ಚೆನ್ನೈ: ಡಿಎಂಕೆ ಪಕ್ಷದ ಹಿರಿಯ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮತ್ತೆ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ಇಂದು ನಡೆದ ಪಕ್ಷದ ಸಭೆಯಲ್ಲಿ ಅವರ ಆಯ್ಕೆ ನಡೆದಿದೆ.
ಹೊಸದಾಗಿ ರಚನೆಯಾದ ಜನರಲ್ ಕೌನ್ಸಿಲ್ ನ ಸಭೆಯಲ್ಲಿ, ಪಕ್ಷದ ಉನ್ನತ ಹುದ್ದೆಗೆ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಡಿಎಂಕೆ ಘೋಷಿಸಿತು.
ಹಿರಿಯ ನಾಯಕರಾದ ದುರೈಮುರುಗನ್ ಮತ್ತು ಟಿ ಆರ್ ಬಾಲು ಅವರು ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂವರು ನಾಯಕರು ಸತತ ಎರಡನೇ ಬಾರಿಗೆ ಈ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಮುಲಾಯಂ ಸಿಂಗ್ ಯಾದವ್ ಸ್ಥಿತಿ ಗಂಭೀರ; ಮುಂದುವರಿದ ಚಿಕಿತ್ಸೆ
ಡಿಎಂಕೆಯ 15 ನೇ ಸಾಂಸ್ಥಿಕ ಚುನಾವಣೆಯ ಭಾಗವಾಗಿ, ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಗಳನ್ನು ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಪಕ್ಷದ ಹುದ್ದೆಗಳಿಗೆ ಚುನಾವಣೆಗಳ ನಂತರ ಆಯ್ಕೆ ಮಾಡಲಾಯಿತು. 2018ರಲ್ಲಿ ಪಕ್ಷದ ಮುಖ್ಯಸ್ಥರಾಗಿದ್ದ ಕರುಣಾನಿಧಿಯವರ ನಿಧನದ ಬಳಿಕ ಸ್ಟಾಲಿನ್ ಅಧ್ಯಕ್ಷ ಸ್ಥಾನಕ್ಕೇರಿದ್ದರು.