Advertisement

ಕಾಂಗ್ರೆಸ್ ನಾಯಕರು 19 ಟಿಎಂಸಿ ನೀರಿಗೆ ಹೋರಾಡುವವರು: ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

01:30 PM Jan 09, 2022 | Suhan S |

ಮುದ್ದೇಬಿಹಾಳ: ಕಾವೇರಿ ಕೊಳ್ಳದ ಮೇಕೆದಾಟು ಯೋಜನೆಯ 19 ಟಿಎಂಸಿ ನೀರಿಗೋಸ್ಕರ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರ ನಡೆಗೆ ಬಿಜೆಪಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಲೇವಡಿ ಮಾಡಿದ್ದಾರೆ.

Advertisement

ಮುದ್ದೇಬಿಹಾಳದ ದಾಸೋಹ ನಿಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಬರುವ 911 ಟಿಎಂಸಿ ನೀರನ್ನು ಬಳಸಿಕೊಳ್ಳಲು ಉತ್ತರ ಕರ್ನಾಟಕದ ಜನತೆಗೆ ಕಾನೂನು ಬದ್ಧವಾಗದಾವಕಾಶವನ್ನು ನ್ಯಾಯಾಲಯ ದೊರಕಿಸಿಕೊಟ್ಟಿದೆ. ಇದರಲ್ಲಿ ಪ್ರತಿ ವರ್ಷ 442 ಟಿಎಂಸಿ ನೀರು ವ್ಯರ್ಥವಾಗಿ ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿದೆ. ಇಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರಿನ ಬಗ್ಗೆ ಕೇಳುವ ಗಂಡು ಮಕ್ಕಳು ಇಲ್ಲವಲ್ಲ ಅನ್ನೋ ನೋವು ನಮಗೆಲ್ಲರಿಗೂ ಇದೆ. ಆದರೆ ವಿರೋಧ ಪಕ್ಷ ಕಾಂಗ್ರೆಸ್ಸಿನ ನಾಯಕರು 19 ಟಿಎಂಸಿ ನೀರಿಗಾಗಿ ಪಾದಯಾತ್ರೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಕೃಷ್ಣೆಯ 270 ಟಿಎಂಸಿ ನೀರನ್ನು ಬಳಸಿಕೊಳ್ಳಲು ನಮಗೆ ಅವಕಾಶ ಇದೆ. ಉಕದಲ್ಲಿ ಕೃಷ್ಣಾ ಜಲಾನಯನ ವ್ಯಾಪ್ತಿಯಲ್ಲಿರುವ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಭೀಮೆ, ಕೃಷ್ಣಾ ನದಿಯ 911 ಟಿಎಂಸಿ ನೀರನ್ನು ಕಾನೂನು ಬದ್ಧವಾಗಿ ನ್ಯಾಯಾಲಯ ನಮಗೆ ಕೊಟ್ಟಿದೆ. ಆದರೆ ಈ ನೀರನ್ನು ಬಳಸಿಕೊಳ್ಳದೆ ಪ್ರತಿ ವರ್ಷ ಆಂಧ್ರಕ್ಕೆ ಹರಿದು ಹೋಗುವ 442 ಟಿಎಂಸಿ ನೀರಿನ ಬಗ್ಗೆ ಇಲ್ಲಿ ಯಾರೋ ಕೇಳೂರು ಇಲ್ಲದಂತಾಗಿದೆ. ನಮ್ಮ ಹಕ್ಕು ಪಡೆಯಲು ನಾವು ಹೋರಾಡಿದ್ದರೆ ನಮ್ಮ ಏರಿಯಾ ಯಾವತ್ತೋ ಪಂಜಾಬ್ ಆಗುತ್ತಿತ್ತು, ನಮ್ಮ ಹೊಲಗಳಿಗೆ ಯಾವತ್ತೋ ನೀರು ಬರುತ್ತಿತ್ತು. ಆದರೆ ನಮ್ಮನ್ಯಾರೂ ಕೇಳೋರಿಲ್ಲ. ನಮ್ಮ ಜನಾನೂ ಅಷ್ಟೇ 5 ವರ್ಷಕ್ಕೊಮ್ಮೆ ನಾವು ಕೈಮುಗಿದರೆ ಓಟು ಹಾಕಿ ಕಳಿಸುತ್ತಾರೆ. ನೂರಕ್ಕೆ ಶೇ.75ರಷ್ಟು ಸರ್ಕಾರಿ ನೌಕರರಿಗಳು ಮೈಸೂರು, ಬೆಂಗಳೂರು ಭಾಗದವರಿಗೆ ಸಿಗುತ್ತವೆ. ಇದಕ್ಕೆ ಅಲ್ಲಿರುವ ರಾಜಕೀಯ ಇನಫ್ಲುಯೆನ್ಸ್, ಅಲ್ಲಿರುವ ಸೌಲತ್ತುಗಳು ಕಾರಣ. ಇವೆಲ್ಲ ನಮ್ಮಲ್ಲಿ ಇಲ್ಲದೆ ಇರುವಂಥ ಸ್ಥಿತಿ ಇದೆ. ವಿಧಾನಸಭೆ ಅಧಿವೇಶನದಲ್ಲಿ ಇದೇ ಮಾತು ಹೇಳಿದ್ದೇನೆ. ನನ್ನ ಜನರಿಗೆ ನ್ಯಾಯ ಸಿಗಬೇಕು. ಅದನ್ನು ಕೇಳುವ ಮತ್ತು ಉತ್ತರ ಕರ್ನಾಟಕದ ನಾಡಿನ ಜನತೆಗೆ ಎಲ್ಲದರಲ್ಲೂ ಸಮಪಾಲು, ಸಮಬಾಳು ತರತಕ್ಕಂಥ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next