶಾಸಕರುಪರೋಕ್ಷವಾಗಿ ತಹಶೀಲ್ದಾರ್‌ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರಾ ಎಂಬೆಲ್ಲ ಪ್ರಶ್ನೆಗಳು ತಾಲೂಕುಜನತೆಯಲ್ಲಿ ಉದ್ಬವಾಗುತ್ತಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಯಾವ ಕಡೆಯಿಂದಲೂ ಸಿಗುತ್ತಿಲ್ಲ.

ಮೊಬೈಲ್‌ ಕರೆ ಸ್ವೀಕರಿಸಿಲ್ಲ: ಮೂರು ತಿಂಗಳಿನಿಂದ ತಹಶೀಲ್ದಾರ್‌ ಎಂ.ದಯಾನಂದ್‌ ಅವರ ಮೊಬೈಲ್‌ಕರೆಗಳನ್ನು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಸ್ವೀಕರಿ ಸಲ್ಲ ಎಂಬ ದೂರು ಕೇಳಿಬಂದಿದೆ. ಅಲ್ಲದೆ,ಶಾಸಕರ ಬೆಂಬಲಿಗರೆನ್ನಲಾದ ಆ.ನಾ.ಹರೀಶ್‌ ತಾಲೂಕುಕಚೇರಿ ಯಲ್ಲಿ ಯಾವುದೇ ಕೆಲಸಗಳು ಆಗದೇನಿರ್ಲಕ್ಷ್ಯವಹಿಸಿದ್ದಲ್ಲಿ ನನಗೆ ಕರೆ ಮಾಡಿದರೆ ನ್ಯಾಯಒದಗಿಸಲಾಗುವುದೆಂದು ಮೊಬೈಲ್‌ ನಂಬರ್‌ ಹಾಕಿ, ಸರ್ಕಾರಿ ಕಚೇರಿಯಲ್ಲಿ ಭಿತ್ತಿಪತ್ರವನ್ನು ಅಂಟಿಸಿದ್ದಕ್ಕೆ ತಹಶೀಲ್ದಾರ್‌ ದಯಾನಂದ್‌ ಡೀಸಿ ಸೂಚನೆ ಮೇರೆಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶಾಸಕರಿಂದ ಬ್ಯಾನರ್‌: ಇದರಿಂದ ಕೆಂಡಾಮಂಡಲರಾದ ಶಾಸಕ ಎಸ್‌.ಎನ್‌.ನಾರಾಯಣ  ಸ್ವಾಮಿ ತಹಶೀಲ್ದಾರ್‌ ವಿರುದ್ಧ ತಿರುಗಿಬಿದ್ದು, ಶಾಸಕರು ಸ್ವತಃ ಮೊಬೈಲ್‌ ನಂಬರ್‌ ಹಾಕಿ, ತಾಲೂಕು ಕಚೇರಿಮುಂದೆ ತಾಲೂಕಿನ ರೈತರಿಗೆ, ಸಾರ್ವಜನಿಕರಿಗೆ ತಹಶೀಲ್ದಾರ್‌, ತಾಲೂಕು ಕಚೇರಿಯಿಂದ ಯಾವುದೇತೊಂದರೆ ಆಗಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದುನಾಮಫ‌ಲಕ ಹಾಕಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ತಾಲೂಕು ಆಡಳಿತ ಯಂತ್ರದ ಉಸ್ತುವಾರಿ ಆಗಿರುವ ತಹಶೀಲ್ದಾರ್‌ ಎಂ.ದಯಾನಂದ್‌ಗೆ ಜನಪ್ರತಿನಿಧಿಗಳಲ್ಲಿಯೇ ಮೊದಲ ಪ್ರಜೆಯಾಗಿರುವ ಶಾಸಕರ ನಡುವೆ ಈ ರೀತಿ ಗಲಾಟೆಗಳು ನಡೆದರೆ,ತಾಲೂಕು ಜನತೆಗೆ ನ್ಯಾಯ ಒದಗಿಸಿಕೊಡುವವರುಯಾರು? ಎನ್ನುವುದು ಸ್ಥಳೀಯ ಜನಪ್ರತಿನಿಧಿಗಳ ಪ್ರಶ್ನೆಯಾಗಿದೆ.

