Advertisement

M k ಸ್ಟಾಲಿನ್‌ ಡಿಎಂಕೆ ಅಧ್ಯಕ್ಷ; ಸಹೋದರ ಅಳಗಿರಿಯಿಂದ ಬೆದರಿಕೆ

11:33 AM Aug 28, 2018 | Team Udayavani |

ಚೆನ್ನೈ : ಎಂ ಕೆ ಸ್ಟಾಲಿನ್‌ ಅವರನ್ನು ಇಂದು ಇಲ್ಲಿನ ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಪಕ್ಷದ ಅಧ್ಯಕ್ಷರನ್ನಾಗಿ ಚುನಾಯಿಸಲಾಗಿದೆ. ಪಕ್ಷದ ಮೇಲೆ ಪಾರಮ್ಯ ಸಾಧಿಸಲು ಯತ್ನಿಸುತ್ತಿದ್ದ ಸ್ಟಾಲಿನ್‌ ಸಹೋದರ ಎಂ ಕೆ ಅಳಗಿರಿ ಅವರು ಈ ಸಂದರ್ಭದಲ್ಲಿ ಸ್ಟಾಲಿನ್‌ಗೆ ಬೆದರಿಕೆ ಹಾಕಿದ್ದಾರೆ. 

Advertisement

ಪಕ್ಷದ ಕಾರ್ಯಾಲಯದಲ್ಲಿ ಇಂದು ನಡೆದ ಜನರಲ್‌ ಕೌನ್ಸಿಲ್‌ ಸಭೆಯಲ್ಲಿ ಸ್ಟಾಲಿನ್‌ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು. 

ಸ್ಟಾಲಿನ್‌ ಅವರ ಏಕೈಕ ನಾಮಪತ್ರವನ್ನು ಪಕ್ಷದ ಎಲ್ಲ 65 ಜಿಲ್ಲಾ ಕಾರ್ಯದರ್ಶಿಗಳು ಸರ್ವಾನುಮತದಿಂದ ಅನುಮೋದಿಸಿ ಅವರನ್ನು ಪಕ್ಷಾಧ್ಯಕ್ಷರನ್ನಾಗಿ ಚುನಾಯಿಸಿದರು. ಸ್ಟಾಲಿನ್‌ ಅವರು ಡಿಎಂಕೆ ಪಕ್ಷದ ಎರಡನೇ ಅಧ್ಯಕ್ಷರಾಗಿದ್ದಾರೆ. 

ಸ್ಟಾಲಿನ್‌ ಅವರ ತಂದೆ, ದಿವಂತಗ ಕರುಣಾನಿಧಿ ಅವರು 49 ವರ್ಷಗಳ ದೀರ್ಘ‌ ಕಾಲ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದರು. ಸ್ಟಾಲಿನ್‌ ಅವರು ಕಳೆದ ಆ.26ರಂದು ಪಕ್ಷಾಧ್ಯಕ್ಷ ಪದಕ್ಕೆ ನಾಮಪತ್ರ ಸಲ್ಲಿಸಿದ್ದರು. 

ಕರುಣಾನಿಧಿ ಅವರ ಅನಾರೋಗ್ಯದ ಕಾರಣ ಸ್ಟಾಲಿನ್‌ ಅವರು 2017ರ ಜನವರಿಯಿಂದ ಪಕ್ಷದ ಕಾರ್ಯಾಧ್ಯಕ್ಷರಾಗಿ ದುಡಿಯುತ್ತಿದ್ದರು. 

Advertisement

ಪಕ್ಷದೊಳಗೆ ಎಂಟ್ರಿ ಪಡೆಯಲು ಇನ್ನಿಲ್ಲದ ರೀತಿಯಲ್ಲಿ ಹವಣಿಸುತ್ತಿದ್ದ ಸ್ಟಾಲಿನ್‌ ಸಹೋದರ ಎಂ ಕೆ ಅಳಗಿರಿ ಅವರು ಸ್ಟಾಲಿನ್‌ಗೆ ಈ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದಾರೆ. ಅಳಗಿರಿ ಅವರು ಮಾಜಿ ಡಿಎಂಕೆ ಸಚಿವರಾಗಿದ್ದು 2014ರಲ್ಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕರುಣಾನಿಧಿ ಅವರು ಉಚ್ಚಾಟಿಸಿದ್ದರು. ಕರುಣಾನಿಧಿ ಅವರು ಪುತ್ರ ಸ್ಟಾಲಿನ್‌ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನಾಗಿ ಅದಾಗಲೇ ಹೆಸರಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next