Advertisement
ಜಮಖಂಡಿ: ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೊಳಗಾದ ಜಮಖಂಡಿ ಕ್ಷೇತ್ರ ವ್ಯಾಪ್ತಿಯ ಜನರಿಗೆ ಇಲ್ಲಿನ ಶಾಸಕ ಆನಂದ ನ್ಯಾಮಗೌಡ ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಲವು ರೀತಿಯ ನೆರವು ನೀಡುತ್ತಿದ್ದು, ಜನರಿಂದ ಶ್ಲಾಘನೆಗೆ ಒಳಗಾಗಿದೆ.
Related Articles
Advertisement
ಸರಕಾರಿ ಆಸ್ಪತ್ರೆಗಳಲ್ಲಿ, ಕೊರೊನಾ ಕೇರ್ ಸೆಂಟರ್‌ದಲ್ಲಿ ಉಪಾಹಾರ-ಊಟದ ಕಿಟ್ ಗಳನ್ನು ನೀಡುತ್ತಿಲ್ಲ. ಏಕೆಂದರೆ ಸರಕಾರ ಕೊರೊನಾ ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಆಹಾರ ಕಿಟ್ ನೀಡುತ್ತಿಲ್ಲ. ಸರಕಾರಿ ಆಸ್ಪತ್ರೆ ಮತ್ತು ಕೊರೊನಾ ಕೇರ್ ಸೆಂಟರ್ ಹೊರತು ಪಡಿಸಿ ಉಳಿದ ಎಲ್ಲ ಕೊರೊನಾ ಆಸ್ಪತ್ರೆಗಳಲ್ಲಿರುವ ಅಂದಾಜು 250 ರೋಗಿಗಳಿಗೆ ಉಪಾಹಾರ, ಊಟದ ಕಿಟ್ ನೀಡಲಾಗುತ್ತಿದೆ.
ನಗರದ ಓಮಿಸಾ ಕೊರೊನಾ ಆಸ್ಪತ್ರೆ, ಕೆಎಲ್‌ಇ ಕೊರೊನಾ ಆಸ್ಪತ್ರೆ, ಧನ್ವಂತರಿ ಮಲ್ಟಿಸ್ಪೇಷಾಲಿಟಿ ಕೊರೊನಾ ಆಸ್ಪತ್ರೆ, ಎಸ್.ಎಸ್.ಪಾಟೀಲ ಕೊರೊನಾ ಆಸ್ಪತ್ರೆಯಲ್ಲಿರುವ ಸೋಂಕು ರೋಗಿಳಿಗೆ ಉಪಾಹಾರ, ಊಟದ ಪೊಟ್ಟಣ ಪೂರೈಸಲಾಗುತ್ತಿದೆ. ಉಚಿತ ಆಂಬ್ಯುಲೆನ್ಸ್: ಶಾಸಕ ಆನಂದ ನ್ಯಾಮಗೌಡ, ಗ್ರಾಮೀಣ ಜನತೆಗೆ ದೂರದ ಆಸ್ಪತ್ರೆಗಳಿಗೆ ತೆರಳಲು ಆಗುವ ತೊಂದರೆ ಗಮನಿಸಿ ಗ್ರಾಮೀಣ ಭಾಗಕ್ಕೆ ಹೊಸದಾಗಿ ಆಂಬ್ಯುಲೆನ್ಸ್ ಸೇವೆ ಆರಂಭಸಿದ್ದಾರೆ.
ರೋಗಿಗಳು ಮನೆಯಲ್ಲಿ ಕುಳಿತು ಹೆಲ್ಪ್ಲೈನ್ ಕಾಲ್ ಮಾಡಿದರೆ ಮನೆ ಬಾಗಿಲಕ್ಕೆ ಆಂಬ್ಯುಲೆನ್ಸ್ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ. ನಗರದ ಸರಕಾರಿ ಪಿ.ಬಿ.ಹೈಸ್ಕೂಲ್‌ದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಜನರಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ತುರ್ತು ನಿಗಾದಲ್ಲಿರುವ ರೋಗಿಗಳ ಕುಟುಂಬಗಳ ಜತೆಗಿದ್ದು, ಆತ್ಮಸ್ಥೆರ್ಯ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ. ಕೊರೊನಾ ಸಂಕಷ್ಟದಲ್ಲಿರುವ ಜನರೊಂದಿಗೆ ಕೆಲಸ ಮಾಡುತ್ತಿದ್ದಾರೆ.