ಎಚ್.ಡಿ.ಕೋಟೆ: ಶಾಸಕ ಎಸ್. ಅನಿಲ್ ಚಿಕ್ಕಮಾದು 3 ದಿನಗಳ ಕಾಲ ಸರಗೂರು ತಾಲೂಕಿನಬಿ.ಮಟಕೆರೆ ಗ್ರಾಮದ ಗಿರಿಜನ ಆಶ್ರಮ ಶಾಲೆಯಲ್ಲಿ ವಾಸ್ತವ್ಯ ಹೂಡಿಲಿದ್ದಾರೆ.
ಭಾನುವಾರ ಮುಂಜಾನೆಯಿಂದಲೇ ಸರಗೂರು ಗಡಿಭಾಗದ ಬಿ.ಮಟಕೆರೆ ಆಸುಪಾಸಿನ ಗ್ರಾಮಗಳಾದ ನಡಾಡಿ, ವರದಯ್ಯನ ಕಾಲೋನಿ, ಬಾಡಗ, ನೆಮ್ಮನಹಳ್ಳಿ, ಬಂಕವಾಡಿ, ಬಾವಿಕೆರೆಹಾಡಿಮೊದಲಾದವ ಗ್ರಾಮಗಳಿಗೆ ತಾಲೂಕು ಅಧಿಕಾರಿ ಗಳೊಟ್ಟಿಗೆ ಭೇಟಿ ನೀಡಿ ಲಂಬಾಣಿ ತಾಂಡಗಳು, ಗಿರಿಜನ ಸಮಸ್ಯೆ ಆಲಿಸಿದರು.
ಆರಂಭದಲ್ಲಿ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದಂತೆ ಈಭಾಗದ ಜನರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸದರು. ಇದೇ ವೇಳೆ ಕುಡಿಯುವನೀರು, ರಸ್ತೆ ಅಭಿವೃದ್ಧಿ ಹಾಗೂ ಆಶ್ರಮ ಶಾಲೆ ದುರಸ್ತಿಯ 10 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಬೆಳಗಿನಿಂದ ಸಂಜೆ ತನಕ ಸುಮಾರು 10ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕರು, ಸ್ಥಳದಲ್ಲೇ ಹಲವು ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾತ್ರಿ ಬಾಡಗ ಮಟಕೆರೆಯ ಗಿರಿಜನ ಆಶ್ರಮ ಶಾಲೆಯಲ್ಲಿ ವಾಸ್ತವ್ಯ ಹೂಡಲು ಸಿದ್ಧತೆ ನಡೆದಿತ್ತು. ಶಾಸಕ ಅನಿಲ್ ಚಿಕ್ಕಮಾದು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ್ದೇ ಅಲ್ಲದೆಗ್ರಾಮದಲ್ಲಿಯೇ ವಾಸ್ತವ್ಯ ಹೂಡಲು ನಿರ್ಧರಿಸಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ನರಗುಂದ, ಇಒ ಗಳಾದ ರಾಮ ಲಿಂಗಯ್ಯ, ಸಮಾಜ ಕಲ್ಯಾಣಾಧಿಕಾರಿ ರಾಮ ಸ್ವಾಮಿ, ಗಿರಿಜನ ಅಭಿವೃದ್ಧಿ ಇಲಾಖಾಧಿಕಾರಿ ಚಂದ್ರಪ್ಪ,ಸಿದ್ದು, ಸಿಡಿಪಿಒ ಆಶಾ, ಸರ್ಕಲ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ತಾ. ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.