ಶಾಸಕರು ಹಾಗೂ ತಹಶೀಲ್ದಾರ್‌ ನಡುವೆಸಮನ್ವಯತೆ ಇದ್ದರೆ ಮಾತ್ರ ತಾಲೂಕು ಅಭಿವೃದ್ಧಿಯಾಗಲು ಸಾಧ್ಯ. ಇವರಿಬ್ಬರೂ ಒಟ್ಟಿಗೆ ಕುಳಿತು ಸಮಾಲೋಚನೆ ಮಾಡಿ,ಏಕನಿರ್ಣಯದ ಮೂಲಕ ಆಡಳಿತ ನಡೆಸಬೇಕಾಗಿದೆ. ಇವರಿಬ್ಬರೂಜನಪ್ರತಿನಿಧಿಗಳಿಗೆ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಮಾದರಿ ಆಗಬೇಗಿದೆ. ಶಾಸಕರ ಕೆಲ ಸೂಚನೆಗಳನ್ನು ತಹಶೀಲ್ದಾರ್‌ ಪಾಲನೆ ಮಾಡುವುದು ಅಗತ್ಯವಾಗಿದೆ. ಇವರಿಬ್ಬರೂ ಒಂದೇ ದೋಣಿಯಲ್ಲಿ ಸಾಗಿದರೆ ಮಾತ್ರ ದಡ ಸೇರಲು ಸಾಧ್ಯ. – ಪಿಚ್ಚಹಳ್ಳಿ ಗೋವಿಂದರಾಜ್‌, ತಾಲೂಕು ನಿರ್ದೇಶಕ, ಡಿಸಿಸಿ ಬ್ಯಾಂಕ್‌, ಬಂಗಾರಪೇಟೆ.

ಶಾಸಕರ ಹಾಗೂ ತಹಶೀಲ್ದಾರ್‌ ನಡುವೆಗಲಾಟೆ ಆಗಿದೆ. ನನ್ನಮುಂದೆಯೇನಡೆದಿದೆ. ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಇವರಿಬ್ಬರೂ ಒಗ್ಗಟ್ಟಿಗೆ ಇರಬೇಕಾಗುತ್ತದೆ. ಸರ್ಕಾರಿ ಅಧಿಕಾರಿಗಳಲ್ಲಿ ಯಾವುದೇಮನಸ್ತಾಪ ಬಂದರೂ ಸಂಘವುಮಧ್ಯಪ್ರವೇಶ ಮಾಡಿ ಸಮಸ್ಯೆಬಗೆಹರಿಸುತ್ತದೆ. ಶಾಸಕರು ಹಾಗೂತಹಶೀಲ್ದಾರ್‌ ಒಬ್ಬರೇ ಆಡಳಿತದ ಯಂತ್ರನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ತಾಲೂಕುಮಟ್ಟದ ಹಿರಿಯ ಅಧಿಕಾರಿಗಳೊಂದಿಗೆಈಗಾಗಲೇ ಚರ್ಚೆ ನಡೆಸಲಾಗಿದೆ. ಮೂರು ದಿನದಲ್ಲಿ ಇಬ್ಬರನ್ನು ಒಟ್ಟಿಗೆ ಕೂರಿಸಿಸಮಾಧಾನಪಡಿಸಲಾಗುವುದು. – ಸಿ.ಅಪ್ಪಯ್ಯಗೌಡ, ಅಧ್ಯಕ್ಷ, ಸರ್ಕಾರಿ ನೌಕರರ ಸಂಘ, ಬಂಗಾರಪೇಟೆ.

ಜನಪ್ರತಿನಿಧಿಗಳಿಗೆ ಹಾಗೂಅಧಿಕಾರಿಗಳಿಗೆಅಧಿಕಾರ ಎನ್ನುವುದು ಶಾಶ್ವತವಲ್ಲ. ಇವರಿಬ್ಬರೂ ಸಹಕೆಲವೊಂದು ಇತಿಮಿತಿಗಳನ್ನು ಮೀರದೇ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ.ಶಾಸಕರು, ತಹಶೀಲ್ದಾರ್‌ ತಾಲೂಕುಆಡಳಿತದ ವಿಚಾರದಲ್ಲಿ ಜವಾಬ್ದಾರಿ ಮರೆತುಸಾರ್ವಜನಿಕವಾಗಿ ಕಿತ್ತಾಡುವ ಅವಶ್ಯಕತೆಇಲ್ಲ. ಇಬ್ಬರೂ ಕಾನೂನಿನಂತೆ ತಮ್ಮ ಕರ್ತವ್ಯಮಾಡಬೇಕಾಗಿದೆ. – ಕೆ.ಚಂದ್ರಾರೆಡ್ಡಿ, ಬಿಜೆಪಿ ಮುಖಂಡರು, ಬಂಗಾರಪೇಟೆ.

-ಎಂ.ಸಿ.ಮಂಜುನಾಥ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next