Advertisement
ತಾಲೂಕಿನ ಜ್ಯೋಗಿಪಾಳ್ಯದಲ್ಲಿ ಟೊಯೊಟಾ ಅಂಗ ಸಂಸ್ಥೆ ಬೊಸ್ಕೋ ಆಟೋಮ್ಯಾಟಿವ್ ಇಂಡಿಯಾ ಲಿ.ನಿಂದ 12 ಲಕ್ಷ ರೂ.ನಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಸಭೆ ಕರೆಯುತ್ತೇನೆ, ದರ ನಿಗದಿಯಾಗುತ್ತದೆ, ನೀವು ಒಪ್ಪಿದರೆ ಕೆಐಎಡಿಬಿಗೆ ಕೊಡಬಹುದು. ಇಲ್ಲದಿದ್ದರೆ ವಜಾ ಆಗುತ್ತದೆ ಎಂದು ಹೇಳಿದ್ದೇನೆ. ಹೋರಾಟಗಾರರೇ ಸರಿಯಾದ ದರ ಕೊಟ್ಟರೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಸದನ ನಡೆಯುತ್ತಿದೆ. ಮುಗಿದ ಕೂಡಲೇ ಇನ್ನು 15 ದಿನದಲ್ಲಿ ಸಭೆ ಕರೆಯಲು ತಿಳಿಸುತ್ತೇನೆ ಎಂದು ಹೇಳಿದರು.
Related Articles
Advertisement
5 ಕೋಟಿ ರೂ. ಕಾಮಗಾರಿಗೆ ಚಾಲನೆ: ಮಾಗಡಿ ತಾಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 5 ಕೋಟಿ ರೂ.ನ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಿ ಚಾಲನೆ ನೀಡಿದ್ದೇನೆ ಎಂದು ತಿಳಿಸಿದ ಶಾಸಕ ಎ.ಮಂಜುನಾಥ್ ಅವರು, ನಾನು ಚುನಾವಣೆ ಸ್ಪರ್ಧಿಸಿದ್ದ ವೇಳೆ ಆ ವ್ಯಾಪ್ತಿಗೆ ಮತ ಕೇಳಲು ಪ್ರಚಾರಕ್ಕೆ ಹೋಗಲೇ ಇಲ್ಲ, ನನ್ನ ಪತ್ನಿ ಲಕ್ಷ್ಮೀ ಅವರು ಮುಖಂಡರು, ಕಾರ್ಯಕರ್ತರೊಂದಿಗೆ ಪ್ರಚಾರ ಮಾಡಿದ್ದರು. ಆ ಭಾಗದ ಜನರು ನನಗೆ ಹೆಚ್ಚಿನ ಮತ ಕೊಟ್ಟು ಗೆಲ್ಲಿಸಿದ್ದಾರೆ. ಅವರ ಋಣ ನನ್ನ ಮೇಲಿದೆ. ಆ ಭಾಗದಲ್ಲಿ 5 ಕೋಟಿ ರೂ.ಗೂ ಹೆಚ್ಚು ಅನುದಾನ ತಂದು ತಗಚಕುಪ್ಪೆ, ಭೋಗನಪಾಳ್ಯ, ದೊಡ್ಡ ಮಸ್ಕಲ್, ಭೈರೇಗೌಡನಪಾಳ್ಯ, ರಾಮಯ್ಯಪಾಳ್ಯ, ಗುಡ್ಡಯ್ಯಪಾಳ್ಯ, ವರದೇನಹಳ್ಳಿ, ಸಿಂಗದಾಸನಹಳ್ಳಿ ಗ್ರಾಮಗಳ ಸಂಪೂರ್ಣ ಕಾಂಕ್ರೀಟ್ ರಸ್ತೆ, ಚರಂಡಿ, ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿ ದ್ದೇನೆ. ಎಲ್ಲರೂ ಸಹಕರಿಸುವಂತೆ ಶಾಸಕರು ಮನವಿ ಮಾಡಿದರು.
ಜೆಡಿಎಸ್ ಯುವ ಮುಖಂಡ ದವಳಗಿರಿ ಚಂದ್ರಣ್ಣ, ಪಂಚೆ ರಾಮಣ್ಣ, ಹನುಮಾಪುರದ ಚಿಕ್ಕಣ್ಣ, ರಂಗಸ್ವಾಮಿ, ರಂಗ ನಾಥ್, ವೆಂಕಟೇಶ್, ಬಸವರಾಜು, ಹನುಮಾ ನಾಯಕ್, ಕಂಬಯ್ಯ, ಮರಲಗೊಂಡಲದ ಪಾರ್ವತಮ್ಮ, ರಂಗೇಗೌಡ, ಜ್ಯೋತಿಪಾಳ್ಯದ ರಾಮಣ್ಣ, ರಾಜಣ್ಣ, ಪೋಲೋಹಳ್ಳಿ ಕೆಂಚಪ್ಪ, ಬುಡ್ಡಯ್ಯ, ಯುವಜೆಡಿಎಸ್ ಅಧ್ಯಕ್ಷ ವಿಜಯ ಕುಮಾರ್, ರಾಜು, ಶಿವಣ್ಣ ಇದ್ದರು.